newsfirstkannada.com

ಆಕೆ ಡಾನ್​ ಆತನೂ ಡಾನ್​, ಇಬ್ಬರ ಲವ್​ ಮ್ಯಾರೇಜ್​ಗೆ 3 ರಾಜ್ಯ ಪೊಲೀಸರ ನಿಗಾ!

Share :

Published March 12, 2024 at 12:59pm

Update March 12, 2024 at 1:00pm

  ಆಕೆ ಲೇಡಿ ಡಾನ್‌, ಆತ ಗ್ಯಾಂಗ್​ಸ್ಟರ್, ಇಬ್ಬರದ್ದು ಲವ್​ ಮ್ಯಾರೇಜ್​

  ಡಾನ್​ಗಳ ಮದುವೆಗೆ ನಿಗಾವಹಿಸಿದ ಮೂರು ರಾಜ್ಯಗಳ ಪೊಲೀಸರು

  ಡ್ರೋಣ್ ಕ್ಯಾಮರಾ, ಸಿಸಿಟಿವಿ ಮೂಲಕವೂ ಪೊಲೀಸರ ಹದ್ದಿನ ಕಣ್ಣು

ದೆಹಲಿ: ಲೇಡಿ ಡಾನ್​ವೊಬ್ಬಳು ತನ್ನ ಗ್ಯಾಂಗ್​ಸ್ಟರ್​ ಪ್ರಿಯತಮನನ್ನು ಮದುವೆಯಾಗಲು ಕಾದು ಕುಳಿತ್ತಿದ್ದು, ಇದೀಗ ಆಕೆಯ ಪ್ರೀತಿಗಾಗಿ ಜೈಲಿನಲ್ಲಿರುವ ಗ್ಯಾಂಗ್​ ಸ್ಟರ್​ ಪರೋಲ್​ ಪಡೆದು ಬರುತ್ತಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಲೇಡಿ ಡಾನ್‌ ಅನುರಾಧಾ, ಗ್ಯಾಂಗ್​ಸ್ಟರ್ ಕಾಲಾ ಜಾತೇರಿಯ ಲವ್ ಮಾಡಿದ್ದರು. ಇದೀಗ ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿಕೊಂಡಿದ್ದಾರೆ. ಕಾಲಾ ಜಾತೇರಿಯ ಜೈಲಿಗೆ ಹೋದರೂ ಆತನ ಮೇಲಿನ ಪ್ರೀತಿ ಕಿಂಚಿತ್ತು ಕಡಿಮೆಯಾಗದೆ ಆತನನ್ನೇ ಮದುವೆಯಾಗಲು ಲೇಡಿ ಡಾನ್ ಅನುರಾಧಾ ಮುಂದಾಗಿದ್ದಾಳೆ. ಹಾಗಾಗಿ ಇಂದು ಕೋರ್ಟ್​ ಕಾಲಾ ಜಾತೇರಿಯಗೆ ಪೆರೋಲ್​ ನೀಡುತ್ತಿದ್ದು, ಆತನ ಅನುರಾಧಾಳನ್ನು ವಿವಾಹವಾಗಲೆಂದು ಜೈಲಿನಿಂದ ಪರೋಲ್​ ಪಡೆದು ಬರುತ್ತಿದ್ದಾನೆ.

ಅಂದಹಾಗೆಯೇ ದೆಹಲಿಯ ದ್ವಾರಕಾದ ಮತಿಹಾಲ್ ನಲ್ಲಿ ಇಬ್ಬರು ಡಾನ್ ಗಳ ಮದುವೆ ನಡೆಯಲಿದೆ. ಇಬ್ಬರು ಡಾನ್ ಗಳ ಮದುವೆಗೆ ದೆಹಲಿ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಜೊತೆಗೆ ಈ ಮದುವೆ ಮೇಲೆ ಮೂರು ರಾಜ್ಯಗಳ ಪೊಲೀಸರ ನಿಗಾವಹಿಸಿದ್ದಾರೆ. ಮಾಹಿತಿ ಪ್ರಕಾರ ಒಟ್ಟು 250ಕ್ಕೂ ಹೆಚ್ಚು ಪೊಲೀಸರು ನಿಘಾ ವಹಿಸಿದ್ದಾರೆ. ಡ್ರೋಣ್ ಕ್ಯಾಮರಾ, ಸಿಸಿಟಿವಿ ಮೂಲಕವೂ ಪೊಲೀಸರ ನಿಗಾವಹಿಸಿದ್ದಾರೆ. ಜೊತೆಗೆ ಕಾಲಾ ಜಾತೇರಿ ಎಸ್ಕೇಪ್ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಾತ್ರವಲ್ಲದೆ, ಬೇರೆ ಗ್ಯಾಂಗ್ ಗಳು ಮದುವೆ ವೇಳೆ ದಾಳಿ ನಡೆಸದಂತೆ ತಡೆಯುವ ನಿಟ್ಟಿನಲ್ಲಿ ಭದ್ರತೆ ವಹಿಸಿದ್ದಾರೆ.

ಲೇಡಿ ಡಾನ್ ಅನುರಾಧಾ ಕಾಲಾ ಜಾತೇರಿ ಜೊತೆಯೇ ಸಂಸಾರ ನಡೆಸಬೇಕೆಂದು ಮದುವೆಗೆ ನಿರ್ಧರಿಸಿದ್ದಾಳೆ. ಅದರಂತೆ ವಿವಾಹ ನಡೆಯಲಿದೆ. ನಿನ್ನೆ ಕಾಲಾ ಜಾತೇರಿ ಗ್ಯಾಂಗ್ ನ ಐದು ಮಂದಿ ಶಾರ್ಪ್ ಶೂಟರ್ ಗಳನ್ನು ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕೆ ಡಾನ್​ ಆತನೂ ಡಾನ್​, ಇಬ್ಬರ ಲವ್​ ಮ್ಯಾರೇಜ್​ಗೆ 3 ರಾಜ್ಯ ಪೊಲೀಸರ ನಿಗಾ!

https://newsfirstlive.com/wp-content/uploads/2024/03/Anuradha-And-kala-jatheri-1.jpg

Load More