/newsfirstlive-kannada/media/post_attachments/wp-content/uploads/2024/07/RCB_LSG_VIRAT.jpg)
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್‌ನ ಗ್ರೇಟೆಸ್ಟ್ ಬ್ಯಾಟರ್. ವಿಶ್ವ ಕ್ರಿಕೆಟ್ ಲೋಕದಲ್ಲಿ ಈತನ ಸಾಧನೆಗಳು ಲೆಕ್ಕಕ್ಕಿಲ್ಲ. ಇದೇ ಕಿಂಗ್ ಕೊಹ್ಲಿಯ ಕಾಂಟ್ರವರ್ಸಿಗಳು ಲೆಕ್ಕಕ್ಕಿಲ್ಲ. ಈ ಪೈಕಿ 2023ರ ಐಪಿಎಲ್ ವೇಳೆಯ ಕಿರಿಕ್ ಒಂದಾಗಿದೆ. ಇಷ್ಟು ದಿನ ಪ್ರಶ್ನಾರ್ಥಕವಾಗಿದ್ದ ಈ ಕಿರಿಕ್ನ ಅಸಲಿ ಸತ್ಯ ಈಗ ಹೊರಬಿದ್ದಿದೆ.
ಇದನ್ನೂ ಓದಿ: ತಮ್ಮನ ಹೆಂಡತಿಯನ್ನ ಕೊಚ್ಚಿ ಕೊಲೆ ಮಾಡಿದ ಮಾವ.. ಹತ್ಯೆಗೆ ಅಸಲಿ ಕಾರಣವೇನು?
ಐಪಿಎಲ್ ಸೀಸನ್-16ನ ಫೈರಿ ಕ್ಲ್ಯಾಶ್.. ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಲಕ್ನೋ ನಡುವಿನ ಮ್ಯಾಚ್. ಈ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಆ್ಯಂಡ್ ನವೀನ್ ಉಲ್ ಹಕ್ ನಡುವಿನ ಕಿರಿಕ್ ಭಾರೀ ಸದ್ದು ಮಾಡಿತ್ತು. ವಾಗ್ವಾದ ಜಾಟಾಪಟಿಗೂ ಕಾರಣವಾಗಿತ್ತು. ಲಕ್ನೋ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಆ್ಯಂಡ್ ವಿರಾಟ್ ಕೊಹ್ಲಿ ಕೈ-ಕೈ ಮಿಲಾಯಿಸುವಂತಕ್ಕೆ ತಲುಪಿತ್ತು. ಕಳೆದ ಸೀಸನ್ನಲ್ಲಿ ಗೌತಮ್ ಗಂಭೀರ್ ಇದಕ್ಕೆ ಫುಲ್ ಸ್ಟಾಫ್ ಇಟ್ಟಿದ್ದಾರೆ. ಈ ಕಿರಿಕ್ನಲ್ಲಿ ಯಾರದ್ದು ತಪ್ಪು ಎಂಬ ಪ್ರಶ್ನೆ, ಪ್ರಶ್ನೆಯೇ ಉಳಿದಿತ್ತು. ಆದ್ರೀಗ ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ‘ಕ್ಯಾಪ್ಟನ್ ಆಗೋ ಅರ್ಹತೆ ಇಲ್ಲ, ಹೇಗೆ ಮಾಡಬೇಕಂತನೂ ಗೊತ್ತಿಲ್ಲ’.. ಶುಭ್ಮನ್ ಗಿಲ್ ಬಗ್ಗೆ ಸ್ಫೋಟಕ ಹೇಳಿಕೆ
ಜಗಳಕ್ಕೆ ಬೆಂಕಿ ಹೊತ್ತಿದ್ದೇ ಬೆಂಗಳೂರಿನ ಮ್ಯಾಚ್..!
2023 ಏಪ್ರಿಲ್ 10. ಬೆಂಗಳೂರು ಹಾಗೂ ಲಕ್ನೋ ಎದುರಿನ ಮ್ಯಾಚ್. ಈ ಮ್ಯಾಚ್ ಆಕ್ಷರಶಃ ಹೈವೋಲ್ಟೇಜ್ನಿಂದ ಕೂಡಿತ್ತು. ಕೊನೆ ಎಸೆತದಲ್ಲಿ ಗೆದ್ದಿದ್ದ ಲಕ್ನೋ ಆಟಗಾರರ ಸಂಭ್ರಮ ಅತಿರೇಕದಿಂದ ಕೂಡಿತ್ತು. ಇದೇ ಪಂದ್ಯದಲ್ಲಿ ಮೆಂಟರ್ ಗೌತಮ್ ಗಂಭೀರ್ ಮಾಡಿದ ಒಂದೇ ಒಂದು ಸನ್ನೆ, ವಿರಾಟ್ EGOಗೆ ಡ್ಯಾಮೇಜ್ ಮಾಡಿತ್ತು.
ಅಂದ್ಹಾಗೆ ಅದು ಶುರುವಾಗಿದ್ದು, ಬೆಂಗಳೂರಿನ ಮ್ಯಾಚ್ನಲ್ಲಾಗಿತ್ತು. ಲಾಸ್ಟ್ ಓವರ್ನಲ್ಲಿ ನಾವು ಗೆದ್ದಿದ್ದೆವು. ಗೌತಮ್ ಗಂಭೀರ್ ಅಗ್ರೆಷನ್ ಪ್ರದರ್ಶಿಸಿದರು. ಪಬ್ಲಿಕ್ ಹೆಚ್ಚು ಸೌಂಡ್ ಮಾಡುತ್ತಿದ್ದರು. ಗೆದ್ದ ಬಳಿಕ ಗೌತಮ್ ಗಂಭೀರ್, ನಾವು ಗೆದ್ದಿದ್ದೇವೆ ಸೈಲೆಂಟ್ ಆಗಿರುವಂತೆ ಸನ್ನೆ ಮಾಡಿದ್ದರು. ಅದು ವಿರಾಟ್ ಕೊಹ್ಲಿಗೆ ಇಷ್ಟವಾಗಲಿಲ್ಲ.
ಅಮಿತ್ ಮಿಶ್ರಾ, ಕ್ರಿಕೆಟರ್
ಸುಖಾಸುಮ್ಮನೆ ಲಕ್ನೋ ಪ್ಲೇಯರ್ಸ್ಗೆ ನಿಂದನೆ!
ಬೆಂಗಳೂರಿನಲ್ಲಿ ಗೆದ್ದಿದ್ದ ಲಕ್ನೋ, ತವರಿನ ಪಂದ್ಯಕ್ಕೆ ಸಹಜವಾಗೇ ಸಜ್ಜಾಗಿತ್ತು. ಬೆಂಗಳೂರಿನ ಘಟನೆ ಬಗ್ಗೆ ಲಕ್ನೋ ಪ್ಲೇಯರ್ಸ್ ಮರೆತಿದ್ದರು. ಆದ್ರೆ, ಬೆಂಗಳೂರಿನ ಆ ಒಂದು ಸನ್ನೆ ವಿರಾಟ್, ಒಳಗೆ ಕಿಡಿ ಹೊತ್ತಿಸಿತ್ತು. ಅದು ಎಷ್ಟರ ಮಟ್ಟಿಗೆ ನೀರೊಳಗಿರ್ದುಂ ಬೆಮರ್ದಂ ಉರಗಪತಾಕಂ ಎಂಬ ಸಾಲನ್ನೇ ನನೆಪಿಸುತ್ತಿತ್ತು. ಯಾಕಂದ್ರೆ, ಪಂದ್ಯ ಆರಂಭದಿಂದ ಪಂದ್ಯದ ಅಂತ್ಯದ ತನಕ ಕೊಹ್ಲಿಯ ರೋಷಾಗ್ನಿ ಆಗಿತ್ತು.
ನಾವು ಆ ಪಂದ್ಯದ ಘಟನೆ ಅಲ್ಲಿಗೆ ಮುಕ್ತಾಯವಾಯ್ತು ಎಂದುಕೊಂಡಿದ್ದೆವು. ನಮ್ಮ ಪಂದ್ಯದಲ್ಲೂ ಮುಂದುವರಿಸಿದ್ದರು. ಇದು ನಮಗೆ ಸಮಸ್ಯೆ ಅಲ್ಲ. ಆದ್ರೆ, ಪಂದ್ಯ ಪೂರ್ತಿ ನಮ್ಮ ಆಟಗಾರರನ್ನ ನಿಂದಿಸುತ್ತಿದ್ದರು. ಯಾರೇ ಹೋಗಲಿ ಅವರನ್ನ ಬೈಯುತ್ತಿದ್ದರು. ಕೈಲ್ ಮೇಯರ್ಸ್ ಏನು ಮಾಡಿದ್ರು..? ನವೀನ್ ಉಲ್ ಹಕ್ ಬೌಲಿಂಗ್ ಮಾಡ್ತಿದ್ದರೆ, ಅವರಿಗೆ ವಿರುದ್ಧ ಮಾತನಾಡುತ್ತಿದ್ದರು.
ಅಮಿತ್ ಮಿಶ್ರಾ, ಕ್ರಿಕೆಟರ್
ಅಮಿತ್ ಮಿಶ್ರಾ ಮಾತಿಗೂ ಕ್ಯಾರೆ ಎಂದಿರಲಿಲ್ಲ ಕೊಹ್ಲಿ!
ಪಂದ್ಯದ ಆರಂಭದಿಂದಲೇ ಲಕ್ನೋ ಆಟಗಾರರನ್ನ ನಿಂದಿಸುತ್ತಿದ್ದ ವಿರಾಟ್, ಕೆಟ್ಟ ಪದಗಳನ್ನ ಬಳಕೆ ಮಾಡುತತ್ತಿದ್ದರು. ಇದಕ್ಕೆ ಮರು ಉತ್ತರವನ್ನು ಲಕ್ನೋ ಆಟಗಾರರ ನೀಡಿರಲಿಲ್ಲ. ಆದ್ರೆ, ಲಕ್ನೋ ಬ್ಯಾಟಿಂಗ್ ವೇಳೆ ಕೊಹ್ಲಿಯ ಆಕ್ರೋಶದ ಜ್ವಾಲೆ ಮತ್ತಷ್ಟು ಹೆಚ್ಚಾಗಿತ್ತು. ಈ ವೇಳೆ ಡೆಲ್ಲಿಯ ಅಮಿತ್ ಮಿಶ್ರಾನೇ, ವಿರಾಟ್ ವೀರಾವೇಶಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದರು. ಆದ್ರೆ, ತಾಳ್ಮೆ ಕಳೆದುಕೊಂಡಿದ್ದ ಅತಿರೇಕದ ಕೊಹ್ಲಿ, ಮಿಶ್ರಾ ಮಾತು ಕೇಳಲು ಸುತರಂ ಸಿದ್ಧರಿರಲಿಲ್ಲ.
ನಾನು, ನವೀನ್ ಜೊತೆ ಬ್ಯಾಟಿಂಗ್ ಮಾಡುವಾಗ ವಿರಾಟ್ಗೆ ಹೇಳಿದೆ. ಆತನ ಬಳಿ ಏನು ಮಾತನಾಡುತ್ತೀಯಾ ಆತ ಯುವ ಆಟಗಾರ ಸುಮ್ಮನೆ ಇರು, ಆಗಿದ್ದು ಆಗಿಬಿಟ್ಟಿದೆ. ಯಾಕೆ ಇನ್ನು ಹೆಚ್ಚಾ ಮಾಡುತ್ತೀಯಾ ಎಂದು ಹೇಳಿದ್ದೆ. ನನಗೆ ಹೇಳಲು ಬರಬೇಡ. ಆತನಿಗೆ ಹೇಳುವಂತೆ ಹೇಳಿದ್ದ. ನಾನು ಹೇಳಿದೆ, ನವೀನ್ ಸುಮ್ಮನಿದ್ದಾನೆ. ಈಗ ಕೆಟ್ಟದಾಗಿ ಮಾತನಾಡುತ್ತಿರುವುದು ಯಾರು ಎಂದು ಕೇಳಿದೆ. ಆತ ಕೆಟ್ಟದಾಗಿ ಏನು ನಡೆದುಕೊಂಡ ಎಂದು ಪ್ರಶ್ನಿಸಿದೆ. ನವೀನ್ ಮಾಡಿದ ಸರಿ. ನೀನು ಬಿಗ್ ಪ್ಲೇಯರ್ ಇದ್ದೀಯಾ.. ಸುಮ್ಮನೆ ಯಾಕೆ ಜಗಳ ಮಾಡುತ್ತೀಯಾ ಎಂದು ಕೊಹ್ಲಿಯನ್ನ ಪ್ರಶ್ನಿಸಿದ್ದೆ.
ಅಮಿತ್ ಮಿಶ್ರಾ, ಕ್ರಿಕೆಟರ್
ಶೇಕ್ ಹ್ಯಾಂಡ್ ವೇಳೆ ಕೊಹ್ಲಿಯಿಂದ ಕೆಟ್ಟ ಪದ ಬಳಕೆ!
ಅಮಿತ್ ಮಿಶ್ರಾ ಮಾತನ್ನ ಗೌರವಿಸದ ವಿರಾಟ್, ಮತ್ತೆ ನವೀನ್ ಮೇಲೆ ರೇಗಾಡಿದ್ದರು. ಪಂದ್ಯದ ಗೆಲುವಿನ ಬಳಿಕ ವಿರಾಟ್, ವಿಜಯೋತ್ಸವ ಸಂಭ್ರಮ ನಿಜಕ್ಕೂ ಮುಗಿಲು ಮುಟ್ಟಿತ್ತು. ತನ್ನ ಸಂಭ್ರಮದಿಂದ ಲಕ್ನೋ ಆಟಗಾರರಿಗೆ ತಿರುಗೇಟು ನೀಡಿದರು. ಆದ್ರೆ, ಈ ಅತಿರೇಕ ಇಲ್ಲಿಗೆ ನಿಂತಿರಲಿಲ್ಲ.
ಇದನ್ನೂ ಓದಿ: ಫಾಲ್ಸ್ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?
ಮ್ಯಾಚ್ ಮುಗಿದಿತ್ತು. ಮತ್ತೆ ವಿರಾಟ್ ಬೈಯಲು ಶುರು ಮಾಡಿದ್ದರು. ಈ ವೇಳೆ ಗಂಭೀರ್ ಆಗಮಿಸಿದರು. ಮ್ಯಾಚ್ ಮುಗಿದಿದೆ. ನೀವು ಗೆದ್ದಿದ್ದೀರಿ. ಮತ್ತೆ ಮತ್ತೆ ಯಾಕೆ ನೀನು ಸ್ಟಾರ್ಟ್ ಮಾಡುತ್ತೀಯಾ ಎಂದು ಕೇಳಿದರು. ಮತ್ತೆ ನಾನು ಹಾಗೂ ಗೌತಿ ಅಲ್ಲಿಂದ ಹೋದೇವು. ಶೇಕ್ ಹ್ಯಾಂಡ್ ವೇಳೆ ನವೀನ್ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಲ್ಲಿ ಶೇಕ್ ಹ್ಯಾಂಡ್ ನೀಡಿದ್ದರೆ ಎಲ್ಲವೂ ಮುಗಿಯುತ್ತಿತ್ತು. ಓರ್ವ ಐಕಾನ್ ಆಟಗಾರನಾಗಿ ಮುಂದುವರಿಸುತ್ತಾ.. ಮುಂದುವರಿಸುತ್ತಾ ಸಾಗುವುದು ನಿಜಕ್ಕೂ ಸರಿಯಲ್ಲ.
ಅಮಿತ್ ಮಿಶ್ರಾ, ಕ್ರಿಕೆಟರ್
ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್ ಕೇಸ್‌ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ
ವಿರಾಟ್ ಚೀರಾಟ, ಕೂಗಾಟ ಪಂದ್ಯಕ್ಕೆ ಸಿಮೀತವಾಗಿದ್ದರೆ ಎಲ್ಲವೂ ಮುಗಿದು ಹೋಗ್ತಿತ್ತು. ಆದ್ರೆ, ದಿಗ್ಗಜ ಆಟಗಾರನಾಗಿ ವಿರಾಟ್, ಆಫ್ ದಿ ಫೀಲ್ಡ್ನಲ್ಲೂ ಮುಂದುವರಿಸಿದರು. ಇದಕ್ಕೆ ದಂಡವನ್ನು ತೆತ್ತರು. ಆದ್ರೆ, ಸೀಸನ್-17ರ ವೇಳೆ ಕೆಕೆಆರ್ ಮೆಂಟರ್ ಆಗಿದ್ದ ಗಂಭೀರ್, ಎಲ್ಲಕ್ಕೂ ತಿಲಂಜಲಿ ಇಡುವ ನಿರ್ಧಾರಕ್ಕೆ ಬಂದಿದ್ದರು. ಇದೇ ಕಾರಣಕ್ಕೆ ಪಂದ್ಯಕ್ಕೂ ಮುನ್ನ ವಿರಾಟ್ ಜೊತೆ ಕುಟುಂಬಸ್ಥರ ಬಗ್ಗೆ ವಿಚಾರಿಸಿದ್ದರು. ಅರ್ಧಶತಕ ಸಿಡಿಸಿದ್ದ ವಿರಾಟ್ಗೆ ಶುಭ ಹಾರೈಸಿ ಎಲ್ಲಕ್ಕೂ ಬ್ರೇಕ್ ಹಾಕಿದ್ರು. ಆಟದಲ್ಲಿ ಕಿರಿಕ್, ವಿವಾದ.. ವಾಗ್ವಾದ ಇದ್ದೇ ಇರುತ್ತೆ. ಆದ್ರೆ, ಇದನ್ನೇ ಮುಂದುವರಿಸಿದರೆ, ಅದು ಆಟಗಾರನ ಲಕ್ಷಣವೇ ಅಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ