newsfirstkannada.com

ಮಧ್ಯಾಹ್ನ 2 ಗಂಟೆಗೆ ಹೆರಿಗೆ, 3 ಗಂಟೆಗೆ ಪೊಲೀಸ್​ ಠಾಣೆ ಮುಂದೆ ಬಾಣಂತಿ ಪ್ರತಿಭಟನೆ.. ಗದಗದಲ್ಲಿ ಸ್ಪೆಷಲ್ ಕೇಸ್..!

Share :

Published January 15, 2024 at 7:15am

    ನವಜಾತ ಶಿಶುವಿನೊಂದಿಗೆ ಠಾಣೆ ಮುಂದೆ ಬಾಣಂತಿ ಹೈಡ್ರಾಮಾ

    ಚಳಿ ಲೆಕ್ಕಿಸದೇ ಹೆರಿಗೆಯಾದ 2 ಗಂಟೆಯಲ್ಲೇ ಠಾಣೆಗೆ ಬಂದಿದ್ದಾರೆ

    ಜಿಮ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಶಬಾನಾ

ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಆದ್ರೆ ಇಲ್ಲಿ ಬಾಣಂತಿಯೊಬ್ಬರು ಮಗುವಿಗೆ ಜನ್ಮ ಕೊಟ್ಟು ಜಸ್ಟ್ ಒಂದೆರಡು ಗಂಟೆಯಲ್ಲೇ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತಿದ್ದಾರೆ. ಚಳಿಯಲ್ಲಿ ನಡುಗುತ್ತಾ ನವಜಾತ ಶಿಶುವಿನ ಜೊತೆ ಬಾಣಂತಿ ಪ್ರತಿಭಟನೆ ನಡೆಸಿದ್ದು ಆಕೆಯ ಪತಿಗಾಗಿ.

ಚಳಿಯನ್ನೂ ಲೆಕ್ಕಿಸದೇ ಪೊಲೀಸ್ ಸ್ಟೇಷನ್ ಮುಂದೆ ಬಾಣಂತಿ ಧರಣಿ ಕುಳಿತಿದ್ದಾಳೆ. ಜೊತೆಗೆ ಈಗಷ್ಟೇ ಭೂಮಿಗೆ ಬಂದು ಕಣ್ಣು ಬಿಟ್ಟಿರುವ ನವಜಾತ ಶಿಶುವನ್ನು ಹೆತ್ತುಕೊಂಡು ಕಣ್ಣೀರಿಡುತ್ತಿದ್ದಾಳೆ. ಈ ವೇಳೆ ಪೊಲೀಸರು ಆಕೆಯ ಜೊತೆ ಮಾತುಕತೆ ನಡೆಸಿದ್ದಾರೆ.

ನನ್ನ ಗಂಡನನ್ನು ಬಿಡೋವರೆಗೂ ಹೋಗೋದಿಲ್ಲ ಅಂತ ನಾಟಕ

ಠಾಣೆಯ ಮುಂದೆ ಧರಣಿ ಕುಳಿತ್ತಿದ್ದ ಮಹಿಳೆ ಹೆಸರು ಶಬಾನಾ. ಈಗಷ್ಟೇ ನವಜಾತ ಶಿಶುವಿಗೆ ಜನ್ಮ ಕೊಟ್ಟ ಬಾಣಂತಿ. ಕಂದನಿಗೆ ಜನ್ಮ ಕೊಟ್ಟ ಬೆನ್ನಲ್ಲೇ ವೈದ್ಯರ ಆರೈಕೆಯಲ್ಲಿರಬೇಕಾಗಿದ್ದ ಅಮ್ಮ ಹಾಗೂ ಕಂದ ಹೀಗೆ ಪೊಲೀಸ್ ಠಾಣೆ ಎದುರು ಧರಣಿ ಕುಳಿತ್ತಿದ್ದಾರೆ. ಅದು ಕೂಡ ಚಳಿಯನ್ನೂ ಲೆಕ್ಕಿಸದೇ ಹೆರಿಗೆಯಾಗಿ ಜಸ್ಟ್​ ಒಂದೆರಡು ಗಂಟೆಯಲ್ಲೇ ನವಜಾತ ಶಿಶುವಿನೊಂದಿಗೆ ಬಾಣಂತಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ನನ್ನ ಗಂಡನನ್ನು ಬಿಡೋವರೆಗೂ ಹೋಗೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಗದಗ ಗ್ರಾಮೀಣ ಠಾಣೆ ಮುಂದೆ ಈ ಘಟನೆ ನಡೆದಿದ್ದು ಈಕೆಯ ಹಿನ್ನೆಲೆಯೇ ಇಂಟ್ರೆಸ್ಟಿಂಗ್ ಆಗಿದೆ.

ಅಪ್ಪ ಕಳ್ಳ ಆದ್ರೆ ಗಂಡ ಕಳ್ಳನಲ್ಲ ಎಂದು ಪೊಲೀಸರ ಜೊತೆ ವಾದ

ಹೀಗೆ ಬಾಣಂತಿ ಪ್ರತಿಭಟನೆ ಮಾಡ್ತಿರೋದು ಈಕೆಯ ಪತಿ ಹನುಮಂತಗೋಸ್ಕರ. ಅಂದಾಗೆ ಶಬಾನಾಳದ್ದು ಲವ್ ಮ್ಯಾರೇಜ್. ಈಕೆಯ ತಂದೆಯ ಹೆಸರು ಗೋಪಾಲ್. ತಂದೆ ಹಿಂದೂವಾದ್ರೆ ತಾಯಿ ಮುಸ್ಲಿಂ ಸಮುದಾಯದವರು. ಇವರದ್ದೂ ಕೂಡ ಲವ್ ಮ್ಯಾರೇಜ್.

ಗಂಡನಿಗಾಗಿ ಬಾಣಂತಿ ಪ್ರತಿಭಟನೆ

  • ಬೈಕ್ ಕಳ್ಳತನ ಕೇಸ್​​ನಲ್ಲಿ ಪೊಲೀಸರಿಗೆ ಬೇಕಾಗಿದ್ದ ಬಾಣಂತಿ ಗಂಡ
  • ಶಬಾನಾ ಎನ್ನುವ ಮಹಿಳೆಯ ಗಂಡನನ್ನ ಬಂಧಿಸಿರುವ ಪೊಲೀಸರು
  • ಮಧ್ಯಾಹ್ನ 2 ಗಂಟೆಗೆ ಹೆರಿಗೆ, 3 ಗಂಟೆ ವೇಳೆ ಠಾಣೆಗೆ ಬಂದಿದ್ದ ಮಹಿಳೆ
  • ಜಿಮ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಶಬಾನಾ
  • ನವಜಾತ ಶಿಶುವಿನೊಂದಿಗೆ ಗದಗ ಠಾಣೆ ಮುಂದೆ ಪ್ರತಿಭಟನೆ
  • ಬಾಣಂತಿ ತಂದೆ ಗೋಪಾಲ್ ಎನ್ನುವಾತ ಮನೆ ಕಳ್ಳತನ ಆರೋಪಿ
  • ಶಬಾನಾ ಗಂಡ, ಹನುಮಂತ ಮನ್ನವಡ್ಡರ್​ ಮೇಲೂ ಹಲವು ಕೇಸ್​​​
  • ಬೈಕ್ ಕಳ್ಳತನ ಕೇಸ್​​ನಲ್ಲಿ ಹನುಮಂತನನ್ನ ಬಂಧಿಸಿರುವ ಪೊಲೀಸರು
  • ತಂದೆ ಮಾಡಿದ ಕಳ್ಳತನ ಕೇಸ್​​ನಲ್ಲಿ ಗಂಡನ ಬಂಧನ ಎಂಬ ಆರೋಪ

ಠಾಣೆ ಮುಂದೆ ನವಜಾತ ಶಿಶುವಿನ ಜೊತೆ ಬಾಣಂತಿ ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ಕಂಗಾಲಾಗಿದ್ದಾರೆ. ಬಳಿಕ ಶಬಾನಾ ಮನವೊಲಿಸಿ ಆಕೆಯನ್ನು ಮಗು ಸಮೇತ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯಾಹ್ನ 2 ಗಂಟೆಗೆ ಹೆರಿಗೆ, 3 ಗಂಟೆಗೆ ಪೊಲೀಸ್​ ಠಾಣೆ ಮುಂದೆ ಬಾಣಂತಿ ಪ್ರತಿಭಟನೆ.. ಗದಗದಲ್ಲಿ ಸ್ಪೆಷಲ್ ಕೇಸ್..!

https://newsfirstlive.com/wp-content/uploads/2024/01/GADAG_WOMAN.jpg

Load More