newsfirstkannada.com

‘ಲೋಕ’ ಚುನಾವಣೆಗೆ ಸ್ಪರ್ಧಿಸಲು ಗ್ಯಾಂಗ್​ಸ್ಟರ್​ ಸಖತ್​ ಪ್ಲಾನ್​! ರಾತ್ರೋ ರಾತ್ರಿ 46 ವರ್ಷದ ಮಹಿಳೆಯನ್ನು ವಿವಾಹವಾದ

Share :

Published March 21, 2024 at 1:45pm

Update March 21, 2024 at 1:46pm

    ‘ಲೋಕ’ ಸಮರಕ್ಕೆ ಎಂಟ್ರಿ ನೀಡಲು ಸಜ್ಜಾದ ಗ್ಯಾಂಗ್​ಸ್ಟರ್

    ಲಾಲೂ ಪ್ರಸಾದ್​ ಯಾದವ್​ ಪಕ್ಷದಿಂದ ಸ್ಪರ್ಧಿಸಲು ಸಖತ್​ ಪ್ಲಾನ್​

    17 ವರ್ಷ ಜೇಲೂಟ ಸವಿದಿದ್ದ ಈತ 2023ರಲ್ಲಿ ಜೈಲಿನಿಂದ ಹೊರಬಂದ

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು 17 ವರ್ಷ ಸೆರೆಮನೆ ವಾಸಕ್ಕೆ ಗುರಿಯಾಗಿದ್ದ ಗ್ಯಾಂಗ್​ಸ್ಟರ್​ ಮಾಸ್ಟರ್​ ಪ್ಲಾನ್​ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. 60 ವರ್ಷ ವಯಸ್ಸಿನ ಗ್ಯಾಂಗ್​ಸ್ಟರ್ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲು ರಾತ್ರೋ ರಾತ್ರಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್​ ನೀಡಿದ್ದಾನೆ.

ಅಶೋಕ್​​ ಮಹ್ತೋ ಬಿಹಾರದ ನವಾಡ ಪ್ರದೇಶದ ಕೋನನ್​​ಪುರ ಗ್ರಾಮದ ದೊಡ್ಡ ಗ್ಯಾಂಗ್​ಸ್ಟರ್​. ಈತನ ಮೇಲೆ 2005ರಲ್ಲಿ ನಡೆದ ಸಂಸದ ರಾಜೋ ಸಿಂಗ್​ ಅವರ ಹತ್ಯೆ ಪ್ರಕರಣದ ಜೊತೆಗೆ ನವಾಡ ಜೈಲ್​ ಬ್ರೇಕ್​ ಮಾಡಿದ ಪ್ರಕರಣವು ಇತ್ತು. 17 ವರ್ಷ ಜೇಲೂಟ ಸವಿದಿದ್ದ ಈತ 2023ರಲ್ಲಿ ಜೈಲಿನಿಂದ ಹೊರಬಂದಿದ್ದಾನೆ.

46 ವರ್ಷದಾಕೆಯ ಜೊತೆ 60 ವರ್ಷದ ಗ್ಯಾಂಗ್​ಸ್ಟರ್​ ಮ್ಯಾರೇಜ್

ಆದರೀಗ ಅಶೋಕ್​​ ಮಹ್ತೋ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಲಾಲು ಪ್ರಸಾದ್​ ಯಾದವ್​ ಜೊತೆ ಈ ಮೊದಲು ಹೇಳಿಕೊಂಡಿದ್ದನಂತೆ. ಅದರಂತೆ ಜೈಲಿಂದ ಹೊರಬಂದ ಆತನ ಚಿಂತನೆ ನಡೆಸಿದ್ದು, ಶೇಖ್​ಪುರದ ಜೆಡಿಯು ಶಾಸಕ ರಣಧೀರ್​ ಕುಮಾರ್​ ಸೋನಿ ವಿರುದ್ಧ ಪೈಪೋಟಿ ನೀಡಲು ಸಜ್ಜಾಗಿದ್ದಾನೆ. ಆದರೆ ಕ್ರಿಮಿನಲ್​ ಕೇಸ್​ ಮೂಲಕ ಜೈಲು ಶಿಕ್ಷೆ ಅನುಭವಿಸಿ ಬಂದಿರುವ ವ್ಯಕ್ತಿಗಳು ಆರು ವರ್ಷದ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲದೆ ಇರುವ ಕಾರಣ ಅಶೋಕ್​​ ಮಹ್ತೋ ಮದುವೆಯಾಗಲು ನಿರ್ಧರಿಸಿದ್ದಾನೆ. ಆರ್​ಜೆಡಿ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಮಂಗಳವಾರ ರಾತ್ರಿ 46 ವರ್ಷದ ಅನಿತಾ ಎಂಬಾಕೆಯ ಕೊರಳಿಗೆ 60 ವರ್ಷದ ಗ್ಯಾಂಗ್​ ಸ್ಟಾರ್​ ತಾಳಿ ಕಟ್ಟಿದ್ದಾನೆ.

ಲಾಲೂ ಪ್ರಸಾದ್​ ಯಾದವ್ ಆಶೀರ್ವಾದ

ಅನಿತಾಳನ್ನು ವಿವಾಹವಾದ ಅಶೋಕ್​​ ಮಹ್ತೋ ತನ್ನ ಸಂಗಡಿಗರೊಂದಿಗೆ ಮಾಜಿ ಸಿಎಂ ರಾಬಿದೇವಿಯನ್ನು ಭೇಟಿ ಮಾಡಿದ್ದಾನೆ. ಆರ್​ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಅವರ ಆಶೀರ್ವಾದ ಪಡೆದಿದ್ದಾನೆ.

ಪತ್ನಿಯನ್ನು ಕಣಕ್ಕಿಳಿಸಲು ಸಖತ್​ ಪ್ಲಾನ್

ಅಶೋಕ್​​ ಮಹ್ತೋ ತನ್ನ ಪತ್ನಿಯನ್ನು ಮುಂಗೇರ್​​ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದ್ದಾನೆ. ತನ್ನ ಆಸೆಯಂತೆಯೇ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದರೂ ಮಹಿಳೆಯೊಬ್ಬಳನ್ನು ವಿವಾಹವಾಗಿ ಆಕೆಯನ್ನು ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದಾನೆ.

ವಿವಾಹದ ಬಳಿಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಅಶೋಕ್​​ ಮಹ್ತೋ ಲೋಕಸಭಾ ಚುನಾವಣೆ ಸ್ಪರ್ಧೆಯ ಬಗ್ಗೆ ಬಾಯಿಬಿಟ್ಟಿಲ್ಲ. ಇನ್ನೂ ಏನು ನಿರ್ಧಾರವಾಗಿಲ್ಲ. ಪತ್ನಿಗೆ ಟಿಕೆಟ್​ ನೀಡುವ ಬಗ್ಗೆ ಲಾಲೂ ಪ್ರಸಾದ್​ ಯಾದವ್​ ಯಾವುದೇ ಭರವಸೆ ನೀಡಿಲ್ಲ ಎಂದು ಹೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಚುನಾವಣೆಗೆ ಸ್ಪರ್ಧಿಸಲು ಗ್ಯಾಂಗ್​ಸ್ಟರ್​ ಸಖತ್​ ಪ್ಲಾನ್​! ರಾತ್ರೋ ರಾತ್ರಿ 46 ವರ್ಷದ ಮಹಿಳೆಯನ್ನು ವಿವಾಹವಾದ

https://newsfirstlive.com/wp-content/uploads/2024/03/Ashok.jpg

Load More