newsfirstkannada.com

ಒಂದೇ ಮನೆಯಲ್ಲಿ ನಾಲ್ವರ ಹತ್ಯೆ ಕೇಸ್‌.. ಪೊಲೀಸರ ಪಕ್ಕದಲ್ಲೇ ಇದ್ದ ಸುಪಾರಿ ಕಿಲ್ಲರ್‌; ಅರೆಸ್ಟ್​ ಆಗಿದ್ದೇ ರೋಚಕ!

Share :

Published April 22, 2024 at 5:56pm

Update April 22, 2024 at 5:55pm

    4 ಜನರನ್ನು ಕೊಲೆ ಮಾಡಿಸಲು 65 ಲಕ್ಷ ರೂಪಾಯಿ ಡೀಲ್ ಮಾಡಿದ್ದ ದೊಡ್ಡ ಮಗ

    ಒಟ್ಟು 8 ಆರೋಪಿಗಳನ್ನು ಭೇದಿಸುವಲ್ಲಿ ಕೊನೆಗೂ ಯಶಸ್ವಿಯಾದ ಪೊಲೀಸರು

    ಬಾಕಳೆ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲು ಹಿರಿಯ ಮಗನೇ ಮುಖ್ಯ ಆರೋಪಿ

ಗದಗ: ಒಂದೇ ಕುಟುಂಬದ ನಾಲ್ವರನ್ನು ಬರ್ಬರ ಕೊಲೆ ಕೇಸ್​ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್​​ನ ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಗದಗಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಕೋಣೆಯಲ್ಲಿ ಮಲಗಿಕೊಂಡಿದ್ದ ಪತಿ, ಪತ್ನಿ, ಮಗಳು ಹಾಗೂ ಪುತ್ರನನ್ನು ಬರ್ಬರವಾಗಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್​ ಆಗಿದ್ದರು. ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷ (16) ಕೊಲೆಯಾದ ದುರ್ದೈವಿಗಳು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್.. ತನಿಖೆಯಲ್ಲಿ ಅಸಲಿ ಕಾರಣ ಬಹಿರಂಗ; ಸತ್ಯ ಗೊತ್ತಾದ್ರೆ ಶಾಕ್ ಆಗ್ತೀರಾ!

ಆದರೆ ಈ ನಾಲ್ವರ ಕೊಲೆ ಕೇಸ್​ ಸಂಬಂಧ ಪೊಲೀಸ್​ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಮೃತ ಕುಟುಂಬಸ್ಥರ ಬಳಿ ಈ ಕೇಸ್​ ಸಂಬಂಧ ಮಾಹಿತಿಯನ್ನು ಕಲೆ ಹಾಕಿದ್ದರು. ಆದರೆ ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರ ಬಗ್ಗೆ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ. ಆದರೆ ಈ ಕೊಲೆಗೆ ಸುಪಾರಿ ಡೀಲ್​ ಮಾಡಿದ್ದ ಮುಖ್ಯ ಆರೋಪಿ ಪೊಲೀಸ್​ ಅಧಿಕಾರಿಗಳ ಮುಂದೆಯೇ ನಿಂತುಕೊಂಡು ಅಬ್ಸರ್ವ್ ಮಾಡುತ್ತಿದ್ದ. ಇನ್ನು, ದುಷ್ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರಗಳು, ಚಿನ್ನದ ಬಳೆಗಳು ಜೊತೆಗೆ ಎರಡು ಶೂಗಳು ಪತ್ತೆಯಾಗಿದ್ದವು. ಇನ್ನು, ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದ ಪೊಲೀಸ್​ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ ಬಳಿಕ ಆರೋಪಿಗಳನ್ನು ಸಿಕ್ಕಿಹಾಕಿಕೊಂಡಿದ್ದಾರೆ.

ಒಟ್ಟು 8 ಆರೋಪಿಗಳನ್ನು ಭೇದಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ವಲಯ ಐಜಿಪಿ ವಿಕಾಸ್ ಕುಮಾರ್ ಅವರು. 8 ಮಂದಿ ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸಿದ್ದೇವೆ. ಪ್ರಕಾಶ್ ಬಾಕಳೆ ಹಿರಿಯ ಮಗ ವಿನಾಯಕ್ ಬಾಕಳೆ (31) ಅವರು ಈ ಕೇಸ್​ನಲ್ಲಿ ಪ್ರಮುಖ ಆರೋಪಿ. ಇತರ ಆರೋಪಿಗಳಾದ ಫೈರೋಜ್ ಖಾಜಿ (29) , ಜಿಶಾನ್ ಖಾಜಿ (24), ಮೀರಜ್​ ಮೂಲದ ಸಾಹಿಲ್(19), ಸೋಹೆಲ್ ಖಾಜಿ (19), ಸುಲ್ತಾನ್ ಶೇಖ್ (23) , ಮಹೇಶ್ ಸಾಳೋಂಕೆ (21) , ವಾಹಿದ್ ಬೇಪಾರಿ (21) ಬಂಧಿತ ಆರೋಪಿಗಳು.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ನಾಲ್ವರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕಿಟಕಿಯಿಂದ ಬಂದ ಹಂತಕರು; ಆಮೇಲೇನಾಯ್ತು?

ಇನ್ನು, ಮೃತ ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ ಈ ಕೇಸ್​ನ ಮುಖ್ಯ ಆರೋಪಿಯಾಗಿದ್ದಾನೆ. ಆರೋಪಿ ವಿನಾಯಕ್ ಬಾಕಳೆ ಮತ್ತೊಬ್ಬ ಆರೋಪಿ ಫೈರೋಜ್​ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಡೀಲ್​ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ್ ಬಾಕಳೆ ತಂದೆ ಪ್ರಕಾಶ್ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ್ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೇ, ಮಹಾರಾಷ್ಟ್ರ ಮೂಲದ ಫಯಾಜ್ ಆ್ಯಂಡ್ ಗ್ಯಾಂಗ್​ಗೆ ಮುಂಗಡವಾಗಿ 2 ಲಕ್ಷ ರೂಪಾಯಿ ನೀಡಿದ್ದನಂತೆ. ಈ ಕೊಲೆಗೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು, ಈ ಕೊಲೆ ಕೇಸ್​ ಬಗ್ಗೆ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಕೊಲೆ ಪ್ರಕರಣ ಬೇದಿಸಿದ್ದಕ್ಕೆ ಡಿಜಿ, ಐಜಿಪಿ ವಿಕಾಸ್ ಕುಮಾರ್ ಶ್ಲಾಘನೆ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಮನೆಯಲ್ಲಿ ನಾಲ್ವರ ಹತ್ಯೆ ಕೇಸ್‌.. ಪೊಲೀಸರ ಪಕ್ಕದಲ್ಲೇ ಇದ್ದ ಸುಪಾರಿ ಕಿಲ್ಲರ್‌; ಅರೆಸ್ಟ್​ ಆಗಿದ್ದೇ ರೋಚಕ!

https://newsfirstlive.com/wp-content/uploads/2024/04/gadag7.jpg

Load More