Advertisment

ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ; ಗ್ಲೌಸ್ ಎಸೆದು ಸಂಚಲನ.. ಟೆಸ್ಟ್​ಗೆ ಗುಡ್​​ಬೈ..?

author-image
Ganesh
Updated On
ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ; ಗ್ಲೌಸ್ ಎಸೆದು ಸಂಚಲನ.. ಟೆಸ್ಟ್​ಗೆ ಗುಡ್​​ಬೈ..?
Advertisment
  • ರೋಹಿತ್ ಶರ್ಮಾ ನಡೆ ಭಾರೀ ಸಂಚಲನ
  • ಆಸಿಸ್ ವಿರುದ್ಧದ ಟೆಸ್ಟ್​ನಲ್ಲಿ ಸತತ ವೈಫಲ್ಯ
  • ಟೆಸ್ಟ್​ಗೆ ಗುಡ್​ಬೈ ಹೇಳ್ತಿದ್ದಾರಾ ಕ್ಯಾಪ್ಟನ್..?

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಿರುವ ರೋಹಿತ್, ತಂಡವನ್ನು ಕಠಿಣ ಪರಿಸ್ಥಿತಿಯಿಂದ ಪಾರುಮಾಡುವಲ್ಲಿ ವಿಫಲರಾದರು.

Advertisment

ಅಲ್ಪ ರನ್​ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ತಲುಪಿದರು. ಬಳಿಕ ಹೊರಬಂದ ಫೋಟೋವೊಂದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸುತ್ತಿದೆ. ಈ ಫೋಟೋ ವೈರಲ್ ಬೆನ್ನಲ್ಲೇ ನಿವೃತ್ತಿ ಬಗ್ಗೆ ಚರ್ಚೆ ಜೋರಾಗಿದೆ.

ಇದನ್ನೂ ಓದಿ:IND vs AUS; ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ನೆರವಾದ ಕನ್ನಡಿಗ KL ರಾಹುಲ್​, ಜಡೇಜಾ

ಕೈಗವಸು ಎಸೆದ ರೋಹಿತ್
ಗಬ್ಬಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 27 ಎಸೆತಗಳಲ್ಲಿ 10 ರನ್ ಗಳಿಸಿದರು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿದರು. ಪೆವಿಲಿಯನ್ ಕಡೆಗೆ ಮುಖ ಮಾಡಿದ ರೋಹಿತ್ ತಮ್ಮ ಕೈಗವಸುಗಳನ್ನು ತೆಗೆದು ಡಗೌಟ್​ನಲ್ಲಿ ಎಸೆದರು. ಎರಡೂ ಗ್ಲೌಸ್​ಗಳು ಬುಲೆಟಿನ್ ಬೋರ್ಡ್‌ನ ಹಿಂದೆ ಬಿದ್ದಿವೆ. ಇದರೊಂದಿಗೆ ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಬಹುದು ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.

Advertisment

ಇದನ್ನೂ ಓದಿ:ಜೈಲಿಂದ ರಿಲೀಸ್ ಆದ್ರೂ ತಪ್ಪದ ಸಂಕಷ್ಟ.. RR ನಗರದ ಮನೆಗೆ ಹೋಗದ ಪವಿತ್ರಾ; ವಕೀಲರು ಹೇಳಿದ್ದೇನು?


?ref_src=twsrc%5Etfw">December 17, 2024

Advertisment

https://twitter.com/rajasthaniman1/status/1868866547105886533


?ref_src=twsrc%5Etfw">December 17, 2024

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment