/newsfirstlive-kannada/media/post_attachments/wp-content/uploads/2024/12/GAJENDRA-KOTARI-3.jpg)
ಒಂದಲ್ಲ.. ಹತ್ತೂ ಅಲ್ಲ.. ಬರೋಬ್ಬರಿ 50 ಕೋಟಿ ರೂಪಾಯಿ ಆಸ್ತಿ ಕೈಯಲ್ಲಿದ್ರೂ ಬಾಡಿಗೆ ಮನೆಯಲ್ಲಿದ್ದಾರೆ ಒಬ್ರು. ಅದ್ರಲ್ಲೂ ಅವರು ಪ್ರತಿ ತಿಂಗಳು ಕಟ್ಟೋ ಬಾಡಿಗೆ ಕೂಡ ಕಮ್ಮಿ ಏನಲ್ಲ. ಬರೋಬ್ಬರಿ 3 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಾರೆ. ಕಾಮನ್ ಆಗಿ, ಒಂದ್ ಯೋಚನೆ ಮಾಡೋದು ಅಂದ್ರೆ ಅದೇ ಇರೋ 50 ಕೋಟಿಯಲ್ಲಿ ಅಟ್ಲೀಸ್ಟ್ 10 ಕೋಟಿ ಇನ್ವೆಸ್ಟ್ ಮಾಡಿ ಸ್ವಂತ ಮನೆ ಮಾಡಿಕೊಂಡ್ರೆ ಕನಸಿನ ರಾಯಲ್ ಮನೆ ಕಟ್ಟಬಹುದು. ಆದ್ರೆ ಬಿಲ್ಕುಲ್ ನಮಗೆ ಸ್ವಂತ ಮನೆಗಿಂತ ನಾವು ಈಗ ವಾಸ ಮಾಡ್ತಿರೋ ಮನೆಗೆ ಬಾಡಿಗೆ ಕಟ್ಟಿದ್ರೆ ಸಾಕು ಅಂತ ಹೇಳುತ್ತಿದ್ದಾರೆ ಈ ಮ್ಯೂಚುಯಲ್ ಫಂಡ್ ಹೂಡಿಕೆದಾರ ಗಜೇಂದ್ರ ಕೊಠಾರಿ.
ಶೇರ್‌ಗಳಲ್ಲಿ ಹಣ ಹೂಡಿಕೆ ಹೇಗೆ ಮಾಡಬೇಕು? ರೆಪೋ ರೇಟ್ಸ್, RBI ಹಣಕಾಸು ವಿಚಾರದ ಬಗ್ಗೆ ಒಳ್ಳೆ ಬುದ್ದಿವಂತಿಕೆ ಗಜೇಂದ್ರ ಕೊಠಾರಿ ಬಳಿ ಇದೆ. ಕೈಯಲ್ಲಿ ಬರೋಬ್ಬರಿ 50 ಕೋಟಿ ಇದ್ರೂ, ಬಾಡಿಗೆ ಮನೆಯಲ್ಲಿ ಯಾಕೆ ವಾಸ ಮಾಡ್ತಿದ್ದೀರಾ ಅಂತ ಗಜೇಂದ್ರ ಕೊಠಾರಿ ಉತ್ತರ ಕೊಟ್ಟಿದ್ದಾರೆ.
ಗಜೇಂದ್ರ ಕೊಠಾರಿ ಮುಂಬೈನ ಚರ್ಚ್‌ಗೇಟ್‌ನಲ್ಲಿ ಇನ್ನೂ ಬಾಡಿಗೆ ಮನೆಯಲ್ಲಿದ್ದಾರೆ. ಸುಂದರವಾಗಿರೋ ಕೊಠಾರಿ ಮನೆ, 1800 ಸ್ಕ್ವೇರ್ ಫೀಟ್ನ 3 BHK ಫ್ಲ್ಯಾಟ್ ಇದೆ. ಅದು ಕೂಡ ಒಬ್ರು ಬ್ರೋಕರ್ ತೋರಿಸೋ ಮನೆಯಲ್ಲಿ ಚಾಯ್ಸ್ ಮಾಡಿಕೊಂಡಿದ್ದಾರೆ. ನಿಮ್ಮ ಆಸ್ತಿ 50 ಕೋಟಿ ಇದ್ರೂ ಯಾಕೆ ಬಾಡಿಗೆ ಮನೆಯಲ್ಲಿ ಇದೀರಾ ಅನ್ನೋ ಪ್ರಶ್ನೆಗೆ, ನಾನು ರಾಜ ಆಗೋದಕ್ಕೆ 10 ರಿಂದ 20 ವರ್ಷ ಬೇಕಾಗಬಹುದು. ಆದರೆ ಆಗ ವಯಸ್ಸೇ ಇರೋದಿಲ್ಲ. ಅದಕ್ಕೋಸ್ಕರ ಈಗಲೇ ಮಾಡಲೇಬೇಕು. 10 ವರ್ಷದ ಮುಂಚೆ, 10 ಸಾವಿರಕ್ಕೆ ನಾನು ಸೈಟ್ ತಗೊಂಡಿದ್ರೆ 4 ವರ್ಷ ಆದ್ಮೇಲೆ, 2 ಕೋಟಿಯಿಂದ 3 ಕೋಟಿ ಆಗುತ್ತಾ ಇತ್ತು. ಅಂಧೇರಿಯಲ್ಲಿದ್ದಾಗ ಒಂದ್ ಸರಿ, ನಮ್ಮತ್ರಾ 2ಕೋಟಿ ರೂ. ಇತ್ತು. ಆದರೆ ಫ್ಲ್ಯಾಟ್ಗಳ ಬೆಲೆ 10 ಕೋಟಿ ಇತ್ತು.
ಇದನ್ನೂ ಓದಿ: 2024ರಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಾಡಿದ ಟಾಪ್ 10 ವಿಷಯಗಳು ಯಾವುವು? ನೀವೂ ಗೆಸ್ ಮಾಡಿ!
ನಾವು ಹಣ ಸಂಪಾದನೆ ಮಾಡ್ತಾ ಇದ್ದಂಗೆ, ಫ್ಲ್ಯಾಟ್ಗಳ ಬೆಲೆ ಕೂಡ ಹೆಚ್ಚಾಗುತ್ತಾ ಇತ್ತು. ಈಗ ನಾನೇನಾದ್ರೂ ಮನೆ ಖರೀದಿ ಮಾಡಬೇಕು ಅಂತಂದ್ರೆ ₹10 ಕೋಟಿ ಬೇಕು. ಆದರೆ ನನಗೆ ಬೇಕಿರೋದು ಒಂದು ಮನೆಯಲ್ಲ. ನನ್ನ ಸಹೋದರರಿಗೂ ಸೇರಿ 3 ಮನೆ ಖರೀದಿ ಮಾಡಬೇಕಾಗುತ್ತೆ. ನಾನೊಬ್ಬ ಚೆನ್ನಾಗಿದ್ರೆ ಆಗಲ್ಲ. ಒಡ ಹುಟ್ಟಿದವರು ಚೆನ್ನಾಗಿರಬೇಕು ಅನ್ನೋದು ನನ್ನ ಬಯಕೆ. ಅಕಸ್ಮಾತ್ ಮೂವರಿಗೆ ಮನೆ ಖರೀದಿ ಮಾಡಬೇಕಾದ್ರೆ ಒಬ್ಬರಿಗೆ ಏನಿಲ್ಲ ಅಂದ್ರೂ 15 ಕೋಟಿಯಂತೆ 50 ಕೋಟಿ ಬೇಕು. ನಮ್ಮ ಬ್ಯುಸಿನೆಸ್ 50 ಕೋಟಿ ರೂಪಾಯಿ ಇದೆ. ಎಲ್ಲಾ ಅದಕ್ಕೆ ಇನ್ವೆಸ್ಟ್ ಮಾಡಿದ್ರೆ ನನ್ನ ಕೈಯಲ್ಲಿ ಉಳಿಯೋದು ಜಸ್ಟ್ ಸೊನ್ನೆ. ಆಗ ನಾವು ಮತ್ತೆ ಝೀರೋದಿಂದ ವ್ಯವಹಾರ ಶುರು ಮಾಡಬೇಕಾಗುತ್ತೆ.
ಇದನ್ನೂ ಓದಿ: ₹2025ಕ್ಕೆ ಜಿಯೋ ಆಫರ್.. ನ್ಯೂ ಇಯರ್ ವೆಲ್‌ಕಮ್ ಪ್ಲಾನ್ ಬಿಡುಗಡೆ; ಗ್ರಾಹಕರಿಗೆ ಏನು ಲಾಭ?
ಅದರ ಬದಲು ನಾವು 5 ವರ್ಷಕ್ಕೆ ಇನ್ವೆಸ್ಟ್ ಮಾಡಿದ್ರೆ ಮುಂದಿನ ಐದಾರು ವರ್ಷದಲ್ಲಿ ಡಬಲ್ ಆಗುತ್ತೆ. ಆಗ ಇನ್ವೆಸ್ಟ್ಮೆಂಟ್ 100 ಕೋಟಿ ಆಗುತ್ತೆ. ಆದರೆ ಫ್ಲ್ಯಾಟ್ಗಳ ರೇಟ್ ಮುಂಬೈಯಲ್ಲಿ ಹೆಚ್ಚಾಗಲ್ಲ. 6 ವರ್ಷ ಆದ್ಮೇಲೆ, ನಮಗೆ ಫ್ಲ್ಯಾಟ್ ಖರೀದಿಸೋ ಆಸೆನೇ ಇಲ್ಲ. ಆದರೂ ಖರೀದಿಸೋ ಸಂದರ್ಭ ಬಂದ್ರೆ ನಮ್ಮ ಆದಾಯ ನೋಡಿಕೊಂಡು ಮನೆ ಖರೀದಿ ಮಾಡಬೇಕು. ಈಗ ನಮಗೆ ಎಂಜಾಯ್ ಮಾಡೋ ವಯಸ್ಸಿದೆ. 50 ವರ್ಷದ ನಂತರ ಎಂಜಾಯ್ ಮಾಡಲು ಆಗಲ್ಲ ಅಂತ ಕೊಠಾರಿ ಹೇಳುತ್ತಾರೆ.
14 ವರ್ಷಗಳ ಹಿಂದೆ ಲಂಡನ್ನಿಂದ ಭಾರತಕ್ಕೆ ಬಂದಿರೋ ಗಜೇಂದ್ರ ಕೊಠಾರಿ, ಅಂಧೇರಿಯಿಂದ ಮುಂಬೈನ ಚರ್ಚ್ಗೇಟ್ಗೆ ಮನೆ ಶಿಫ್ಟ್ ಮಾಡಿಕೊಂಡ್ರು. 50 ಕೋಟಿ ಇದ್ದೂ ಟ್ರೈನ್ನಲ್ಲಿ ಯಾಕೆ ಓಡಾಡುತ್ತಾರೆ ಕೊಠಾರಿ ಅಂದ್ರೆ ನನಗೆ ಸಿಂಪಲ್ ಲೈಫ್ ಇಷ್ಟ. ಓಡಾಡೋಕೆ ಟ್ರೈನ್ ಬೆಸ್ಟ್. ಬೈಕ್ನಲ್ಲಿ 2 ಟು 3 ಹವರ್ಸ್ ಬೇಕು. ನನಗೆ ಮನೆಗಿಂತ ಹೆಚ್ಚಾಗಿ ಕ್ಲಬ್ ಮೆಂಬರ್ ಶಿಪ್ ಸರಿ ಅನ್ಸುತ್ತೆ. 1 ಕೋಟಿ ಕೊಟ್ಟು ಕ್ಲಬ್ ಮೆಂಬರ್ ಶಿಪ್ ಪಡೆದಿದ್ದೇನೆ. ಈ ಮನೆ 5 ವರ್ಷ ಅಗ್ರಿಮೆಂಟ್ ಇದೆ. ಈ ಮನೆಯಲ್ಲಿ ಇರುವ ಬಗ್ಗೆ ನಾವೇ ನಿರ್ಧರಿಸಬೇಕು ಅಂತ ಗಜೇಂದ್ರ ಕೊಠಾರಿ ಹೇಳುತ್ತಾರೆ.
ಇಷ್ಟೆಲ್ಲಾ ಐಡಿಯಾ ಇಟ್ಟುಕೊಂಡಿರೋ ಗಜೇಂದ್ರ ಕೊಠಾರಿ, ಕೆಲಸ ಮಾಡೋ ಉದ್ಯೋಗಿಗಳಿಗೆ ಮೆಸೇಜ್ ಕೊಟ್ಟಿದ್ದಾರೆ. ಆದಷ್ಟೂ ಆಫೀಸ್ ಹತ್ರಾ, ಮನೆ ಮಾಡಿ. ಆದರೆ ಮನೆ ಖರೀದಿಸೋ ವಿಚಾರ 15 ವರ್ಷದ ಮೇಲೆ ಮುಂದೂಡಿಕೆ ಮಾಡಿ. ಉತ್ತಮ ಫ್ಲ್ಯಾಟ್ನಲ್ಲಿ ಇರಿ. ಆಫೀಸ್ ಹತ್ತಿರದ ಫ್ಲ್ಯಾಟ್ ಇದ್ದರೆ ಎರಡು ಲಾಭ ಇರುತ್ತೆ. ಫಸ್ಟ್ ಆಫೀಸ್ನಲ್ಲೂ ಇರಬಹುದು. ಹಾಗೂ ಎರಡನೇದೂ, ಮನೆಯಲ್ಲೂ ಇದ್ದಂತೆ ಆಗುತ್ತೆ. ಟ್ರಾಫಿಕ್ ಕಿರಿ, ಕಿರಿ ಇರಲ್ಲ. ಮನೆಯಲ್ಲಿದ್ದರೆ ಕುಟುಂಬದ ಜೊತೆ ಟೈಂ ಸ್ಪೆಂಟ್ ಮಾಡಬಹುದು ಅಂತ ಗಜೇಂದ್ರ ಕೊಠಾರಿ ಅವರದ್ದೇ ಸ್ಟೈಲ್ನಲ್ಲೇ ಸಜೆಷನ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ