ಇನ್​ಸ್ಟಾದಲ್ಲಿ ಜಸ್ಟ್​ 20,000 ರೂಪಾಯಿಗೆ iPhone.. ಜಾಹೀರಾತು ಬಗ್ಗೆ ಹುಷಾರ್​​..!

author-image
Bheemappa
Updated On
ಇನ್​ಸ್ಟಾದಲ್ಲಿ ಜಸ್ಟ್​ 20,000 ರೂಪಾಯಿಗೆ iPhone.. ಜಾಹೀರಾತು ಬಗ್ಗೆ ಹುಷಾರ್​​..!
Advertisment
  • ಜಾಹೀರಾತು ನಂಬಿ ಹೋದ ಮಹಿಳೆಗೆ ಏನ್ಮಾಡಿದ್ದಾರೆ ಗೊತ್ತಾ?
  • ಇನ್​ಸ್ಟಾದಲ್ಲಿ ಬರುವ ಪ್ರತಿ ಜಾಹೀರಾತುಗಳ ಬಗ್ಗೆ ಎಚ್ಚರ ಇರಲಿ
  • 45 ಡೆಬಿಟ್ ಕಾರ್ಡ್, 40ಕ್ಕೂ ಅಧಿಕ ಕ್ಯೂಆರ್​ ಕೋಡ್​ ವಶಕ್ಕೆ

ಲಕ್ನೋ: ಇನ್​ಸ್ಟಾಗ್ರಾಮ್​​​​ನಲ್ಲಿ ಕೇವಲ 20,000 ರೂಪಾಯಿಗಳಿಗೆ ಐಫೋನ್ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗೌರ್ ಸಿಟಿ ಸೆಂಟರ್‌ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಅನುಪಮ್ ಬ್ಯಾನರ್ಜಿ (45) ಮತ್ತು ರವಿ ಅಗರ್ವಾಲ್ (29) ಬಂಧಿತರು. ಈ ಇಬ್ಬರು ಸೇರಿ ಐಫೋನ್​ಗಳನ್ನು ಕಡಿಮೆ ದರದಲ್ಲಿ ಅಂದರೆ 20,000 ರೂಪಾಯಿಗೆ ನೀಡುವುದಾಗಿ ಇನ್​ಸ್ಟಾದಲ್ಲಿ ಪೋಸ್ಟ್​ ಶೇರ್ ಮಾಡುತ್ತಿದ್ದರು. ಇದನ್ನು ನಂಬಿ ಫೋನ್ ಮಾಡಿ ಸಂಪರ್ಕ ಸಾಧಿಸುತ್ತಿದ್ದ ಗ್ರಾಹಕರಿಗೆ ಸಾವಿರಾರು ರೂಪಾಯಿಗಳನ್ನು ವಂಚನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದೇ ರೀತಿ ಮಹಿಳೆಯೊಬ್ಬರು ಈ ಖದೀಮರ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ್ದರು. ಇಬ್ಬರು ಖದೀಮರು ಏನೇನೋ ನೆಪಗಳನ್ನು ಹೇಳಿ ಮಹಿಳೆಯಿಂದ 43,000 ರೂ.ಗಳನ್ನು ಅಕೌಂಟ್​ಗೆ ಹಾಕಿಸಿಕೊಂಡಿದ್ದರು. ಆದರೂ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಹಿಳೆ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ಆದರೆ ಈ ಕೇಸ್​ ಅನ್ನು ಮನೇಸರ್​ದಲ್ಲಿನ ಸೈಬರ್​ ಪೊಲೀಸರಿಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಶುಭ್​ಮನ್​ ಗಿಲ್ ಔಟ್ ಆಗಿದ್ದು ಹೇಗೆ.. ಕಿವೀಸ್​ ಆಲ್​ರೌಂಡರ್ ಹಿಡಿದ ಆ ಕ್ಯಾಚ್ ಹೇಗಿದೆ?

publive-image

ಈ ಸಂಬಂಧ ತನಿಖೆ ಕೈಗೊಂಡಿದ್ದ ಸೈಬರ್ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇದೇ ರೀತಿ 100ಕ್ಕೂ ಅಧಿಕ ಜನರಿಗೆ ವಂಚಿಸಿರುವುದು ತನಿಖೆ ವೇಳೆ ಗೊತ್ತಾಗಿದೆ. ಇವರ ಬ್ಯಾಂಕ್ ಅಕೌಂಟ್​ ಬಗ್ಗೆ ತನಿಖೆ ನಡೆಸಿದಾಗ, ಬೀದಿ ಬದಿ ಹಣ್ಣುಗಳನ್ನು ಮಾರುವ ವ್ಯಾಪಾರಸ್ಥನಿಗೆ ಬ್ಯಾಂಕ್ ಅಕೌಂಟ್ ಮಾಡಿಸಿಕೊಡುವುದಾಗಿ ಎಲ್ಲ ದಾಖಲೆ ಪಡೆದುಕೊಂಡಿದ್ದರು. ಇದರಿಂದಲೇ ಅಕೌಂಟ್ ಮಾಡಿಸಿಕೊಂಡು ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಇನ್ನು ಬಂಧಿತರಿಂದ 45 ಡೆಬಿಟ್ ಕಾರ್ಡ್​, 45 ಚೆಕ್​ ಬುಕ್​ಗಳು, 17 ಮೊಬೈಲ್​ ಫೋನ್​ಗಳು, 36 ಸಿಮ್​ ಕಾರ್ಡ್ಸ್​, ಮೂರು ಲ್ಯಾಪ್​ಟ್ಯಾಪ್​ ಹಾಗೂ 40ಕ್ಕೂ ಅಧಿಕ ಕ್ಯೂಆರ್​ ಕೋಡ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಇಬ್ಬರು ಅಲ್ಲದೇ ಗ್ಯಾಂಗ್​ನಲ್ಲಿ ಇನ್ನಷ್ಟು ಆರೋಪಿಗಳು ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment