/newsfirstlive-kannada/media/post_attachments/wp-content/uploads/2024/11/JOBS_SEEKERS.jpg)
ಜಿಎಐಎಲ್ (ಇಂಡಿಯಾ) ಲಿಮಿಟೆಡ್ ನೇಮಕಾತಿ- 2024ರ ಪ್ರಕ್ರಿಯೆ ಕುರಿತು ಈಗಾಗಲೇ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ನಾಳೆಯೇ ಕೊನೆ ದಿನಾಂಕವಾಗಿದೆ. ಹೀಗಾಗಿ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ತಕ್ಷಣ ಅಪ್ಲೇ ಮಾಡಬಹುದು.
ಉದ್ಯೋಗಕ್ಕೆ ಅಪ್ಲೇ ಮಾಡಿದ ಮೇಲೆ ಇತರೆ ಯಾವುದೇ ಅಪ್ಡೇಟ್ಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಬೇಕು. ಯಾವ್ಯಾವ ಕೆಲಸಗಳು, ವಿದ್ಯಾರ್ಹತೆ, ಅರ್ಜಿ ಶುಲ್ಕ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಇತ್ಯಾದಿಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ವಿದ್ಯಾರ್ಹತೆ
ಬಿಇ/ಬಿಟೆಕ್, ಎಂಎ ಇನ್ ಹಿಂದಿ/ಇಂಗ್ಲಿಷ್, ಎಂಬಿಎ, ಎಂಎಸ್ಡಬ್ಲ್ಯು, ಪದವಿ,
ಒಟ್ಟು ಉದ್ಯೋಗಗಳು- 261
ಇದನ್ನೂ ಓದಿ:ಸುಪ್ರೀಂಕೋರ್ಟ್ನಲ್ಲಿ 100ಕ್ಕೂ ಹೆಚ್ಚು ಉದ್ಯೋಗಗಳು.. ಯಾವ್ಯಾವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ?
ಉದ್ಯೋಗಗಳು-
- ಸೀನಿಯರ್ ಇಂಜಿನಿಯರ್- ನವೀಕರಿಸಬಹುದಾದ ಶಕ್ತಿ (Renewable Energy), ಬಾಯ್ಲರ್ ಕಾರ್ಯಾಚರಣೆ (Boiler Operation), ಮೆಕಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರೂಮಿಷನ್ (Instrumentation), ಕೆಮಿಕಲ್, Geltel TC/TM, ಸಿವಿಲ್
- ಸೀನಿಯರ್ ಆಫೀಸರ್- ಫೈರ್-ಸೇಫ್ಟಿ, ಕಾಂಟ್ರಾಕ್ಟ್, ಪ್ರಕ್ಯೂರ್ಮೆಂಟ್, ಮಾರ್ಕೆಟಿಂಗ್, ಫೈನಾನ್ಸ್, ಅಕೌಂಟ್ಸ್, ಮಾನವ ಸಂಪನ್ಮೂಲ (Human Resources), ಲಾ, ಮೆಡಿಕಲ್ ಸರ್ವೀಸ್, ಕಾರ್ಪೊರೇಟ್ ಕಮ್ಯುನಿಕೇಶನ್,
- ಅಧಿಕಾರಿ- ಲ್ಯಾಬೋರೆಟರಿ, ಸೆಕ್ಯೂರಿಟಿ, ಅಧಿಕೃತ ಭಾಷೆ (Official Language)
ಮಾಸಿಕ ಸಂಬಳ- ₹60,000 ದಿಂದ ₹1,80,000.
ಅರ್ಜಿ ಶುಲ್ಕ-
ಒಬಿಸಿ, ಜನರಲ್ ಅಭ್ಯರ್ಥಿಗಳಿಗೆ- 200 ರೂ.ಗಳು
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ- ವಿನಾಯಿತಿ ನೀಡಲಾಗಿದೆ
ವಯಸ್ಸಿನ ಮಿತಿ
18 ರಿಂದ 32 ವರ್ಷಗಳು
ಆಯ್ಕೆ ಪ್ರಕ್ರಿಯೆ
- ದೈಹಿಕ ಸಾಮರ್ಥ್ಯ ಪರೀಕ್ಷೆ
- ಸಂದರ್ಶನ
ಇಲಾಖೆಯ ವೆಬ್ಸೈಟ್- www.gailonline.com.
ಅರ್ಜಿಗೆ ಕೊನೆ ದಿನಾಂಕ
11 ಡಿಸೆಂಬರ್ 2024- ಅರ್ಜಿ ಕೊನೆಯ ದಿನ
ಪೂರ್ಣ ಮಾಹಿತಿಗಾಗಿ-
https://www.gailonline.com/careers/currentOpnning/Detailed_Advertisement_E1_E2_Grade_12112024.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ