/newsfirstlive-kannada/media/post_attachments/wp-content/uploads/2025/04/ganesh-karanth4.jpg)
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿ ನಂ 1' ಸೀಸನ್ 2ಕ್ಕೆ ಎಂಟ್ರಿ ಕಾಮಿಡಿ ಜೋಡಿ ಅಪಾಯದಿಂದ ಪಾರಾಗಿದೆ ಅಂತಲೇ ಹೇಳಬಹುದು. ಹೌದು, ಯೂಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಫೇಮಸ್ ಆಗಿರುವ ಗಣೇಶ್ ಕಾರಂತ್ ಮತ್ತು ವಿದ್ಯಾ ದಂಪತಿ ಎರಡು ವಾರಗಳ ಹಿಂದೆಯಷ್ಟೇ ಜಮ್ಮು ಕಾಶ್ಮೀರಕ್ಕೆ ಪ್ರವಾಸ ಬೆಳೆಸಿದ್ದರು.
ಇದನ್ನೂ ಓದಿ: ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!
ಅದರಲ್ಲೂ ಭಯೋತ್ಪಾದಕರು ಗುಂಡಿನ ದಾಳಿ ನಡೆದಿದ್ದ ಪಹಲ್ಗಾಮ್ನಲ್ಲಿ ಗಣೇಶ್ ಕಾರಂತ್ ಕುಟುಂಬಸ್ಥರು ಎರಡು ವಾರಗಳ ಹಿಂದಷ್ಟೇ ಅಲ್ಲಿಗೆ ಹೋಗಿ ಬಂದಿದ್ದರಂತೆ. ಅಲ್ಲದೇ ಜಮ್ಮು ಕಾಶ್ಮೀರ ಪ್ರವಾಸದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದರು.
ಆದ್ರೆ ಭಯೋತ್ಪಾದಕರು ತಾವಿದ್ದ ಜಾಗದಲ್ಲೇ ಗುಂಡಿನ ದಾಳಿ ನಡೆಸಿದ್ದ ವಿಚಾರ ತಿಳಿದ ಕೂಡಲೇ ಆತಂಕಕ್ಕೆ ಒಳಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಪ್ರವಾಸ ಬಗ್ಗೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಬಹಳ ಸಂಕಟದಿಂದ ಈ ವಿಡಿಯೋ ಮಾಡ್ತಾ ಇದ್ದೀನಿ ಅಂತ ಹೇಳಿದ್ದಾರೆ.
View this post on Instagram
ಕಾಶ್ಮೀರದ ಪಹಲ್ಗಾಮ್ನ ಕಣಿವೆ ಮೇಲೆ 4 ಭಯೋತ್ಪಾದಕರು ಹಿಂದೂಗಳನ್ನು ಟಾರ್ಗೆಟ್ ಮಾಡಿ ಗುಂಡಿಟ್ಟು ಸಾಯಿಸಿದ್ದಾರೆ. 2 ವಾರಗಳ ಹಿಂದೆ ನನ್ನ ಕುಟುಂಬ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ ಬಂದಿದ್ವಿ. ಈಗ ಅಟ್ಯಾಕ್ ಆಗಿರೋ ಜಾಗದಲ್ಲೇ ನಾವು ಇದ್ವಿ. ಈಗ ಅದನ್ನು ನೆನಸಿಗೊಂಡರೇ ಭಯ ಆಗ್ತಿದೆ. ನಿನ್ನೆಯಷ್ಟೇ ಜಮ್ಮು ಟ್ರಿಪ್ ವಿಡಿಯೋವನ್ನು ಹಾಕಿದ್ವಿ. 10 ದಿನಗಳ ಕಾಲ ಜಮ್ಮು ಕಾಶ್ಮೀರನಲ್ಲೇ ಇದ್ವಿ. ಉಗ್ರರು ಪಹಲ್ಗಾಮ್ ಜಾಗವನ್ನೇ ನೋಡಿ ಅಟ್ಯಾಕ್ ಮಾಡಿದ್ದಾರೆ. ಅಲ್ಲಿ ಓಡಿ ಹೋಗೋಕು ಜಾಗವಿಲ್ಲ. ಅಲ್ಲಿ ಅಟ್ಯಾಕ್ ಆದ್ರೆ ತುಂಬಾ ಕಷ್ಟ ಅಂತ ಹೇಳಿದ್ದಾರೆ.
ಗಣೇಶ್ ಕಾರಂತ್ ಯಾರೆಂದು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಗೊತ್ತೇ ಇರುತ್ತೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರೋ ಗಣೇಶ್ ಕಾರಂತ್ ಸಿನಿಮಾ ಹಿನ್ನೆಲೆ ಗಾಯಕ, ಅಷ್ಟೇ ಅಲ್ಲ ಕಾಮಿಡಿ ವಿಡಿಯೋಗಳನ್ನು ಮಾಡುವುದರಲ್ಲಿ ಕೂಡಾ ಎತ್ತಿದ ಕೈ. ಜೊತೆಗೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕ್ರಿಕೆಟ್, ಸಿನಿಮಾ ರಿವ್ಯೂ ಕೂಡಾ ಮಾಡುತ್ತಾ ಇರುತ್ತಾರೆ. ಆದ್ರೆ ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿ ಬಗ್ಗೆ ಮಾತಾಡುತ್ತಾ ಭಾವುಕರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ