/newsfirstlive-kannada/media/post_attachments/wp-content/uploads/2025/07/gadaga3.jpg)
ಗದಗ: ಈತ ಅಂತಿಂಥ ಕಳ್ಳ ಅಲ್ಲವೇ ಅಲ್ಲ. ಸಖತ್ ಕಿಲಾಡಿ ಕಳ್ಳ. ಜನರ ಕೈಯಲ್ಲಿ ಸಿಕ್ಕಿಹಾಕಿಕೊಂಡ ಮೇಲೂ ಪುಷ್ಪರಾಜ್ ಸಿನಿಮಾದ ಡೈಲಾಗ್ ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ. ಅಲ್ಲದೇ ಖುದ್ದು ಆತನೇ ಕಳ್ಳತನದ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ್ದಾನೆ.
ಇದನ್ನೂ ಓದಿ:ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್ ಇವರೇನಾ?
ಹೌದು, ಕಳ್ಳತನ ವೇಳೆ ರೆಡ್ ಆ್ಯಂಡ್ ಆಗಿ ಸಿಕ್ಕಬಿದ್ದವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಹಳೇ ಡಿಸಿ ಸರ್ಕಲ್ ಬಳಿ ನಡೆದಿದೆ. ಮೂವರು ಕಳ್ಳರು ಹತ್ತಿ ಮಿಲ್ ಆಫೀಸ್ನ ಸರ್ವಿಸ್ ವೈರ್ ಕಳ್ಳತನ ಮಾಡುತ್ತಿದ್ದರು. ಅದರಲ್ಲಿ ಓರ್ವ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಆಗ ಮಿಲ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಳ್ಳನನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೊಂದು ಗೂಸಾ ಬಿದ್ದರೂ ಪುಷ್ಪರಾಜ್ ಸಿನಿಮಾದ ತಗ್ಗೋದೆ ಇಲ್ಲ ಅಂತ ಆ್ಯಕ್ಷನ್ ಮಾಡುತ್ತ ಡೈಲಾಗ್ ಹೇಳಿದ್ದಾನೆ. ಕಳ್ಳನ ಈ ಆ್ಯಟಿಟ್ಯೂಡ್ಗೆ ಸ್ಥಳೀಯರು ಶಾಕ್ ಆಗಿದ್ದಾರೆ.
ಇದಾದ ಬಳಿಕ ಸ್ಥಳೀಯರು ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲವು ದಿನಗಳಿಂದ ಕಳ್ಳತನ ಮಾಡಿಕೊಂಡು ತಲೆ ಮರೆಸಿಕೊಂಡಿದ್ದವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಕಳ್ಳರು, ಕಚೇರಿಗೆ ಹಾಕಿದ್ದ ವಿದ್ಯುತ್ ಸಂಪರ್ಕದ ವೈರ್ ಅನ್ನು ಕದಿಯುತ್ತಿದ್ದರು. ವೈರ್ ಸುಟ್ಟು ಉಳಿದ ತಂತಿಯನ್ನ ಕೆಜಿ ಗಟ್ಟಲೆ ಮಾರಿ ಹಣ ಮಾಡ್ತಿದ್ದರು. ವೈರ್, ಬ್ಯಾಟರಿ ಹಾಗೂ ಜೆಸಿಬಿಗಳ ಬಿಡಿಭಾಗಗಳನ್ನ ಕಳ್ಳತನ ಮಾಡುತ್ತಿದ್ದರು. ನಗರದ ಹಲವು ಕಡೆ ಮನೆಗಳ್ಳತನ ನಡೆದಿದ್ದವು. ಪೆಟ್ರೋಲ್ ಬಂಕ್, ಫಾನ್ ಶಾಪ್ ಹಾಗೂ ಹಲವು ಕಡೆ ಕಳ್ಳತನ ನಡೆದಿದ್ದವು. ಹೀಗಾಗಿ ಕಳ್ಳರನ್ನ ಪತ್ತೆಹಚ್ಚಿ ಅಂತ ಸಾರ್ವಜನಿಕರು ಪೊಲೀಸರಿಗೆ ಒತ್ತಾಯ ಮಾಡಿದ್ದಾರೆ.
ಕಳ್ಳ ಮಾತಾಡಿದ್ದೇನು..?
ನನಗೆ ಆತ ಯಾರು ಅಂತ ಕೂಡ ಗೊತ್ತಿಲ್ಲ. ಎಣ್ಣೆ ಅಂಗಡಿಯಲ್ಲಿ ಪರಿಚಯ ಆದ. ಅವನು ನನ್ನನ್ನೂ ಕರೆದುಕೊಂಡು ಬಂದ. ವಿದ್ಯುತ್ ಸಂಪರ್ಕದ ವೈರ್ ಕಟ್ ಮಾಡು ಅಂತ ಹೇಳ್ದಾ. ಆಗ ಸಿಬ್ಬಂದಿ ನೋಡಿದ್ರು, ಅಲ್ಲಿಗೆ ಬಿಟ್ಟು ಓಡೋದಕ್ಕೆ ಟ್ರೈ ಮಾಡಿದೆ. ಆ ವೈರ್ ಅನ್ನು ಸುಟ್ಟು ಅದನ್ನು ಮಾರಾಟ ಮಾಡುತ್ತೇವೆ. ಅದಕ್ಕೆ ನಮಗೆ 200 ರೂಪಾಯಿ ಬರುತ್ತೆ ಅಷ್ಟೇ ಎಂದನು. ಇದಾದ ಬಳಿಕ ಮತ್ತೆ ಮಾತಾಡಿದ ಕಳ್ಳ, ನಾನು ರೋಣ ತಾಲೂಕು ಕೊಲ್ಲೂರಿನವನು. ನನ್ನ ಹೆಸರು ಮಾತೇಶಿ. ನಮ್ಮ ಅಪ್ಪನ ಹೆಸರು ಕೃಷ್ಣೇಗೌಡ. ನನಗೆ ಜಮೀನು ಎಲ್ಲ ಇದೆ. ಹೊಟ್ಟೆ ಪಾಡಿಗೆ ಹೀಗೆ ಮಾಡಿದ್ದೇನೆ. ದುಡಿಬೇಕು ಅಂತ ಕುಂದಾಪುರಕ್ಕೆ ಹೋದೆ. ಅಲ್ಲಿ ಮಳೆ ಬರ್ತಿದೆ ಅಂತ ಇಲ್ಲಿಗೆ ಬಂದೆ. ನಾನು ಈ ಕೆಲಸ ಮಾಡ್ತಾ ಇದ್ದೀನಿ ಅಂತ ಗೊತ್ತಾದ್ರೆ ನಮ್ಮ ಅಪ್ಪ, ಅವ್ವನಿಗೆ ಬೇಸರ ಆಗುತ್ತೆ ಎಂದಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ