ಈ ದೇಗುಲದಲ್ಲಿ ನಡೆಯುತ್ತೆ ಅಚ್ಚರಿಯ ಪವಾಡ; ಎಣ್ಣೆ, ತುಪ್ಪ ಅಲ್ಲ.. ನೀರಿನಿಂದಲೇ ಉರಿಯುತ್ತೆ ದೀಪ ಅದು ಹೇಗೆ?

author-image
Veena Gangani
Updated On
ಈ ದೇಗುಲದಲ್ಲಿ ನಡೆಯುತ್ತೆ ಅಚ್ಚರಿಯ ಪವಾಡ; ಎಣ್ಣೆ, ತುಪ್ಪ ಅಲ್ಲ.. ನೀರಿನಿಂದಲೇ ಉರಿಯುತ್ತೆ ದೀಪ ಅದು ಹೇಗೆ?
Advertisment
  • ಈ ದೇವಸ್ಥಾನದಲ್ಲಿ ನಡೆಯುತ್ತವೆ ಅಚ್ಚರಿಯ ಘಟನೆಗಳು
  • ದೇಶ ವಿದೇಶಗಳಿಂದ ಇದೇ ದೇವಾಲಯಕ್ಕೆ ಭಕ್ತರು ಬರೋದೇಕೆ?
  • ಎಣ್ಣೆ, ತುಪ್ಪ ಅಲ್ಲ ಕೇವಲ ಆ ನೀರಿನಿಂದ ಮಾತ್ರ ಉರಿಯುತ್ತೆ ದೀಪ

ದೀಪ ಚೆನ್ನಾಗಿ ಉರಿಯಬೇಕಾದರೇ ಅದಕ್ಕೆ ಎಣ್ಣೆ ತುಂಬಾನೇ ಮುಖ್ಯ. ಸ್ವಲ್ಪ ಎಣ್ಣೆ ಆ ಕಡೆ ಈ ಕಡೆ ಆದ್ರೂ ದೀಪ ಆರಿ ಹೋಗುತ್ತೆ. ದೀಪದ ಎಣ್ಣೆ ಹಾಗೂ ತುಪ್ಪವನ್ನು ಬಳಸಲಾಗುತ್ತದೆ. ಆದರೆ ಅತಿಯಾಗಿ ಬೆಂಕಿಯನ್ನು ಹೊತ್ತಿಕೊಂಡರೇ ಅದನ್ನು ಆರಿಸಲು ಬೇಕಾಗಿರುವುದು ನೀರು ಸಾಕು.

ಇದನ್ನೂ ಓದಿ:ದರುಶನ ಕರುಣಿಸಿದ ಹಾಸನಾಂಬೆ.. ಇಂದಿನಿಂದ ನವೆಂಬರ್ 3ರವರೆಗೆ ದೇವಸ್ಥಾನ ಓಪನ್

publive-image

ಆದರೆ ಅದೇ ನೀರಿನಿಂದ ದೀಪ ಉರಿಯಲು ಸಾಧ್ಯವೇ. ಎಂದಿಗೂ ಸಾಧ್ಯವಿಲ್ಲ ಅಲ್ವಾ? ಆದರೆ ಈ ದೇವಾಲಯದಲ್ಲಿ ದೀಪ ಉರಿಯುವುದು ಎಣ್ಣೆಯಲ್ಲ, ತುಪ್ಪದಿಂದಲ್ಲ, ಬದಲಾಗಿ ನೀರಿನಿಂದ. ಇಂತಹ ಅಚ್ಚರಿ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇರುತ್ತವೆ. ಹೌದು, ಕಳೆದ ಶತಮಾನದದಲ್ಲಿ ಶಿರಡಿ ಸಾಯಿಬಾಬಾ ನೀರಿನಿಂದ ದೀಪ ಉರಿಸಿದ್ದರು ಎಂದು ಭಕ್ತರು ನಂಬುತ್ತಾರೆ. ಆದರೆ ಅದನ್ನು ಯಾರು ನೋಡಿಲ್ಲ. ಅದು ಕೇವಲ ಭಕ್ತರ ನಂಬಿಕೆ ಅಂತ ಕೆಲವರು ಹೇಳುತ್ತಾರೆ.

ಇದನ್ನೂ ಓದಿ:ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು.. ಕ್ಯಾಪ್ಟನ್ಸಿ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ನಡೆದ ಭಾರೀ ಜಿದ್ದಾಜಿದ್ದಿ ಹೇಗಿತ್ತು?

publive-image

ಆದರೆ ಮಧ್ಯ ಪ್ರದೇಶದ ಗಾಡಿಯಾ ಘಾಟ್‌ನಲ್ಲಿರುವ ತಾಯಿ ಭಗವತಿ ದೇವಾಲಯದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಕಾಲಿಸಿಂಧ್ ನದಿಯ ತಟದಲ್ಲಿ ಆಗರಾಜ ಮಾಲವಾ ಮಾರ್ಗದಲ್ಲಿ ಎದುರಾಗುವ ಗುಡಿಯಾ ಗ್ರಾಮದಲ್ಲಿ ಇದೆ ಭಗವತಿ ದೇವಿ ದೇವಸ್ಥಾನ. ಈ ದೇವಸ್ಥಾನದಲ್ಲಿ ನೀರನ್ನು ದೀಪಕ್ಕೆ ಹಾಕಿದ ಕೂಡಲೇ ಅದು ಎಣ್ಣೆಯಾಗಿ ಬದಲಾಗುತ್ತದೆ ಗ್ರಾಮದ ಭಕ್ತರು ಹೇಳುತ್ತಾರೆ.

ಅಲ್ಲದೇ ಈ ದೇವಸ್ಥಾನ ಮಳೆಗಾಲದಲ್ಲಿ ಮುಳುಗುತ್ತದೆಯಂತೆ. ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಮಳೆಗಾಲದಲ್ಲಿ ಈ ಮಂದಿರ ನದಿಯ ಪ್ರವಾಹದಲ್ಲಿ ಮುಳುಗಿ ಹೋಗುತ್ತದೆ. ಆ ದಿನಗಳಲ್ಲಿ ಭಕ್ತರು ಮಂದಿರದಲ್ಲಿ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲ. ಆದರೆ ನವರಾತ್ರಿ ವಿಶೇಷ ರಾತ್ರಿಯ ಮುನ್ನ ಮಂದಿರ ಮತ್ತೆ ತೆರೆಯುತ್ತದೆ ಮತ್ತು ನೀರಿನ ದೀಪಗಳಿಂದ ಬೆಳಗುತ್ತದೆ.

ನೀರಿನಿಂದ ದೀಪ ಉರಿಯುವುದು ಹೇಗೆ?

ಒಮ್ಮೆ ಈ ದೇವಸ್ಥಾನದ ದೇವತೆ ಪೂಜಾರಿಯ ಕನಸಲ್ಲಿ ಬಂದು ಕಾಳಿಸಿಂಧ್ ನದಿಯ ನೀರನ್ನು ಬಳಸಿ ಮಂದಿರದಲ್ಲಿ ದೀಪ ಉರಿಸಿ ಎಂದು ಹೇಳಿದಳಂತೆ. ಬೆಳ್ಳಗೆ ಎದ್ದಿದ್ದ ಪೂಜಾರಿಯೂ ಆ ನದಿಯ ನೀರನ್ನು ತಂದು ದೀಪ ಹಚ್ಚಿದ್ದಾರೆ. ಆಗ ನಿಜಕ್ಕೂ ದೀಪಗಳು ಉರಿದವಂತೆ. ಇದನ್ನು ನೋಡಿದ ಗ್ರಾಮದ ಜನರಿಗೆ ಅಚ್ಚರಿ ಕಾದಿತ್ತು. ಆಗ ಅವರು ಕೂಡ ನದಿ ನೀರು ತಂದು ದೀಪ ಹಚ್ಚಿದ್ದರಂತೆ. ಅಂದಿನಿಂದ ಇಂದಿನವರೆಗೂ ಇದು ಹೇಗೆಯೇ ನಡೆಯುತ್ತಿದೆ. ಆದರೆ ಇದರಲ್ಲಿ ವಿಚಿತ್ರ ಏನೆಂದರೆ ಅದೇ ನೀರಿನಲ್ಲಿ ದೇವಸ್ಥಾನ ಹೊರಗಡೆ ದೀಪ ಹಚ್ಚಿದರೆ ದೀಪ ಬೆಳಗುವುದಿಲ್ಲ. ಹೀಗಾಗಿ ಈ ದೇವಾಲಯಕ್ಕೆ ದೇಶ ವಿದೇಶಗಳಿಂದ ಭಕ್ತರು ತಂಡೋಪತಂಡವಾಗಿ ಬಂದು ಮಾತೆಯ ದರ್ಶನ ಪಡೆಯುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment