ಡ್ರೆಸ್ಸಿಂಗ್ ರೂಮ್​​ನಲ್ಲಿ ಕೊಹ್ಲಿ ಜೊತೆ ಗಂಭೀರ್ ಬೇಸರ.. ಮಾತುಕತೆಯ ದೃಶ್ಯ ವೈರಲ್..!

author-image
Ganesh
Updated On
ಡ್ರೆಸ್ಸಿಂಗ್ ರೂಮ್​​ನಲ್ಲಿ ಕೊಹ್ಲಿ ಜೊತೆ ಗಂಭೀರ್ ಬೇಸರ.. ಮಾತುಕತೆಯ ದೃಶ್ಯ ವೈರಲ್..!
Advertisment
  • ಕೊಹ್ಲಿ ಔಟ್ ಆಗ್ತಿದ್ದಂತೆ ಅಪ್​ಸೆಟ್ ಆದ ಗಂಭೀರ್
  • ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ
  • ಆಸ್ಟ್ರೇಲಿಯಾ ಸೋಲಿಸಿ ಫೈನಲ್​ಗೆ ಬಂದಿರುವ ಭಾರತ

ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿತು. ಟೀಂ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ ನಿರ್ಣಾಯ ಪಾತ್ರವಹಿಸಿದರು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಗಿಲ್ ಬೇಗ ಪೆವಿಲಿಯನ್‌ಗೆ ಮರಳಿದ್ದರು. ಆದರೆ ಕೊಹ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಕೊಹ್ಲಿ ಶತಕ ವಂಚಿತರಾಗಿರಬಹುದು, ಆದರೆ 84 ರನ್‌ಗಳ ವಿನ್ನಿಂಗ್​ ಇನ್ನಿಂಗ್ಸ್ ಆಡಿದರು. ಇದೀಗ ಕೊಹ್ಲಿ ಗಂಭೀರ್​ಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗ್ತಿದೆ. ಕೊಹ್ಲಿ ಔಟ್​ ಆಗಿ ಪೆವಿಲಿಯನ್​ಗೆ ಹೋದ ಸಂದರ್ಭದಲ್ಲಿ, ಗಂಭೀರ್​ ಜೊತೆ ಮಾತನಾಡುತ್ತಿರುವ ದೃಶ್ಯ ಅದಾಗಿದೆ. ಕೊಹ್ಲಿ ಔಟ್ ಆಗಿ ಹೋಗ್ತಿದ್ದಂತೆ ಗಂಭೀರ್ ನಿರಾಶೆಗೊಂಡರು. ಕೊಹ್ಲಿ ಶತಕ ಗಳಿಸಲು ಸಾಧ್ಯವಾಗದಿದ್ಕೆ ಗಂಭೀರ್ ಬೇಸರಗೊಂಡತೆ ಕಾಣ್ತಿದೆ.

ಇದನ್ನೂ ಓದಿ: ಸ್ಪಿನ್ನರ್ ಆಗಿ ಎಂಟ್ರಿ.. ಆದ್ರೆ ಬ್ಯಾಟಿಂಗ್​ ಲೆಜೆಂಡ್​ ಆದ ಸ್ಟೀವ್ ಸ್ಮಿತ್; ಹೇಗಿತ್ತು ಅವರ ಕ್ರಿಕೆಟ್​ಗೆ ಜರ್ನಿ?

ಆ ಅವಧಿಯಲ್ಲಿ ಗಂಭಿರ್ ಮತ್ತು ಕೊಹ್ಲಿ ನಡುವೆ ಏನು ಸಂಭಾಷಣೆ ನಡೆಯಿತು ಅನ್ನೋದ್ರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಸೆಮಿಫೈನಲ್ ಗೆದ್ದ ನಂತರ, ಮುಖ್ಯ ಕೋಚ್ ವಿರಾಟ್ ಕೊಹ್ಲಿಯನ್ನು ಸಾಕಷ್ಟು ಹೊಗಳಿದರು. ಕೊಹ್ಲಿ ಒಬ್ಬ ಶ್ರೇಷ್ಠ ODI ಕ್ರಿಕೆಟಿಗ. ಟಾರ್ಗೆಟ್ ಕೊಡೋದು ಮತ್ತು ಚೇಸಿಂಗ್ ಮಾಡೋದು ಎರಡೂ ಚೆನ್ನಾಗಿ ಗೊತ್ತಿದೆ. ಪರಿಸ್ಥಿತಿಗೆ ಬೇಗ ಹೊಂದಿಕೊಳ್ಳುತ್ತಾರೆ. ಈ ಸ್ವರೂಪದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಎಂದು ಬಣ್ಣಿಸಿದ್ದಾರೆ.

ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದೆ. ಅಂತಿಮ ಹಣಾಹಣಿಯಲ್ಲಿ ನ್ಯುಜಿಲೆಂಡ್ ಹಾಗೂ ಭಾರತ ತಂಡ ಸೆಣಸಾಟ ನಡೆಸಲಿವೆ. ಮಧ್ಯಾಹ್ನ 2.30ಕ್ಕೆ ದುಬೈ ಅಂತಾರಾಷ್ಟ್ರಿಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ನಯನತಾರಾಗೆ ದುನಿಯಾ ವಿಜಯ್ ವಿಲನ್.. ಟಾಲಿವುಡ್​ ಬೆನ್ನಲ್ಲೇ ಕಾಲಿವುಡ್​ನಲ್ಲೂ ಫುಲ್ ದುನಿಯಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment