ಮಂಗಳೂರಲ್ಲಿ ಯುವತಿ ಮೇಲೆ ಗ್ಯಾಂಗ್​ರೇಪ್ ಆರೋಪ ಗೂಗಲ್ ಪೇನಿಂದ ಸೆರೆ ಸಿಕ್ಕ ಶಂಕಿತರು..!

author-image
Ganesh
Updated On
ಮಂಗಳೂರಲ್ಲಿ ಯುವತಿ ಮೇಲೆ ಗ್ಯಾಂಗ್​ರೇಪ್ ಆರೋಪ ಗೂಗಲ್ ಪೇನಿಂದ ಸೆರೆ ಸಿಕ್ಕ ಶಂಕಿತರು..!
Advertisment
  • ಕೃತ್ಯ ನಡೆದ 15 ಗಂಟೆಯೊಳಗೆ ಮೂವರು ಅರೆಸ್ಟ್
  • ಉಳ್ಳಾಲದ ಕುತ್ತಾರು ಕೋಡಿ ಎಂಬಲ್ಲಿ ಕೃತ್ಯ
  • ಮಧ್ಯರಾತ್ರಿ 12:30‌ಕ್ಕೆ ಮನೆ ಬಾಗಿಲು ಬಡಿದಾಗ ಏನಾಯ್ತು?

ಆಕೆ ಕೆಲಸ ಅರಸಿ ದೂರದ ಪಶ್ಚಿಮ‌ ಬಂಗಾಳದಿಂದ ಮಂಗಳೂರಿಗೆ ಬಂದವಳು. ಆಟೋ ಹತ್ತಿ ನಗರದೆಲ್ಲೆಡೆ ಸುತ್ತಾಡಿದ ಯುವತಿಯನ್ನ ಪುಸಲಾಯಿಸಿದ ಆಟೋ ಚಾಲಕ ಕೆಲಸ ಕೊಡಿಸೋ ನೆಪದಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಕೃತ್ಯ ನಡೆದ 15 ಗಂಟೆಯೊಳಗೆ ಮೂವರು ಕಾಮುಕರನ್ನ ಮಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆರೋಪ ಏನು..?

ಮಂಗಳೂರು ಹೊರವಲಯದ ಉಳ್ಳಾಲದ ಕುತ್ತಾರು ಕೋಡಿ ಎಂಬಲ್ಲಿ ಬುಧವಾರದ ತಡರಾತ್ರಿ ಈ ಪೈಶಾಚಿಕ ಕೃತ್ಯ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿ ಕೇರಳದ ಕಾಸರಗೋಡಿನ ಉಪ್ಪಳದಲ್ಲಿ ಫ್ಲೈವುಡ್ ಫ್ಯಾಕ್ಟಿರಿಯಲ್ಲಿ ಕೆಲಸ ಮಾಡ್ತಿದ್ಲು. ಬುಧವಾರ ಸ್ನೇಹಿತನ ಜೊತೆ ಮಂಗಳೂರಿಗೆ ಕೆಲಸ ಹುಡಕೊಂಡು ಬಂದಿದ್ಲು. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈಕೆ ಮಂಗಳೂರಿನ‌ ಆಟೋ ಚಾಲಕ ಮುಲ್ಕಿ ಮೂಲದ ಪ್ರಭುರಾಜ್ ಎಂಬಾತನ ಆಟೋ ಹತ್ತಿದ್ಲು. ಆಕೆಯನ್ನ ಪುಸಲಾಯಿಸಿದ ಚಾಲಕ, ರೊಟ್ಟಿ ಕಂಪನಿಯಲ್ಲಿ ಕೆಲಸ ಕೊಡಿಸ್ತೀನಿ ಅಂತ ನಂಬಿಸಿದ್ದ. ಹೀಗಾಗಿ ಸಂಜೆವರೆಗೂ ಆಟೋದಲ್ಲಿ ಸುತ್ತಾಡಿದ್ಲು. ಬಳಿಕ ಇಬ್ಬರು ಸ್ನೇಹಿತರನ್ನ ಹತ್ತಿಸಿಕೊಂಡವನು ಯುವತಿಗೆ ಮದ್ಯಪಾನ ಮಾಡಿಸಿದ್ರು. ಅಷ್ಟೊತ್ತಿಗೆ ರಾತ್ರಿ, ಆಟೋ ಬಿಟ್ಟು ಕಾರಿನಲ್ಲಿ ಆಕೆ ಮೇಲೆ ಮೂವರು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಇದೆ. ನಶೆಯಲ್ಲಿದ್ದ ಆಕೆಗೆ ಪ್ರಜ್ಞೆ‌ ಬಂದಾಗ ಸಾಮೂಹಿಕ ಅತ್ಯಾಚಾರ ನಡೆದಿದೆ ಅನ್ನೋದು ಅರಿವಿಗೆ ಬಂದಿದೆ. ಆಕೆಯ ಚೀರಾಟಕ್ಕೆ ಹೆದರಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮಗನೊಂದಿಗೆ ಹೋದ ಅಪ್ಪನಿಗೂ ಆಪರೇಷನ್.. ವೈದ್ಯರ ಮಹಾ ಯಡವಟ್ಟು; ರೋಗಿ ಫುಲ್‌ ಕಂಗಾಲು!

publive-image

ಬೆಳಕಿಗೆ ಬಂದಿದ್ದು ಹೇಗೆ..?

ಸಮಯ.. ಮಧ್ಯರಾತ್ರಿ 12:30‌.. ಸ್ಥಳ ಕುತ್ತಾರು ಕೋಡಿಯ ಮನೆ.. ಆ ಮನೆಯ ಬಾಗಿಲು ಬಡಿದ ಯುವತಿ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ಲು.. ನಶೆಯಲ್ಲಿದ್ದ ಯುವತಿಗೆ ಹಿಂದಿ ಭಾಷೆಯಲ್ಲಿ ಮಾತಾಡಿದ್ಲು.. ನೀರು ಕೇಳಿದ್ಳು, ನೀರು ಕುಡಿದ ಬಳಿಕ ಅಲ್ಲೇ ಕುಸಿದು ಬಿದ್ದಿದ್ಲು.. ಆಕೆಯ ಮೈಯಲ್ಲೆಲ್ಲಾ ಗಾಯದ ಗುರುತು.. ಅರೆಪ್ರಜ್ಞಾ ಸ್ಥಿತಿ.. ವಿಷಯ ತಿಳಿದ ಪೊಲೀಸರು, ಖಾಸಗಿ ಆಸ್ಪತ್ರೆ ಸೇರಿಸಿದ್ರು.. ಎಚ್ಚರಗೊಂಡು ಹೇಳಿದ್ದು ನರಕಯಾತನೆ ಕಥೆ..

ಆರೋಪಿಗಳು ಬಂಧನ ಹೇಗಾಯ್ತು..?

ಯುವತಿ ಆಟೋ ಹತ್ತಿ ಮೊಬೈಲ್ ರಿಪೇರಿಗೆ ಹೋಗಿದ್ದಾಗ ಆಟೋ ಚಾಲಕನಿಗೆ ಬಾಡಿಗೆ ಎಂದು‌ 60 ರೂಪಾಯಿ ಗೂಗಲ್ ಪೇ ಮಾಡಿದ್ದಾಳೆ. ಇದೇ ಆಧಾರದಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಶರ್ಮಾ ಪ್ಯಾಂಟ್ ಚೆಕ್ ಮಾಡಿದ ಸೂರ್ಯಕುಮಾರ್.. ಪಂದ್ಯದ ಮಧ್ಯೆ ಏನಾಯಿತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment