ಮದುವೆ ಆಗೋಕೆ ಸರ್ಕಾರಿ ಕೆಲಸದ ಡಿಮ್ಯಾಂಡ್.. 3 ಕೋಟಿ ದುಡ್ಡು ಇಲ್ಲ, ಹೆಂಡ್ತಿನೂ ಸಿಗ್ತಿಲ್ಲ! ಅಸಲಿಗೆ ಆಗಿದ್ದೇನು?

author-image
admin
Updated On
ಮದುವೆ ಆಗೋಕೆ ಸರ್ಕಾರಿ ಕೆಲಸದ ಡಿಮ್ಯಾಂಡ್.. 3 ಕೋಟಿ ದುಡ್ಡು ಇಲ್ಲ, ಹೆಂಡ್ತಿನೂ ಸಿಗ್ತಿಲ್ಲ! ಅಸಲಿಗೆ ಆಗಿದ್ದೇನು?
Advertisment
  • ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ..
  • ಸರ್ಕಾರಿ ಕೆಲಸ ಇದ್ರೆ ಮದುವೆ ಮಾಡಿಸೋದಾಗಿ ನಂಬಿಸಿದ್ದರು
  • ಸರ್ಕಾರಿ ನೌಕರಿ ಕೊಡಿಸಲು ಲಕ್ಷಾಂತರ ರೂ. ಹಣಕ್ಕೆ ಡಿಮ್ಯಾಂಡ್

ಗದಗ: ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ.. ಈ ಹಾಡನ್ನು ಪದೇ ಪದೆ ನೆನಪಿಸಿಕೊಳ್ಳಬೇಕಿದೆ. ಯಾಕಂದ್ರೆ ಮದುವೆ ಆಗಬೇಕು ಅನ್ನೋ ಮಹದಾಸೆಗೆ ಬಿದ್ದ ಯುವಕರು ಇನ್ನೂ ತಮ್ಮ ಬಾಳ ಸಂಗಾತಿಯನ್ನು ಹುಡುಕುವುದನ್ನ ಬಿಟ್ಟೇ ಇಲ್ಲ. ಆದರೆ ಹುಡುಗಿ ಹುಡುಕುವ ಹಠದಲ್ಲಿ ಒಮ್ಮೊಮ್ಮೆ ಈ ರೀತಿಯ ಯಡವಟ್ಟುಗಳು ಆಗುತ್ತಿವೆ. ಅದರಲ್ಲೂ ರೈತರ ಮಕ್ಕಳು ಮದುವೆ ಆಗೋಕೆ ಹೋಗಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಈಕೆ ವಿಷಕನ್ಯೆ! ಪ್ರೀತಿಗಾಗಿ ಕುಟುಂಬದ 13 ಜನರನ್ನು ವಿಷ ಉಣಿಸಿ ಕೊಂದ ಮನೆ ಮಗಳು! 

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರೈತನ ಪಾಡು ಯಾರಿಗೂ ಬೇಡ. ರೈತ ಸಂಭಾಜಿ ಲೆಂಡಿವಿನವರ್ ಅವರು ಮಗನಿಗೆ 39 ವರ್ಷ ವಯಸ್ಸಾಗ್ತಿದೆ. ಮಗನ ಮದುವೆಗೆ ಹುಡುಗಿಯನ್ನ ಹುಡುಕಿ, ಹುಡುಕಿ ಸಾಕಾಗಿದ್ದಾರೆ. ಕೊನೆಗೆ ಮಧ್ಯವರ್ತಿಗಳನ್ನು ಕೇಳಿದಾಗ ಅವರು ನಿಮ್ಮ ಮಗನ ಹೆಸರಲ್ಲಿ ಕೇವಲ ಜಮೀನು ಇದ್ರೆ ಸಾಲಲ್ಲ. ಸರ್ಕಾರಿ ಕೆಲಸ ಇದ್ರೆ ಮದುವೆ ಮಾಡಿಸೋದಾಗಿ ಹೇಳಿದ್ದಾರೆ.

publive-image

ಮಧ್ಯವರ್ತಿಗಳು ಮದುವೆಗೆ ಹುಡುಗಿ ಜೊತೆಗೆ ಸರ್ಕಾರಿ ನೌಕರಿಯನ್ನು ಕೊಡಿಸಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಮಗನ ಮದುವೆ ಆಗುವ ಚಿಂತೆಯಲ್ಲಿ ರೈತ ಸಂಭಾಜಿ ತನ್ನ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ 2 ಜಮೀನನ್ನು ಕಡಿಮೆ ರೇಟಿಗೆ ಮಾರಿ ಹಣ ಸಂಗ್ರಹಿಸಿದ್ದಾನೆ.

publive-image

ಮಗನಿಗೆ ಕನ್ಯೆ ಸಿಗ್ತಿಲ್ಲ ಅಂತ 2 ಎಕರೆ ಜಮೀನು ಮಾರಿ ಸರ್ಕಾರಿ ನೌಕರಿ ಕೊಡಿಸಲು 7 ಲಕ್ಷ ರೂಪಾಯಿ ಹಣ ಕೊಟ್ಟಿದ್ದಾರೆ. ಆದರೆ ಹಣ ತೆಗೆದುಕೊಂಡ ಮಧ್ಯವರ್ತಿಗಳು ಪರಾರಿಯಾಗಿದ್ದಾರೆ. ಜಮೀನು ಹೋಯ್ತು, ಹಣನೂ ಹೋಯಿತು ನೌಕರಿನೂ ಇಲ್ಲ ಅಂತ ರೈತ ತಮ್ಮ ಅಳಲು ತೋಡಿಕೊಂಡಿದ್ದಾರೆ.

[caption id="attachment_90603" align="aligncenter" width="800"]publive-image ಆರೋಪಿ ಅನ್ನದಾನೀಶ್ವರ ಹಿರೇಮಠ ಹಾಗೂ ಮಹಿಳೆ[/caption]

ಒಬ್ಬರಿಗಲ್ಲ, ಹಲವು ಪೋಷಕರಿಗೆ ಇದೇ ರೀತಿ ಮೋಸ!
ಮುಂಡರಗಿಯ ರೈತ ಸಂಭಾಜಿ ಲೆಂಡಿವಿನವರ್ ಅವರಿಗೆ ಮಾತ್ರ ಈ ರೀತಿಯ ಮೋಸ ಆಗಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ನೌಕರಿ ಆಸೆಗಾಗಿ ಚಿನ್ನ, ಜಮೀನು ಮಾರಾಟ ಮಾಡಿಕೊಂಡ ಹಲವು ಪೋಷಕರು ಇಲ್ಲಿದ್ದಾರೆ.
ಮುಂಡರಗಿ ಪಟ್ಟಣದ ಸುಮಾರು 39 ಯುವಕರ ಪೋಷಕರು ಸರ್ಕಾರಿ ನೌಕರಿ ಹಿಂದೆ ಬಿದ್ದು ಮೋಸ ಹೋಗಿದ್ದಾರೆ ಎನ್ನಲಾಗಿದೆ. ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಹಿರೇಮಠ ಅವರ ಮೇಲೆ ಬರೋಬ್ಬರಿ 3 ಕೋಟಿ ‌ 30 ಲಕ್ಷ ರೂಪಾಯಿ ಹಣ ನುಂಗಿ ನೀರು ಕುಡಿದಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment