newsfirstkannada.com

ಒಂದು ವರ್ಷದಿಂದ ರಾಮುಲು ಜೊತೆ ಯಾವುದೇ ಸಂಬಂಧ ಇಲ್ಲ -ಬಿಜೆಪಿಗೆ ವಾಪಸ್ ಆಗುವ ಬಗ್ಗೆ ರೆಡ್ಡಿ ಹೇಳಿದ್ದೇನು?

Share :

Published January 12, 2024 at 1:20pm

    ಬಿಜೆಪಿಗೆ ವಾಪಸ್ ಆಗುವ ಸುದ್ದಿಗೆ ಜನಾರ್ದನ ರೆಡ್ಡಿ ಸ್ಪಷ್ಟನೆ

    ಲೋಕಸಭೆ ಚುನಾವಣೆಯಲ್ಲಿ ಐದು ಕ್ಷೇತ್ರದಿಂದ ಸ್ಪರ್ಧೆ

    ಕೆಆರ್​ಪಿಪಿ ಅಭ್ಯರ್ಥಿಗಳು ಕಣಕ್ಕಿಳಿಸಲು ರೆಡ್ಡಿ ನಿರ್ಧಾರ

ಕೊಪ್ಪಳದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ.. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ಕ್ಷೇತ್ರದಿಂದ ಒಟ್ಟು ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದಿದ್ದಾರೆ.

ಈ ಐದು ಕ್ಷೇತ್ರದಲ್ಲಿ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ನಾನು ಈಗಾಗಲೇ ಹೇಳಿದ್ದೀನಿ, ಬರುವ ದಿನಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಉತ್ತರ ಕರ್ನಾಟ, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಹೋರಾಟ ಮಾಡುತ್ತದೆ. ಎಲ್ಲಿ ಹಿಂದುಳಿದ ಪ್ರದೇಶಗಳಿವೆಯೋ ಅಲ್ಲಿ ಜನಾರ್ದನ ರೆಡ್ಡಿ ಹಾಗೂ ಪಕ್ಷ ಇರುತ್ತದೆ ಎಂದರು.

ಇದೇ ವೇಳೆ ಬಿಜೆಪಿಗೆ ಮತ್ತೆ ಮರಳಿ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ.. ಬಿಜೆಪಿ ಜೊತೆ ನನ್ನ ಸಂಬಂಧಗಳು ಮುಗಿದುಹೋದ ಅಧ್ಯಾಯ. ನಾನು ಈ ಹಿಂದೆಯೂ ಹೇಳಿದ್ದೀನಿ. ಈಗಲೂ ಸ್ಪಷ್ಟಪಡಿಸುತ್ತಿದ್ದೇನೆ. ನಾನು ಶ್ರೀರಾಮುಲು ಜೊತೆ ಮಾತನ್ನಾಗಿ ಒಂದು ವರ್ಷವಾಗಿದೆ. ಅವರಿಗೂ ನನಗೂ ವೈಯಕ್ತಿಕವಾಗಿ, ರಾಜಕೀಯವಾಗಿ ಸಂಬಂಧಗಳಿಲ್ಲ. ಹೀಗಿರುವಾಗ ಅವರ ಮೂಲಕ ಪ್ರಯತ್ನ ಮಾಡುವ ಪ್ರಶ್ನೆ ಎಲ್ಲಿಂದ ಬರುತ್ತದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಹೋರಾಟ ಮಾಡುವುದಂತೂ ಸತ್ಯ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ವರ್ಷದಿಂದ ರಾಮುಲು ಜೊತೆ ಯಾವುದೇ ಸಂಬಂಧ ಇಲ್ಲ -ಬಿಜೆಪಿಗೆ ವಾಪಸ್ ಆಗುವ ಬಗ್ಗೆ ರೆಡ್ಡಿ ಹೇಳಿದ್ದೇನು?

https://newsfirstlive.com/wp-content/uploads/2024/01/JANARDHANA-REDDY.jpg

Load More