Advertisment

ಮಗನ ಸಾಲಕ್ಕೆ ಹೆತ್ತಮ್ಮಗೆ ಶಿಕ್ಷೆ.. ಇಡೀ ದಿನ ಫೈನಾನ್ಸ್​ ಆಫೀಸ್​ನಲ್ಲಿ ಕೂಡಿ ಹಾಕಿ ತಾಯಿಗೆ ಕಿರುಕುಳ, ಆರೋಪ

author-image
Bheemappa
Updated On
ಮಗನ ಸಾಲಕ್ಕೆ ಹೆತ್ತಮ್ಮಗೆ ಶಿಕ್ಷೆ.. ಇಡೀ ದಿನ ಫೈನಾನ್ಸ್​ ಆಫೀಸ್​ನಲ್ಲಿ ಕೂಡಿ ಹಾಕಿ ತಾಯಿಗೆ ಕಿರುಕುಳ, ಆರೋಪ
Advertisment
  • ಕೇವಲ ಎರಡು ತಿಂಗಳಿನ ಕಂತು ಕಟ್ಟಿರಲಿಲ್ಲ, ತಾಯಿಗೆ ಕಿರುಕುಳ
  • ತಾಯಿಗೆ ಏನಾದರೂ ಆದರೆ ಬಜಾಜ್ ಫೈನಾನ್ಸ್​ ಜವಾಬ್ದಾರಿ
  • ಫೈನಾನ್ಸ್​ ಕಂಪನಿ ಫೋನ್ ಕರೆ ಸ್ವೀಕಾರ ಮಾಡುತ್ತಿರಲಿಲ್ಲ ಮಗ

ಖಾಸಗಿ ಫೈನಾನ್ಸ್ ಕಂಪನಿ ಕಾಟಕ್ಕೆ ಬಡ ತಾಯಿ ಅಕ್ಷರಶಃ ಕಂಗಾಲಾಗಿದ್ದಾರೆ. ಮಗ ಮಾಡಿದ ಸಾಲಕ್ಕೆ ಫೈನಾನ್ಸ್ ಸಿಬ್ಬಂದಿಗಳು ತಾಯಿಗೆ ಶಿಕ್ಷೆ ನೀಡಿದ್ದಾರೆ. ಇಡೀ ದಿನ ಫೈನಾನ್ಸ್ ಕಂಪನಿ ಕಚೇರಿಯಲ್ಲಿ ಕೂಡಿ ಹಾಕಿ ಕಾಟ ಕೊಟ್ಟಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisment

ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನೋ ಕೆಲವರ ಆಸೆಯೇ ಖಾಸಗಿ ಫೈನಾನ್ಸ್​ಗಳ ಪಾಲಿಗೆ ಬಂಡವಾಳ ಆಗಿಬಿಟ್ಟಿದೆ.. ಐಸ್​ ಹಚ್ಚಿ, ನೈಸ್​ ಮಾಡಿ ಕೇಳಿದಷ್ಟು ಸಾಲ ಕೋಡುವ ಫೈನಾನ್ಸ್​ಗಳು ಸಾಲ ಕಟ್ಟಿಲ್ಲ ಅಂದ್ರೆ ಸಾಲಗಾರರ ಪಾಲಿಗೆ ಶೂಲವಾಗಿ ಬಿಡುತ್ತೆ. ಸದ್ಯ ಗದಗದ ತಾಯಿ-ಮಗನ ಪಾಲಿಗೂ ಇದೆ ಸಾಲ ಶೂಲವಾಗಿ ಪರಿಣಮಿಸಿದೆ.

publive-image

ಮಗ ಸಾಲ ಕಟ್ಟದಿದ್ದಕ್ಕೆ ತಾಯಿಗೆ ಕಿರುಕುಳ ಆರೋಪ

ಗದಗ ನಗರದ ಬಜಾಜ್ ಫೈನಾನ್ಸ್ ಕಂಪನಿ ಕಚೇರಿಯಲ್ಲಿ ಪುತ್ರ ಮಾಡಿದ ಸಾಲಕ್ಕೆ ತಾಯಿಗೆ ಫೈನಾನ್ಸ್ ಕಂಪನಿ ಸಿಬ್ಬಂದಿಗಳು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಗಂಗವ್ವ ಎಂಬಾಕೆಯ ಪುತ್ರ ಹೂವಯ್ಯ 2021ರಲ್ಲಿ ಅಕ್ಕನ ಮದುವೆ ಹಾಗೂ ತಾಯಿಯ ಅನಾರೋಗ್ಯದ ಕಾರಣದಿಂದ ಗದಗ ನಗರದ ಬಜಾಜ್ ಫೈನಾನ್ಸ್​ನಲ್ಲಿ ₹1.30 ಲಕ್ಷ ಸಾಲ ಪಡೆದಿದ್ದ. ಪಡೆದ ಸಾಲಕ್ಕೆ 2021ರಿಂದ ಪ್ರತಿ ತಿಂಗಳು ಸರಿಯಾಗಿ ಕಂತು ಪಾವತಿ ಮಾಡುತ್ತಿದ್ದ. ಆದ್ರೆ ಕಳೆದ ಎರಡು ತಿಂಗಳಿಂದ ಕಂತು ಬಾಕಿ ಉಳಿದಿತ್ತು, ಹೂವಯ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆರ್ಥಿಕ ಸಮಸ್ಯೆಯಿಂದ ಸಾಲ ಕಟ್ಟಿರಲಿಲ್ಲ. ಹೀಗಾಗಿ ಫೈನಾನ್ಸ್​ ಕಂಪನಿಯ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದ ಫೈನಾನ್ಸ್​ ಕಂಪನಿ ಸಿಬ್ಬಂದಿ ಆತನ ತಾಯಿಗೆ ಟಾರ್ಚರ್​ ಕೊಟ್ಟಿದ್ದಾರೆ ಎನ್ನಲಾಗಿದೆ.

ಮಗ ಮಾಡಿದ ಸಾಲಕ್ಕೆ ಹೂವಯ್ಯನ ತಾಯಿ ಗಂಗವ್ವಳನ್ನ ಕಚೇರಿಗೆ ಕರ್ಕೊಂಡು ಬಂದು ಇಡೀ ದಿನ ಕೂರಿಸಿಕೊಂಡಿದ್ದಾರೆ. ನನನ್ನ ಬಿಡಿ ಕೆಲಸ ಮಾಡಿ ನಿಮ್ಮ ಸಾಲ ತೀರಿಸ್ತೀನಿ ಅಂದರು ಕೇಳದ ಸಿಬ್ಬಂದಿ ಇಡೀ ದಿನ ಕೂಡಿ ಹಾಕಿ ಅಮಾನವೀಯಾವಾಗಿ ವರ್ತಿಸಿದ್ದಾರೆ.

Advertisment

ಬೇರೆ ಕಡೆ ಸಾಲ ಮಾಡಿ ನಿಮಗೆ ಕಟ್ಟುತ್ತೇನೆ ಎಂದರೂ ಭರವಸೆ ಇಲ್ಲ. ಎರಡು ದಿನ ನಿಲ್ಲಿ ಎಂದರೂ ಬಿಡುತ್ತಿಲ್ಲ. ನಿಮಗೆ ಹೇಳಿ ಹೇಳಿ ಸಾಕಾಗಿದೆ, ಮಗ ಫೋನ್ ತೆಗೆಯುತ್ತಿಲ್ಲ. ತಾಯಿನಾ ಹಿಡಿದು ಕೂರಸಿದರೆ ಮಗ ಬರ್ತಾನಾ ಎಂದು ನನ್ನ ಬೆಳಗ್ಗೆ ಕರೆದುಕೊಂಡು ಹೋಗಿದ್ದಾರೆ.

ಗಂಗವ್ವ, ಹೂವಯ್ಯ ತಾಯಿ

ಫೈನಾನ್ಸ್​ ಸಿಬ್ಬಂದಿ ನಡೆಗೆ ಸ್ಥಳೀಯರ ಆಕ್ರೋಶ!

ಗಂಗವ್ವಳನ್ನ ಕೂಡಿ ಹಾಕಿ ಫೈನಾನ್ಸ್​ ಸಿಬ್ಬಂದಿ ಕಿರುಕುಳ ನೀಡಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಫೈನಾನ್ಸ್​ ಕಂಪನಿ ವಿರುದ್ಧ ಕೆಂಡವಾಗಿದ್ದಾರೆ. ಫೈನಾನ್ಸ್ ಕಚೇರಿಗೆ ನುಗ್ಗಿ ಸಿಬ್ಬಂದಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಗಂಗವ್ವಳನ್ನು ಬಿಡಿಸಿದ್ದಾರೆ. ಫೈನಾನ್ಸ್​ ಕಚೇರಿಯಿಂದ ಹೊರ ಬಂದ ಬಳಿಕ ನಾಪತ್ತೆ ಆಗಿದ್ದ ಗಂಗವ್ವ ಮಗ ಮನೆಗೆ ಬಂದ ಬಳಿಕ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: Gold Case; ಅಗ್ರಹಾರ ಜೈಲು ಸೇರಿದ ಐಶ್ವರ್ಯ.. ಟೋಪಿ ಹಾಕಿದ್ದ ನಟ ಧರ್ಮೇಂದ್ರ ನಾಪತ್ತೆ

Advertisment

publive-image

ಗಂಗವ್ವಗೆ ಆರೋಗ್ಯ ಗುಣಮಟ್ಟ ಸರಿಯಿಲ್ಲ, ಅವರಿಗೆ ವಯಸ್ಸಾಗಿದೆ ಏನಾದರೂ ಆದರೆ, ಏನಾದರೂ ಮಾಡಿಕೊಂಡರೆ, ಜೀವಕ್ಕೆ ತೊಂದರೆ ಆದರೆ, ಇದಕ್ಕೆ ಸಂಪೂರ್ಣ ಜವಾಬ್ದಾರಿ ಬಜಾಜ್ ಫೈನಾನ್ಸ್ ಮತ್ತು ಸಿಬ್ಬಂದಿವರ್ಗದವರದ್ದು ಆಗಿದೆ. ಕೇವಲ ಪಾನ್ ಕಾರ್ಡ್ ಇದ್ದರೇ ಸಾಲ ಕೊಡುತ್ತಾರೆ. ಸಾಲ ಕೊಟ್ಟಾಗ ಒಂದು ರೀತಿ ಇರುತ್ತಾರೆ, ಆ ಮೇಲೆ ಇನ್ನೊಂದು ರೀತಿ ಇರುತ್ತಾರೆ.

ಆಂಜನೇಯ, ಸ್ಥಳೀಯರು

ಆರ್​​ಬಿಐ ನಿಯಮದ ಪ್ರಕಾರ ಸಾಲದ ಕಂತು ಬಾಕಿ ಉಳಿದ್ರೆ ಮೊದಲು ನೋಟಿಸ್ ನೀಡಬೇಕು. ನೋಟಿಸ್​ಗೆ ಉತ್ತರ ಬರದಿದ್ರೆ ಮುಂದಿನ ಕ್ರಮ ಕೈಗೊಳ್ಳಬೇಕು. ಹೀಗೆ ಹದ್ದುಮೀರಿ ವರ್ತಿಸುತ್ತಿರೋ ಫೈನಾನ್ಸ್​​ ವಿರುದ್ಧ ಸೂಕ್ತ ಕಾನೂನು ಕ್ರಮ ಜಾರಿಯಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment