/newsfirstlive-kannada/media/post_attachments/wp-content/uploads/2024/04/Janardhana-Reddydy.jpg)
ಬಿಜೆಪಿಗೆ ಘರ್​ ವಾಪ್ಸಿ ಮಾಡಿರುವ ಗಂಗಾಗತಿ ಶಾಸಕ ಜನಾರ್ದನ ರೆಡ್ಡಿ ತಮ್ಮ 13 ವರ್ಷದ ಅಜ್ಞಾತ ವಾಸದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನ್ಯೂಸ್​​ಫಸ್ಟ್​ ಎಕ್ಸ್​​ಕ್ಲೂಸಿವ್​ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಹಳೆಯ ಜೀವನ ಶೈಲಿ, ಹೆಲಿಕಾಪ್ಟರ್​ನಲ್ಲಿ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರೆಡ್ಡಿ ಮೇಲೆ ಅಸೂಯೆ ಹೆಚ್ಚಾಗಲು ಲೈಫ್​ಸ್ಟೈಲ್​ ಕಾರಣವೇ?
ಅವತ್ತು ಇದೇ ಬಟ್ಟೆ ಹಾಕುತ್ತಿದೆ. ಸ್ಪೆಷಲ್​ ಆಗಿ ಏನು ಇರುತ್ತಿರಲಿಲ್ಲ. ಬಳ್ಳಾರಿಯಲ್ಲಿ ಹುಟ್ಟಿ ಬೆಳೆದ ನಾನು ಶ್ರೀಮಂತಿಗೆ ಬಂದಾಗ ಬೆಂಗಳೂರಿಗೆ ಶಿಫ್ಟ್​ ಆಗಿ ಇಲ್ಲಿರುವ ಹೈ-ಫೈ ಲೈಪ್​ ನಾನು ಲೀಡ್​ ಮಾಡಲು ಹೋಗಿಲ್ಲ. ಬಳ್ಳಾರಿಯಿಂದ ಬೆಂಗಳೂರಿಗೆ ಬರಲು 5-6 ತಾಸು ಪ್ರಯಾಣವಾಗುತ್ತಿತ್ತು. ಅತ್ತಿನ ರೋಡ್​, ಪರಿಸ್ಥಿತಿ, ಬಂದು ಹೋಗಲು 12 ತಾಸು ಬೇಕಾಗುತ್ತಿತ್ತು. ಭಗವಂತ ನನಗೆ ಕೊಟ್ಟಿರುವ ಐಶ್ವರ್ಯದಲ್ಲಿ 20 ಕೋಟಿ ಬೆಲೆಯ ಹೆಲಿಕಾಪ್ಟರ್​ನಲ್ಲಿ ಒಂದು ಗಂಟೆಯಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಹೋಗಲಿಕ್ಕೆ ಅವಕಾಶ ಇತ್ತು ಎಂದು ಜನರ್ದನ ರೆಡ್ಡಿ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/01/JANARDHAN-REDDY.jpg)
ಬಳಿಕ ಮಾತು ಮುಂದುವರಿದ ಅವರು, ಹುಟ್ಟುರಿನಲ್ಲೇ ಬಡತನದಲ್ಲಿ ಬೆಳೆದ ನಾನು ಎಷ್ಟೇ ಐಶ್ವರ್ಯ ಸಂಪತ್ತು ಬಂದ್ರೂ ಕೂಡ ಬಳ್ಳಾರಿಯಲ್ಲಿ ನಾನು ಬೆಳಿಗ್ಗೆ ಸಾರ್ವಜನಿಕರನ್ನು ಭೇಟಿ ಮಾಡಿ, ಫ್ಯಾಮಿಲಿಯನ್ನು ಭೇಟಿ ಮಾಡಿ, ಬೆಂಗಳೂರು ಬರಲು ಒಂದು ತಾಸು, ಸಂಜೆ ಕೆಲಸ ಮುಗಿಸಿಕೊಂಡು ವಾಪಾಸ್ಸು ಹೋಗುತ್ತಿದ್ದೆ. ಕಾರಣ ಅಂದರೆ ಜನರ ನಡುವೆ ನಿರಂತರವಾಗಿ ಇರಬೇಕು ಎಂದು ನಾನು ಮಾಡಿದ್ದು. ಕೆಲವೊಮ್ಮ ಅದನ್ನ ಮಾಧ್ಯಮ ಸ್ನೇಹಿತರು ಆ ಕಾಲದಲ್ಲಿ ಹೆಲಿಕಾಪ್ಟರ್ ಅಂದ್ರೆ ರಾಜಕಾರಣಿಗಳಿಗೆ ಒಂದು ಹೊಸ ವಿಚಾರವಾಗಿತ್ತು. ಅದರಲ್ಲೂ ಹೆಲಿಕಾಪ್ಟರ್​ನಲ್ಲಿ ಓಡಾಡುವುದು ಒಂದು ಅಸೂಯೆ ಹೆಚ್ಚಾಯುತ್ತು. ಸಾಯಂಕಾಲ ನನಗೆ ನಿದ್ದೆ ಮಾಡಲು ಬೆಂಗಳೂರಿನಲ್ಲಿ ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಗೇ ಹೋಗ್ಬೇಕು, ಫ್ಯಾಮಿಲಿ ಮಕ್ಕಳ ಜೊತೆ ಇರಬೇಕು. ಬೆಳಿಗ್ಗೆ ಎದ್ದಾಗ ನೂರಾರು ಜನರ ಮುಖ ನೋಡುತ್ತೇನೆ ಅವರ ಸಮಸ್ಯೆ ಆಲಿಸ್ತೇನೆ. ಹಾಗೆಯೇ ಆ 12 ಗಂಟೆ ಸಮಯವನ್ನ 2 ಗಂಟೆಗೆ ಸೀಮಿತ ಮಾಡುವುದರಿಂದ 10 ಗಂಟೆ ಕಾಲ ಜನರ ಜೊತೆ ಬೆರೆಯಬಹುದು ಎನ್ನುವುದಕ್ಕೆ ಹೆಲಿಕಾಫ್ಟರ್​ ಸೌಲಭ್ಯ ದೇಶದಲ್ಲಿಯೇ ಸುದ್ದಿಯಾಯ್ತು. ಅದು ಹಣೆ ಬರಹ ಅಷ್ಟೇ ಎಂದು ಹೇಳಿದ್ದಾರೆ.
ವಿ.ಸೂ:ಇಂದು ಸಂಜೆ 4:57ಕ್ಕೆ ಗಾಲಿ ಜನಾರ್ನದ ರೆಡ್ಡಿ ಜೊತೆ ನ್ಯೂಸ್​ ಫಸ್ಟ್​​ ಎಕ್ಸ್​ಕ್ಲೂಸಿವ್​ ಸಂದರ್ಶನ ‘‘ಫಿನಿಕ್ಸ್’’ ರೆಡ್ಡಿ ಪ್ರಸಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us