ಸೂಪರ್ ಸ್ಟಾರ್ಗಳ ಭವಿಷ್ಯದ ಬಗ್ಗೆ ಗಂಭೀರ್ ಏನ್ ಹೇಳಿದರು?
ಏಕದಿನ ವಿಶ್ವಕಪ್ ಡೋರ್ ಓಪನ್, ಆದರೆ ಷರತ್ತುಗಳು ಅನ್ವಯ
ವಿರಾಟ್ ಓಕೆ, ರೋಹಿತ್ ಶರ್ಮಾ ಮುಂದಿದೆ ಬಿಗ್ ಚಾಲೆಂಜ್
ಚಾಂಪಿಯನ್ಸ್ ಟ್ರೋಫಿಯ ಬಳಿಕ ವಿರಾಟ್ ಕೊಹ್ಲಿ- ರೋಹಿತ್ ಶರ್ಮಾರ ಭವಿಷ್ಯ ಏನು.? ಅನ್ನೋ ಚರ್ಚೆ ಜೋರಾಗಿ ನಡೆದಿತ್ತು. ಮುಂದಿನ ವರ್ಷ ನಡೆಯೋ ಪ್ರತಿಷ್ಠಿತ ಟೂರ್ನಿ ಬಳಿಕ ಕೋಚ್ ಗೌತಮ್ ಗಂಭೀರ್ ಏಕದಿನ ಫಾರ್ಮೆಟ್ನಿಂದ ಇವ್ರನ್ನ ಸೈಡ್ಲೈನ್ ಮಾಡ್ತಾರೆ ಎಂಬ ಸುದ್ದಿ ಹಲ್ಚಲ್ ಸೃಷ್ಟಿಸಿತ್ತು. ಈ ಅನುಮಾನಕ್ಕೆ ಗಂಭೀರ್ ತೆರೆ ಎಳೆದಿದ್ದಾರೆ. ಸೂಪರ್ ಸ್ಟಾರ್ ಜೋಡಿಗೆ ಗುಡ್ನ್ಯೂಸ್ ನೀಡಿರೋ ಗುರು ಗಂಭೀರ್, ಷರತ್ತುಗಳು ಅನ್ವಯ ಎಂದಿದ್ದಾರೆ.
ಇದನ್ನೂ ಓದಿ: ಸಾಲಗಾರರ ಕಾಟ.. ಡೆತ್ನೋಟ್ನಲ್ಲಿ ಹೆಸರುಗಳನ್ನ ಬರೆದಿಟ್ಟು ವ್ಯಕ್ತಿ ನಾಪತ್ತೆ
ಶ್ರೀಲಂಕಾ ಫ್ಲೈಟ್ ಹತ್ತೋ ಮುನ್ನ ನೂತನ ಹೆಡ್ ಕೋಚ್ ಗೌತಮ್ ಗಂಭೀರ್, ಮೊದಲ ಪ್ರೆಸ್ ಮೀಟ್ ಮಾಡಿದ್ದಾರೆ. ಸೆಲೆಕ್ಷನ್ ಕಮಿಟಿ ಚೇರ್ಮನ್ ಅಜಿತ್ ಅಗರ್ಕರ್ ಜೊತೆಗೆ ನಡೆಸಿದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಟೀಮ್ ಸೆಲೆಕ್ಷನ್ ಬಗ್ಗೆ ಹುಟ್ಟಿದ್ದ ಡೌಟ್ಗಳಿಗೆ ಕ್ಲೀಯರ್ ಕಟ್ ಆನ್ಸರ್ ಕೊಟ್ಟಿದ್ದಾರೆ. ಇದ್ರ ಜೊತೆಗೆ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಜೋಡಿ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಬಿಗ್ ಹಿಂಟ್ ಕೊಟ್ಟಿದ್ದಾರೆ. ಜೊತೆಗೆ ಬಿಗ್ ಟಾಸ್ಕ್ ಕೂಡ ನೀಡಿದ್ದಾರೆ.
ಇದನ್ನೂ ಓದಿ: RCB ಫ್ಯಾನ್ಸ್ಗೆ ಶಾಕಿಂಗ್ ನ್ಯೂಸ್.. ಐಪಿಎಲ್ನ ಈ ಟೀಮ್ಗೆ ರಾಹುಲ್ ದ್ರಾವಿಡ್ ಹೆಡ್ ಕೋಚ್?
ವಿರಾಟ್ ಕೊಹ್ಲಿ- ರೋಹಿತ್ ಕಥೆ ಏನು.. ಸೂಪರ್ ಸ್ಟಾರ್ಗಳ ಭವಿಷ್ಯದ ಬಗ್ಗೆ ಗಂಭೀರ್ ಮಾತು.!
T20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ T20 ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರು. ಸದ್ಯ ಏಕದಿನ, ಟೆಸ್ಟ್ಗೆ ಮಾತ್ರ ಸೀಮಿತವಾಗಿರೋ ಈ ಸೂಪರ್ ಸ್ಟಾರ್ ಜೋಡಿಯ ಭವಿಷ್ಯ ಗಂಭೀರ್ ಕೋಚ್ ಹುದ್ದೆಗೇರ್ತಿದ್ದಂತೆ ಅಲುಗಾಡಲು ಆರಂಭಿಸಿತ್ತು. ಏಕದಿನ ವಿಶ್ವಕಪ್ಗೆ ಯುವ ತಂಡ ಕಟ್ಟೋ ಲೆಕ್ಕಾಚಾರದಲ್ಲಿರೋ ಗಂಭೀರ್, ಮುಂಬರೋ ಚಾಂಪಿಯನ್ಸ್ ಟ್ರೋಫಿ ಅಂತ್ಯದ ಬಳಿಕ ಕೊಹ್ಲಿ ಹಾಗೂ ರೋಹಿತ್ಗೆ ಏಕದಿನದಿಂದಲೂ ಗೇಟ್ಪಾಸ್ ನೀಡ್ತಾರೆ ಎನ್ನಲಾಗಿತ್ತು. ಈ ಅಂತೆ-ಕಂತೆಗಳಿಗೆ ಸ್ವತಃ ಗಂಭೀರ್ ತೆರೆ ಎಳೆದಿದ್ದಾರೆ.
ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಭವಿಷ್ಯ ಸೇಫ್.!
2027ರ ಏಕದಿನ ವಿಶ್ವಕಪ್ ಟಾರ್ಗೆಟ್ ಮಾಡಿರೊ ಗಂಭೀರ್, ಯಂಗ್ ಟೀಮ್ ಕಟ್ತಾರೆ ಎನ್ನಲಾಗಿತ್ತು. ಕೋಚ್ ಆದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೇ, ಗಂಭೀರ್ ಈ ಅನುಮಾನದ ಪ್ರಶ್ನೆಗೆ ಕ್ಲೀಯರ್ ಕಟ್ ಆನ್ಸರ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರೋ ನೂತನ ಕೋಚ್ ಗೌತಮ್ ಗಂಭೀರ್, ರೋಹಿತ್- ವಿರಾಟ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಬಳಿಕವೂ ಇವರಿಬ್ಬರೂ ತಂಡದಲ್ಲಿ ಇರಲಿದ್ದಾರೆ. 2027ರ ವಿಶ್ವಕಪ್ ತಂಡದ ಡೋರ್ ಕೂಡ ಓಪನ್ ಇದೆ ಎಂದಿದ್ದಾರೆ.
ಅವರಿಬ್ಬರು ಬಿಗ್ ಸ್ಟೇಜ್ನಲ್ಲಿ ಏನು ಮಾಡಬಲ್ಲರು ಎಂಬುದನ್ನ T20 ವಿಶ್ವಕಪ್, ಏಕದಿನ ವಿಶ್ವಕಪ್ನಲ್ಲಿ ತೋರಿಸಿ ಕೊಟ್ಟಿದ್ದಾರೆ. ಇವರಿಬ್ಬರಲ್ಲಿ ಇನ್ನೂ ಹೆಚ್ಚಿನ ಕ್ರಿಕೆಟ್ ಬಾಕಿ ಉಳಿದಿದೆ ಅನ್ನೋದು ನನಗೆ ತಿಳಿದಿದೆ. ಮುಖ್ಯವಾಗಿ ಚಾಂಪಿಯನ್ಸ್ ಟ್ರೋಫಿ, ಆಸ್ಟ್ರೇಲಿಯಾ ಪ್ರವಾಸ ನಮ್ಮ ಮುಂದೆಯಿದೆ. ಫಿಟ್ನೆಸ್ ಉಳಿಸಿಕೊಂಡರೆ, 2027ರ ಏಕದಿನ ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳಬಹುದು.
ಗೌತಮ್ ಗಂಭೀರ್, ಹೆಡ್ ಕೋಚ್
ODI ವಿಶ್ವಕಪ್ ಡೋರ್ ಓಪನ್, ಷರತ್ತು ಅನ್ವಯ.!
ಗೌತಮ್ ಗಂಭೀರ್ ಪ್ರೆಸ್ಮೀಟ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ 2027ರವರೆಗೂ ಟೀಮ್ ಇಂಡಿಯಾದ ಡೋರ್ ಓಪನ್ ಇದೆ ಅನ್ನೋ ಡೈರೆಕ್ಟ್ ಮೆಸೇಜ್ ರವಾನಿಸಿದ್ದಾರೆ. ಅದ್ರ ಜೊತೆಗೆ ಷರತ್ತುಗಳು ಅನ್ವಯ ಅನ್ನೋದನ್ನೂ ಕ್ಲೀಯರ್ ಆಗಿ ತಿಳಿಸಿದ್ದಾರೆ. ಮುಂದಿನ 3 ವರ್ಷಗಳ ಕಾಲ ಫಿಟ್ನೆಸ್, ಉಳಿಸಿಕೊಂಡ್ರೆ ಮಾತ್ರ ಚಾನ್ಸ್ ಸಿಗೋದು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ನೋ ರೆಸ್ಟ್, ಫಾರ್ಮ್ನಲ್ಲಿದ್ರೆ ಮಾತ್ರ ಚಾನ್ಸ್.!
T20 ಫಾರ್ಮೆಟ್ಗೆ ಗುಡ್ ಬೈ ಹೇಳಿರುವ ರೋಹಿತ್ ಹಾಗೂ ವಿರಾಟ್ ಸದ್ಯ ಟೆಸ್ಟ್ ಹಾಗೂ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಕೇವಲ 2 ಫಾರ್ಮೆಟ್ಗಳಲ್ಲಿ ಮಾತ್ರ ಕಣಕ್ಕಿಳಿಯೋದ್ರಿಂದ ಇವರಿಬ್ಬರಿಗೆ ಮುಂದೆ ವಿಶ್ರಾಂತಿ ನೀಡಲ್ಲ ಅನ್ನೋ ನಿರ್ಧಾರವನ್ನೂ ಗಂಭೀರ್ ತಳೆದಿದ್ದಾರೆ. ಐಸಿಸಿ ಟೂರ್ನಿಗಳಿಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರೋದ್ರಿಂದ ರೆಸ್ಟ್ ನೀಡೋದು ಕಷ್ಟದ ಕೆಲಸ ಕೂಡ ಹೌದು. ಮುಂಬರೋ ಎಲ್ಲ ಸರಣಿಗಳಲ್ಲೂ ಆಡಿ, ಫಿಟ್ನೆಸ್, ಫಾರ್ಮ್ ಎರಡನ್ನೂ ಉಳಿಸಿಕೊಂಡ್ರೆ ಮಾತ್ರ, ಇಬ್ಬರಿಗೆ ಏಕದಿನ ವಿಶ್ವಕಪ್ ಆಡೋ ಚಾನ್ಸ್ ಸಿಗಲಿದೆ.
ಇದನ್ನೂ ಓದಿ: ವಾಲ್ಮೀಕಿ ಹಗರಣದ ತನಿಖೆಗೆ ಬಿಗ್ ಟ್ವಿಸ್ಟ್.. ಸಿಎಂ ಸಿದ್ದರಾಮಯ್ಯ ಮೇನ್ ಟಾರ್ಗೆಟ್; FIR ದಾಖಲು
ಕೊಹ್ಲಿ ಓಕೆ.. ರೋಹಿತ್ ಶರ್ಮಾಗಿದೆ ಬಿಗ್ ಟಾಸ್ಕ್.!
2027 ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ವಯಸ್ಸು, 40ರ ಗಡಿ ದಾಟಲಿದೆ. ಕೊಹ್ಲಿಯ ವಯಸ್ಸು 38 ಆಗಿರಲಿದೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿವಹಿಸೋ ಕೊಹ್ಲಿಗೆ, ಇಂಜುರಿ ಫ್ರಿ ಆಗಿರೋದು ದೊಡ್ಡ ಟಾಸ್ಕ್ ಏನಾಗಲ್ಲ. ಆದ್ರೆ, ರೋಹಿತ್ಗೆ ಬಿಗ್ ಟಾಸ್ಕ್ ಇದೆ. ಏಕದಿನ ವಿಶ್ವಕಪ್ ಆಡೋ ಕನಸು ನನಸಾಗಬೇಕಂದ್ರೆ, ಫಿಟ್ನೆಸ್ ವಿಚಾರದಲ್ಲಿ ರೋಹಿತ್ ಶರ್ಮಾ ಎಚ್ಚೆತ್ತುಕೊಳ್ಳಬೇಕು.
ಇದನ್ನೂ ಓದಿ: ಮಳೆ ಆರ್ಭಟ; ಮತ್ತೆ ಗುಡ್ಡ ಕುಸಿಯೋ ಆತಂಕ.. ಕೃಷ್ಣೆಗೆ ಭಾಗಿನ ಅರ್ಪಿಸಲು ಹೋಗಿ ಯುವಕ ನೀರು ಪಾಲು
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರಿಗೂ ಏಕದಿನ ವಿಶ್ವಕಪ್ ಗೆದ್ದು ವಿದಾಯ ಹೇಳುವ ಕನಸಿದೆ. ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಆ ಕನಸನ್ನ ನನಸು ಮಾಡಿಕೊಳ್ಳಲು ಅವಕಾಶವನ್ನೂ ನೀಡಿದ್ದಾರೆ. ಆದ್ರೆ, ಗಂಭೀರ್ ಹಾಕಿರೋ ಷರತ್ತುಗಳನ್ನ ಗೆಲ್ಲಬೇಕಿದೆ. ಆ ಕಠಿಣ ಸವಾಲನ್ನ ಸೂಪರ್ ಸ್ಟಾರ್ ಜೋಡಿ ಮೀರಿ ನಿಲ್ಲುತ್ತಾ ಅನ್ನೋದೆ ಸದ್ಯದ ಕುತೂಹಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ