35 ವರ್ಷದ ಹಿಂದಿನ ದ್ವೇಷಕ್ಕೆ ನದಿಗೆ ತಳ್ಳಿದ್ಲಾ ಗದ್ದೆಮ್ಮ.. ಏನಿದು ಗಂಭೀರ ಆರೋಪ..?

author-image
Veena Gangani
35 ವರ್ಷದ ಹಿಂದಿನ ದ್ವೇಷಕ್ಕೆ ನದಿಗೆ ತಳ್ಳಿದ್ಲಾ ಗದ್ದೆಮ್ಮ.. ಏನಿದು ಗಂಭೀರ ಆರೋಪ..?
Advertisment
  • ಮದುವೆಯಾದ 15 ದಿನದಲ್ಲೇ ಇಷ್ಟ ಇಲ್ಲ ಎಂದಿದ್ದು ನಿಜಾನಾ?
  • ದೈವದ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ್ಲಾ ಗದ್ದೆಮ್ಮಾ?
  • ಸ್ಫೋಟಕ ಸತ್ಯವನ್ನ ರಿವೀಲ್ ಮಾಡಿದ ತಾತಪ್ಪನ ಕುಟಂಬ

ಗದ್ದೆಮ್ಮ ಏನೋ ನಾನು ತಳ್ಳಿಲ್ಲ ಅಂತಿದ್ದಾಳೆ. ತಾತಪ್ಪನ ಮನೆಯವರು ಸೊಸೆ ಮೇಲೆ ಆರೋಪ ಮಾಡ್ತಿದ್ದಾರೆ. ಇದೆಲ್ಲದರ ಮಧ್ಯೆ ತಾತಪ್ಪನನ್ನ ನದಿಯಿಂದ ತಳ್ಳೋಕೆ 35 ವರ್ಷದ ದ್ವೇಷವೇ ಕಾರಣ ಅನ್ನೋ ಮತ್ತೊಂದು ಸ್ಫೋಟಕ ಸತ್ಯವನ್ನ ತಾತಪ್ಪನ ಮನೆಯವರು ರಿವೀಲ್ ಮಾಡಿದ್ದಾರೆ. ತಾತಪ್ಪನ ಮನೆಯವರು ಒಂದು ಹೆಣ್ಣಿನ ಬಾಳು ಹಾಳು ಮಾಡಬಾರದು ಅನ್ನೋ ಕಾರಣಕ್ಕೆ ಕೇಸ್​ ಮಾಡಿಲ್ಲವಂತೆ. ಊರಲ್ಲೇ ಪಂಚಾಯತಿ ಮಾಡಿ ಗದ್ದೆಮ್ಮಳನ್ನು ಅವಳ ಊರಿಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!

publive-image

ಈ ಟೈಮ್​ನಲ್ಲೇ ಒಂದು ಸ್ಫೋಟಕ ಸತ್ಯವನ್ನ ಹೇಳಿದ್ದಾರೆ. ತಾತಪ್ಪನನ್ನ ನದಿಗೆ ತಳ್ಳಿದ್ದ ಗದ್ದೆಮ್ಮ, ಬಳಿಕ ಬ್ಯಾರೇಜ್​ ಮೇಲೆ ನಿಂತು ಚಪ್ಪಲಿ ತೋರಿಸಿದ್ಳಂತೆ. ಇದೇ ವಿಚಾರ ತಾತಪ್ಪನ ಮನಸ್ಸಿಗೆ ತುಂಬಾ ನೋವು ಮಾಡಿದೆ. ಏನೋ ಚಿಕ್ಕ ಹುಡುಗಿ ಗೊತ್ತಾಗದೇ ಮಾಡಿದ್ದಾಳೆ ಅಂತ ಬಿಡ್ತಿದ್ವಿ. ಆದ್ರೆ ನನ್ನ ಜೀವ ತೆಗೆಯೋ ನಿರ್ಧಾರ ಮಾಡಿದ್ದು ಎಷ್ಟು ಸರಿ ಅನ್ನೋದು ತಾತಪ್ಪ ಮನೆಯವರ ಪ್ರಶ್ನೆ.

ಮದ್ವೆಯಾದ 15 ದಿನದಲ್ಲೇ ಇಷ್ಟ ಇಲ್ಲ ಎಂದಿದ್ಳು!

ಶಾಕಿಂಗ್ ಸತ್ಯ ಇದೇ ನೋಡಿ.. ಗದ್ದೆಮ್ಮಳಿಗೆ ತಾತಪ್ಪನ್ನ ಮದ್ವೆಯಾಗೋದೇ ಇಷ್ಟ ಇರಲಿಲ್ವಂತೆ. ಇನ್​​ಫ್ಯಾಕ್ಟ್​ ಅದನ್ನ ಮದುವೆ ಮುಂಚೆಯೇ ಹೇಳಿದಿದ್ರೆ ಆಗೋ ಅನಾಹತುವಾದ್ರೂ ತಪ್ತಿತ್ತೋ, ಮರ್ಯಾದಿಯೋ ಉಳಿತಿತ್ತೋ ಏನೋ. ಅದೇನು ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ರು ಅನ್ನೋಹಾಗೆ ಮದ್ವೆಯಾದ್ಮೇಲೆ ಗದ್ದೆಮ್ಮ ತನಗೆ ಇಷ್ಟ ಇಲ್ಲ ಅಂತ ಹೇಳಿದ್ಳಂತೆ. ಆದ್ರೆ ತಾತಪ್ಪ ಎಲ್ಲರ ಮುಂದೆ ಮದ್ವೆ ನಡೆದುಹೋಗಿದೆ. ತುಂಬು ಕುಟುಂಬದಲ್ಲಿ ನಡೆದು ಹೋಗಿದೆ. ಇವತ್ತಲ್ಲ ನಾಳೆ ಹೊಂದಿಕೊಂಡು ಹೋಗೋನ ಅಂದಿದ್ನಂತೆ. ಆದ್ರೆ ಮದ್ವೆಯಾಗಿ ಮೂರು ತಿಂಗಳ ಕಳೆಯೋದ್ರೋಳಗೆ ಗದ್ದೆಮ್ಮ ಇಂಥಾ ನೀಚ ಕೃತ್ಯಕ್ಕೆ ಕೈ ಹಾಕಿದ್ದಾಳೆ ಅನ್ನೋದು ತಾತಪ್ಪನ ಮನೆಯವರ ಆರೋಪ.

publive-image

ದೈವದ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ್ಲಾ ಗದ್ದೆಮ್ಮಾ?

ಇಷ್ಟೆಲ್ಲ ಅವಾಂತರ ನಡೆದ್ಮೇಲೆ ತಾತಪ್ಪನ ಕುಟುಂಬ ಗದ್ದೆಮ್ಮಳ ಊರಿಗೆ ಹೋಗಿ ನ್ಯಾಯ ಪಂಚಾಯ್ತಿ ಮಾಡಿದೆ. ನಿಮ್ಮ ಮಗಳು ಹಿಂಗೆಲ್ಲ ಮಾಡಿದ್ದಾಳೆ. ಯಾಕೆ ಏನು ಅಂತ ಪ್ರಶ್ನೆ ಮಾಡಿದ್ರೆ, ಗದ್ದೆಮ್ಮ ತಾನು ಮಾಡಿರೋದು ತಪ್ಪು ಅಂತ ಒಪ್ಪಿಕೊಂಡಿದ್ದಾಳಂತೆ.

publive-image

35 ವರ್ಷದ ದ್ವೇಷವೇ ಪತಿಯನ್ನ ತಳ್ಳೋದಕ್ಕೆ ಕಾರಣವಾಯ್ತಾ?

ಇದೇ ವೇಳೆ, ತಾತಪ್ಪನ ಸಹೋದರ ಮತ್ತೊಂದು ಬೆಚ್ಚಿ ಬೀಳಿಸುವ ವಿಚಾರವನ್ನ ರಿವೀಲ್ ಮಾಡಿದ್ದಾರೆ. ಈ ತಾತಪ್ಪನ ಕುಟುಂಬಕ್ಕೂ ಮತ್ತು ಗದ್ದೆಮ್ಮನ ಕುಟುಂಬ 35 ವರ್ಷದ ದ್ವೇಷವಿತ್ತಂತೆ. ಹೀಗಾಗಿ ಕಳೆದ 35 ವರ್ಷ ಈ ತಾತಪ್ಪನ ಕುಟುಂಬ ಮತ್ತು ಗದ್ದೆಮ್ಮ ನಡುವೆ ಮಾತುಕತೆ, ಸಂಬಂಧ ಏನೂ ಇರಲಿಲ್ವಂತೆ. ಆದ್ರೆ ಹಳೆ ವಿಚಾರಗಳನ್ನ ಮರೆತು ಈಗ ಮತ್ತೆ ನಮ್ಮ ಸಂಬಂಧ ಬೆಳೆಯಲಿ ಅಂತ ಈ ಮದ್ವೆ ಮಾಡಿದ್ರಂತೆ. ಆದ್ರೀಗ ಈ ಸಂಬಂಧ ಬೆಸೆಯಬೇಕಿದ್ದ ಮದ್ವೆ ಉರಿಯೋ ಬೆಂಕಿಗೆ ತುಪ್ಪ ಸುರಿಯೋ ಕೆಲಸ ಮಾಡಿದೆ. ಈ ಬ್ಯಾರೇಜ್​ ಕೇಸ್​ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಗಂಡ ಹೆಂಡ್ತಿ ಇಬ್ಬರು ವಿಚ್ಛೇಧನಕ್ಕೆ ಮುಂದಾಗಿದ್ದಾರೆ. ಪತಿಯಿಂದ ಪತ್ನಿಗೆ ವಿಚ್ಛೇದನಕ್ಕಾಗಿ ಎರಡು ಕುಟುಂಬದವರಿಂದ ಒಪ್ಪಿಗೆ ನೀಡಿದ್ದು, ಅಷ್ಟೇ ಅಲ್ಲದೇ ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಎರಡೂ ಕುಟುಂಬಸ್ಥರು ಮದುವೆಗೆ ನೀಡಿದ್ದ ಉಡುಗೊರೆ ವಾಪಾಸ್ ನೀಡಲಾಗಿದೆ. ಮದುವೆ ಸಮಯದಲ್ಲಿ ವಧುವಿಗೆ ನೀಡಲಾಗಿದ್ದ ತಾಳಿ ಹಾಗೂ ಕಾಲುಂಗುರವನ್ನು ತಾತಪ್ಪ ವಾಪಸ್​ ಪಡೆದುಕೊಂಡಿದ್ದಾರೆ.

ತಾತಪ್ಪ ಕುಟುಂಬಸ್ಥರು ಯಾದಗಿರಿಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮಕ್ಕೆ ತೆರಳಿದ್ದ ಕಾರಣದಿಂದ ಗ್ರಾಮಸ್ಥರು, ಹಿರಿಯರ ಸಮ್ಮುಖದಲ್ಲಿ ಇತ್ಯರ್ಥವಾಗಿದೆ. ಮದುವೆಯಲ್ಲಿ ಹೆಣ್ಣಿಗೆ ನೀಡಲಾಗಿದ್ದ ಸಾಮಗ್ರಿ, ಹಾಗೂ ಗಂಡಿಗೆ ಹೆಣ್ಣಿನ ಮನೆಯವರು ನೀಡಿದ್ದ ಸಾಮಾನುಗಳು ವಾಪಾಸ್ ನೀಡಲಾಗಿದೆ. ಸದ್ಯ ಪತಿಯಿಂದ ಪತ್ನಿ ವಿಚ್ಛೇದನಕ್ಕಾಗಿ ಎರಡು ಕುಟುಂಬದವರಿಂದ ಸಹಿ ಮಾಡಿಸಿಕೊಳ್ಳಲಾಗಿದೆ. ಎರಡು ಕುಟುಂಬಸ್ಥರು ಮಾತುಕತೆ ಮೂಲಕ ಸಂಬಂಧ ಮುರಿದಿಕೊಂಡಿದ್ದಾರೆ. ಅಲ್ಲದೇ ತಾತಪ್ಪ ರಾಯಚೂರು ಎಸ್.ಪಿ ಪುಟ್ಟಮಾದಯ್ಯ ಅವರನ್ನು ಭೇಟಿ ಮಾಡಿ ಬಾಂಡ್ ಪೇಪರ್ ತೋರಿಸಿದ್ದಾರೆ. ಎರಡು ಕುಟುಂಬಸ್ಥರಿಂದ ಬಾಂಡ್ ಮೇಲೆ ಬರೆಸಿಕೊಂಡು ಇಬ್ಬರನ್ನು ಪರಸ್ಪರ ದೂರು ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment