ಥಲಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಧೋನಿ ಕ್ಯಾಪ್ಟನ್‌!

author-image
Bheemappa
Updated On
ಥಲಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಧೋನಿ ಕ್ಯಾಪ್ಟನ್‌!
Advertisment
  • ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ದೊಡ್ಡ ಬದಲಾವಣೆ
  • ಕೂಲ್ ಕ್ಯಾಪ್ಟನ್​ಗೆ ಮಹತ್ವದ ಜವಾಬ್ದಾರಿ ಕೊಟ್ಟಿದ್ದು ಏಕೆ?
  • ಸೋಲಿನ ಸುಳಿಗೆ ಸಿಕ್ಕ CSKಯನ್ನ ಧೋನಿ ಮೇಲೆತ್ತುತ್ತಾರಾ?

ಐಪಿಎಲ್​ ಸೀಸನ್​ 18 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಸೋಲಿನ ಸುಳಿಗೆ ಸಿಕ್ಕು ಒದ್ದಾಡುತ್ತಿದೆ. ಆರ್​ಸಿಬಿ ವಿರುದ್ಧವೂ ಸೋತು ಅವಮಾನಕ್ಕೆ ಒಳಗಾಗಿದ್ದ ಸಿಎಸ್​ಕೆಯಲ್ಲಿ ಸದ್ಯ ದೊಡ್ಡ ಬದಲಾವಣೆ ಮಾಡಲಾಗಿದೆ. ಮುಂದಿನ ಎಲ್ಲ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪಂದ್ಯಗಳಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಲಿದ್ದಾರೆ.

ಸದ್ಯ ನಡೆಯುತ್ತಿರುವ ಐಪಿಎಲ್ ಸೀಸನ್​ನಿಂದ ಹಾಲಿ ಕ್ಯಾಪ್ಟನ್​ ಆಗಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ತಂಡದಿಂದ ಹೊರಗಿಡಲಾಗಿದೆ. ರುತುರಾಜ್ ಗಾಯಕ್ವಾಡ್ ಅವರು ಇಂಜುರಿಗೆ ಒಳಗಾಗಿದ್ದರಿಂದ ತಂಡದ ನಾಯಕತ್ವವನ್ನು ಮತ್ತೆ ಎಂ.ಎಸ್​ ಧೋನಿಯ ಹೆಗಲೇರಿದೆ. ಚೆನ್ನೈ ತಂಡದ ಮುಂದಿನ ಎಲ್ಲ ಐಪಿಎಲ್​ ಪಂದ್ಯಗಳಿಗೆ ಎಂ.ಎಸ್​ ಧೋನಿಯೇ ಕ್ಯಾಪ್ಟನ್ ಆಗಿರಲಿದ್ದಾರೆ.

ಇದನ್ನೂ ಓದಿ: ‘ಅದು ಏನೋ ಗೊತ್ತಿಲ್ಲ, RCB ಅಂದ್ರೆ ನಮ್ಮ ಜೀವ, ಪ್ರಾಣ’.. ನೆಚ್ಚಿನ ಟೀಮ್ ಬಗ್ಗೆ ಶಿವಣ್ಣ ಹೇಳಿದ್ದೇನು?

publive-image

ಈ ಬಗ್ಗೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕೋಚ್ ಸ್ಟಿಫನ್ ಪ್ಲೇಮಿಂಗ್ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಏಪ್ರಿಲ್ 11 ಅಂದರೆ ನಾಳೆ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಚೆನ್ನೈ ತಂಡ ತವರಲ್ಲೇ ಅಖಾಡಕ್ಕೆ ಇಳಿಯಲಿದೆ. ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿನ ಪಂದ್ಯದಲ್ಲಿ ಧೋನಿ ಮೊದಲಿನಂತೆ ವಿಕೆಟ್​ ಕೀಪರ್​ ಜೊತೆಗೆ ತಂಡದ ನಾಯಕತ್ವದ ಜವಾಬ್ದಾರಿ ಕೂಡ ನಿರ್ವಹಿಸಲಿದ್ದಾರೆ.

2025ರ ಐಪಿಎಲ್​ ಟೂರ್ನಿಯಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ 5 ಪಂದ್ಯಗಳನ್ನು ಆಡಿರುವ ಚೆನ್ನೈ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಇದು ಅಲ್ಲದೇ 17 ವರ್ಷಗಳ ಬಳಿಕ ತವರಿನಲ್ಲಿ ಚೆನ್ನೈ ತಂಡ ಆರ್​ಸಿಬಿ ವಿರುದ್ಧ ಸೋತಿರುವುದು ದೊಡ್ಡ ಮುಖಭಂಗವಾಗಿತ್ತು. ಪಾಯಿಂಟ್​ ಪಟ್ಟಿಯಲ್ಲಿ ಕೆಳಗಡೆಯಿಂದ 2 ಸ್ಥಾನ ಅಂದರೆ 4 ಮ್ಯಾಚ್ ಸೋತು 9ನೇ ಸ್ಥಾನದಲ್ಲಿರುವ ಚೆನ್ನೈ ತಂಡವನ್ನು ಕ್ಯಾಪ್ಟನ್​ ಆಗಿ ಎಂ.ಎಸ್​ ಧೋನಿ ಮತ್ತೆ ಮೇಲೆತ್ತುತ್ತಾರಾ ಎಂದು ಮುಂದಿನ ಪಂದ್ಯಗಳಿಂದ ತಿಳಿದು ಬರಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment