/newsfirstlive-kannada/media/post_attachments/wp-content/uploads/2024/04/GDG-MURDER.jpg)
ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ಕು ಜನರ ಹತ್ಯೆಯಾದ ಪ್ರಕರಣದ ಕಿಂಗ್ಪಿನ್ ಕಾಲಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ. ಸ್ಥಳ ಮಹಜರಿಗೆ ಕರೆದೊಯ್ದಿದ್ದ ವೇಳೆ ಆರೋಪಿ ಫೈರೋಜ್ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದ್ರೂ ಶರಣಾಗಿಲ್ಲ. ಕೊನೆಗೆ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಆರೋಪಿಯಿಂದ ಹಲ್ಲೆಗೊಳಗಾದ ಸಿಪಿಐ ಆನಂದ್ ಪಾಟೀಲ್ ಮತ್ತು ಆರೋಪಿ ಪೈರೋಜ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಇದನ್ನೂ ಓದಿ:KL ರಾಹುಲ್ ಜೊತೆ ರೋಹಿತ್ ಮೀಟಿಂಗ್; ಕನ್ನಡಿಗನಿಗೆ ವಿಶ್ವಕಪ್ ತಂಡದಲ್ಲಿ ಸಿಗಲ್ವಾ ಚಾನ್ಸ್..!
ಏನಿದು ಪ್ರಕರಣ..?
ಏಪ್ರಿಲ್ 18ರ ರಾತ್ರಿ ದಾಸರ ಓಣಿಯ ಮನೆಯೊಂದರಲ್ಲಿ ಮಲಗಿದ್ದ ನಾಲ್ವರು ಭೀಕರ ಹತ್ಯೆ ನಡೆದಿತ್ತು. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಪುತ್ರ ಕಾರ್ತಿಕ್ ಬಾಕಳೆ 27, ಪರಶುರಾಮ 55, ಪತ್ನಿ ಲಕ್ಷ್ಮೀ 45, ಪುತ್ರಿ ಆಕಾಂಕ್ಷಾ 16 ಕೊಲೆಯಾಗಿದ್ದರು. ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳನ್ನು ಕೊಲೆ ಮಾಡಲಾಗಿತ್ತು. ಹತ್ಯೆ ಮಾಡಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದರು. ಕೊಲೆಯಾದ ಮೂವರು ಕೊಪ್ಪಳ ಮೂಲದವರು. ಏಪ್ರಿಲ್ 17 ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ ನ ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಗಳು ಆಗಮಿಸಿದ್ದರು.
ಇದನ್ನೂ ಓದಿ:ಡ್ಯಾಮೇಜ್ ಕಂಟ್ರೋಲ್ಗೆ ದಳಪತಿಗಳು ದಿಟ್ಟ ಹೆಜ್ಜೆ.. ಐವರು ಸಂತ್ರಸ್ತೆಯರ ಮುಂದೆ SIT ಇಟ್ಟ ಪ್ರಶ್ನೆಗಳು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ