newsfirstkannada.com

ಪಾಠ ಮಾಡದೇ ಶಾಲೆಯಲ್ಲೇ ಮಲಗುತ್ತಿದ್ದ.. ಮಕ್ಕಳ ಮುಂದೆ ಗುಟ್ಕಾ ಜಗಿಯುತ್ತಿದ್ದ ಶಿಕ್ಷಕ ಅಮಾನತು

Share :

Published February 17, 2024 at 11:18am

    ಶಿಕ್ಷಕನ ಬೇಜವಾಬ್ದಾರಿತನದ ಬಗ್ಗೆ ಎಲ್ಲ ಬಾಯ್ಬಿಟ್ಟ ಮಕ್ಕಳು

    ಮಕ್ಕಳ ಎದುರಲ್ಲೇ ಗುಟ್ಕಾ ಜಗಿಯುತ್ತಿದ್ದ ಮತ್ತು ನಿದ್ದೆ ಮಾಡ್ತಿದ್ದ ಶಿಕ್ಷಕ

    ಶಿಕ್ಷಕನ ವರ್ತನೆ ಬಗ್ಗೆ ದೂರು ನೀಡಿದ್ದ ಶಾಲಾ ಮಕ್ಕಳ ಪೋಷಕರು

ಗದಗ: ಮಕ್ಕಳ ಮುಂದೆ ಗುಟ್ಕಾ ಸೇವನೆ, ಮೊಬೈಲ್​ನಲ್ಲಿ ಗೇಮ್​ ಆಡುತ್ತಿದ್ದ ಮತ್ತು ತರಗತಿಯಲ್ಲೇ ಮಲಗುತ್ತಿದ್ದ ಶಿಕ್ಷಕ ಡಿಎಸ್ ಭಜಂತ್ರಿಯನ್ನು ಅಮಾನತು ಮಾಡಲಾಗಿದೆ.

ಮುಂಡರಗಿ ತಾಲೂಕಿನ ಗುಡ್ಡದ ಬೂದಿಹಾಳ ಗ್ರಾಮ ಸರ್ಕಾರಿ ಶಾಲೆಯಲ್ಲಿ ಡಿ.ಎಸ್.ಭಜಂತ್ರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಕ್ಕಳಿಗೆ ಪಾಠ ಮಾಡದೇ ಗುಟ್ಕಾ ಜಗಿಯುತ್ತಾ, ಗಂಟೆಗಟ್ಟಲೇ ಮೊಬೈಲ್​ನಲ್ಲಿ ಗೇಮ್ ಆಡುತ್ತಿದ್ದರು. ಇದೆಲ್ಲ ಮಾಡುವುದರ ಜೊತೆಗೆ ನಿದ್ದೆ ಬಂದರೆ ತರಗತಿಯಲ್ಲೇ ಆರಾಮಾಗಿ ಮಲಗುತ್ತಿದ್ದರು. ಹೀಗಾಗಿ ಇವರ ಬೇಜವಾಬ್ದಾರಿ ತನಕ್ಕೆ ಮಕ್ಕಳ ಪೋಷಕರು ದೂರು ದಾಖಲು ಮಾಡಿದ್ದರು.

ಶಿಕ್ಷಕನ ವರ್ತನೆ ಬಗ್ಗೆ ಶಾಲಾ ಮಕ್ಕಳು ಕೂಡ ಎಳೆಎಳೆಯಾಗಿ ಬಾಯಿ ಬಿಟ್ಟಿದ್ದವು. ಹೀಗಾಗಿ ಇವೆಲ್ಲವನ್ನು ಪರಿಗಣಿಸಿರುವ ಗದಗನ ಡಿಡಿಪಿಐ ಎಂ.ಎ ರಡ್ಡೇರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಠ ಮಾಡದೇ ಶಾಲೆಯಲ್ಲೇ ಮಲಗುತ್ತಿದ್ದ.. ಮಕ್ಕಳ ಮುಂದೆ ಗುಟ್ಕಾ ಜಗಿಯುತ್ತಿದ್ದ ಶಿಕ್ಷಕ ಅಮಾನತು

https://newsfirstlive.com/wp-content/uploads/2024/02/GADAG_TEACHER.jpg

Load More