ತವರು ಮನೆಗೆ ಹೋದ ಹೆಂಡತಿ ವಾಪಸ್‌ ಬರಲೇ ಇಲ್ಲ.. ಬಾಮೈದರ ಹೆಸರು ಬರೆದು ಪ್ರಾಣ ಬಿಟ್ಟ ಗಂಡ

author-image
Bheemappa
Updated On
ತವರು ಮನೆಗೆ ಹೋದ ಹೆಂಡತಿ ವಾಪಸ್‌ ಬರಲೇ ಇಲ್ಲ.. ಬಾಮೈದರ ಹೆಸರು ಬರೆದು ಪ್ರಾಣ ಬಿಟ್ಟ ಗಂಡ
Advertisment
  • ಇಬ್ಬರು ಬಾಮೈದರ ಹೆಸರಲ್ಲಿ ಡೆತ್‌ನೋಟ್ ಬರೆದು ಪ್ರಾಣ ಬಿಟ್ಟ ಶಿಕ್ಷಕ
  • ತನ್ನ ಹೆಂಡತಿ ಜತೆ ಜಗಳ ಮಾಡುವಾಗ ಬಂದ ಸಹೋದರರು
  • ಡೆತ್​ ನೋಟ್​ನಲ್ಲಿ ಏನೇನು ಬರೆದಿದ್ದಾನೆ ಗೊತ್ತಾ ಪ್ರಾಣ ಬಿಟ್ಟ ಶಿಕ್ಷಕ?

ಗದಗ: ತನ್ನ ಹೆಂಡತಿಯನ್ನು ಆಕೆಯ ಸಹೋದರರು ತವರು ಮನೆಗೆ ಕರೆದುಕೊಂಡು ಹೋದ ಕಾರಣ ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಈ ಘಟನೆ ಗದಗ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ.

ಬಸವೇಶ್ವರ ನಗರದ ನಿವಾಸಿ ಈಶಪ್ಪ ಕಟ್ಟಿಮನಿ (40) ಆತ್ಮಹತ್ಯೆ ಮಾಡಿಕೊಂಡವರು. ಇವರು ಬಸವೇಶ್ವರ ನಗರದಲ್ಲಿ‌ನ ಸರ್ಕಾರಿ ಶಾಲೆ, ನಂ- 6ರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕ ತನ್ನ ಹೆಂಡತಿ ಜೊತೆ ಜಗಳ ಮಾಡುವಾಗ ಆಕೆಯ ಸಹೋದರರು ಮನೆಗೆ ಬಂದಿದ್ದಾರೆ. ಸಹೋದರರಾದ ಅನೀಲ ಪವಾರ ಹಾಗೂ ಬಾಮೈದ ಮಂಜುನಾಥ ಪವಾರ ನಮ್ಮ ತಂಗಿ ಜೊತೆ ಯಾಕೆ ಜಗಳ ಮಾಡುತ್ತಿಯಾ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ.

ಬಳಿಕ‌ ತಮ್ಮ ತಂಗಿಯನ್ನ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ನನಗೆ ನೋವಾಗಿದೆ. ನನ್ನ ಸಾವಿಗೆ ಇಬ್ಬರು ಬಾಮೈದರು ಕಾರಣ. ಆ ಇಬ್ಬರಿಗೆ ಕಠಿಣ‌ ಶಿಕ್ಷೆಯಾಗಲೇಬೇಕು ಎಂದು ಡೆತ್ ನೋಟ್​ನಲ್ಲಿ ಇಬ್ಬರ ಬಾಮೈದರ ಹೆಸರನ್ನ ಬರೆದಿಟ್ಟು ಶಿಕ್ಷಕ ಸೀರೆಯನ್ನು ಫ್ಯಾನ್​ಗೆ ಕಟ್ಟಿ ನೇಣು ಹಾಕಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment