newsfirstkannada.com

ಗ್ಯಾಂಗ್​ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿ ಆಗಿದ್ದೇಗೆ.. ಇದು ಹಾರ್ಟ್​ ಅಟ್ಯಾಕ್, ಕೊಲೆನಾ?

Share :

Published March 29, 2024 at 10:37am

    ಗುತ್ತಿಗೆದಾರನನ್ನೇ ಕೊಲೆ ಮಾಡಿ ಜೈಲಿನಲ್ಲಿ ಕೇಸ್ ಗೆದಿದ್ದ ಅನ್ಸಾರಿ

    1990ರಲ್ಲಿ ಯುಪಿಯ 4 ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸಿದ ಗ್ಯಾಂಗ್​

    ಗ್ಯಾಂಗ್​ಸ್ಟಾರ್ ಮುಖ್ತಾರ್ ಅನ್ಸಾರಿ ಕೊನೆಯ ಎಲೆಕ್ಷನ್​ ಯಾವುದು?

ಮುಖ್ತಾರ್ ಅನ್ಸಾರಿ.. ಒಂದು ಕಾಲದಲ್ಲಿ ಈ ಹೆಸರು ಉತ್ತರ ಪ್ರದೇಶದಲ್ಲಿ ದೊಡ್ಡ ತಾಂಡವ ಸೃಷ್ಟಿ ಮಾಡಿತ್ತು. ಹೆಸರು ಕೇಳಿದರೆ ರಿಯಲ್ ಎಸ್ಟೇಟ್​ ಉದ್ಯಮಿಗಳು, ರಾಜಕಾರಣಿಗಳು ನಿಂತಲ್ಲೇ ಗಢಗಢ ನಡುಗುತ್ತಿದ್ದರು. ನಿನ್ನೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಭಾರತದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದ ಉತ್ತರ ಪ್ರದೇಶದ್ಯಾಂತ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಅಂದರೆ ಈ ವ್ಯಕ್ತಿಯ ಪ್ರಾಬಲ್ಯ ಈಗಲೂ ಎಷ್ಟಿತ್ತು ಎಂಬುವುದು ನಾವು ಮನಗಾಣಬಹುದು.

ಅಷ್ಟೊಂದು ಪ್ರಭಾವಿ ವ್ಯಕ್ತಿಯಾಗದ್ದ ಗ್ಯಾಂಗ್​ಸ್ಟಾರ್ ಆ್ಯಂಡ್ ಪೊಲಿಟಿಷಿಯನ್ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶೌಚಾಲಯಕ್ಕೆ ಹೋದಾಗ ಹಾರ್ಟ್​ ಅಟ್ಯಾಕ್​ನಿಂದ ಗ್ಯಾಂಗ್​ಸ್ಟಾರ್ ಮುಖ್ತಾರ್ ಅನ್ಸಾರಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಆದರೆ, ಅವರ ಕುಟುಂಬಸ್ಥರು ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಿ ಸಾಯಿಸಿದ್ದಾರೆ ಎಂದು ಆರೋಪಿಸಿದೆ.

ಯಾರು ಈ ಡಾನ್ ಅನ್ಸಾರಿ..?

ಇವರು ಸ್ವಾತಂತ್ರ್ಯ ಕಾಲದಲ್ಲಿ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ ಕುಟುಂಬದಿಂದ ಬಂದವರು. ಇವರ ಅಜ್ಜ, ಮುತ್ತಜ್ಜ ಎಲ್ಲರೂ ಕಾಂಗ್ರೆಸ್ ಹಾಗೂ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದವರು. ಇಂತಹ ಕುಟುಂಬದಿಂದ ಬಂದ ಅನ್ಸಾರಿ ಹೇಗೆ ಗ್ಯಾಂಗ್​ಸ್ಟಾರ್ ಆದ ಎನ್ನುವುದೇ ಭಯಾನಕ ಸಂಗತಿ. ಅದರ ಬಗ್ಗೆ ಒಂ​ದು ವಿವರವಾದ ಮಾಹಿತಿ ಇಲ್ಲಿದೆ.

ಗ್ಯಾಂಗ್​ಸ್ಟಾರ್ ಆಗಲು ಕಾರಣ ಸರ್ಕಾರದ ಟೆಂಡರ್ಸ್​?

1970ರಲ್ಲಿ ಉತ್ತರ ಪ್ರದೇಶ ಸರ್ಕಾರ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮಾಡುವುದಕ್ಕೆ ಟೆಂಡರ್​ಗಳನ್ನ ಕರೆಯುತ್ತಿತ್ತು. ಈ ಟೆಂಡರ್​ಗಳನ್ನ ಪಡೆಯಲು ಯುಪಿಯಲ್ಲಿ ಕೆಲವು ಗ್ಯಾಂಗ್​ಗಳು ಭಾರೀ ಪೈಪೋಟಿ ನಡೆಸಿದ್ದವು. ಈ ಎಲ್ಲ ಗ್ಯಾಂಗ್​ಗಳಲ್ಲಿ ಪ್ರಬಲವಾಗಿ ಹೊರ ಒಮ್ಮಿದ್ದೇ ಗ್ಯಾಂಗ್​ಸ್ಟಾರ್​ ಮುಖ್ತಾರ್​ ಅನ್ಸಾರಿ ಗ್ಯಾಂಗ್​. ಇಲ್ಲಿಂದಲೇ ಉತ್ತರಪ್ರದೇಶದ ಗ್ಯಾಂಗ್​ಸ್ಟಾರ್​ನಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳುತ್ತದೆ.

1980ರಲ್ಲಿ ಸೈದ್‌ಪುರದ ಒಂದು ಜಮೀನಿನ ಬಗ್ಗೆ ಗಲಾಟೆ ನಡೆಯುತ್ತೆ. ಇಲ್ಲಿ ಸರಣಿ ಕ್ರಿಮಿನಲ್​​ ಘಟನೆಗಳು ನಡೆದು ಅನ್ಸಾರಿ ಗ್ಯಾಂಗ್​ ಫುಲ್ ಪಾಪುಲರ್ ಆಗುತ್ತದೆ. ಕಲ್ಲಿದ್ದಲು ಗಣಿಗಾರಿಕೆ, ರೈಲ್ವೆ ನಿರ್ಮಾಣ, ಕಸ ವಿಲೇವಾರಿ, ಸಾರ್ವಜನಿಕ ಕೆಲಸಗಳು, ಮದ್ಯದ ವ್ಯವಹಾರ ಸೇರಿ ಇತರೆ ಕ್ಷೇತ್ರಗಳಲ್ಲಿ ₹ 100 ಕೋಟಿ ಮೊತ್ತದ ಗುತ್ತಿಗೆ ವ್ಯವಹಾರ ಪಡೆಯಲು ಅನ್ಸಾರಿ ಗ್ಯಾಂಗ್ ಕೈ ಹಾಕಿ ಯಶಸ್ಸು ಆಗುತ್ತದೆ. ಈ ಗ್ಯಾಂಗ್ ಅಪಹರಣದಂತ ಕ್ರಿಮಿನಲ್ ಚಟುವಟಿಕೆಗಳ ಜೊತೆಗೆ ಸುಲಿಗೆ ದಂಧೆಗಳಲ್ಲಿ ತೊಡಗಿಕೊಂಡಿದ್ದ ಕೆಲವು ಸಣ್ಣ-ಪುಟ್ಟ ಗ್ಯಾಂಗ್​ಗಳಿಂದ ಹಫ್ತಾ ಪಡೆಯುತ್ತದೆ.

ಮುಖ್ತಾರ್ ಅನ್ಸಾರಿ ಮತ್ತು ಪತ್ನಿ ಅಫ್ಸಾ ಅನ್ಸಾರಿ

ಗ್ಯಾಂಗ್​ಸ್ಟಾರ್ ಅನ್ಸಾರಿ​ ಚುನಾವಣೆಗೆ ಸ್ಪರ್ಧೆ

1990ರಲ್ಲಿ ಮೌ, ಘಾಜಿಪುರ, ವಾರಣಾಸಿ ಮತ್ತು ಜೌನ್‌ಪುರ ಜಿಲ್ಲೆಗಳಲ್ಲಿ ಅನ್ಸಾರಿ ಕ್ರಿಮಿನಲ್​ ಕೆಲಸಗಳು ಸಾಕಷ್ಟು ನಡೆದವು. ಹೀಗಾಗಿ ಇಡೀ ಉತ್ತರಪ್ರದೇಶದಲ್ಲಿ ಅನ್ಸಾರಿ ಹೆಸರು ಕೇಳಿ ಬಂದಿತು. ಮುಂದೆ 1995ರಲ್ಲಿ ಅನ್ಸಾರಿ ಹೆಸರು ರಾಜಕೀಯ ವಲಯದಲ್ಲೂ ಸದ್ದು ಮಾಡಲು ಪ್ರಾರಂಭಿಸಿತು. ಇದರಿಂದಾಗಿ 1996ರಲ್ಲಿ ಮೌ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಎಸ್​ಪಿಯಿಂದ ಸ್ಪರ್ಧೆ ಮಾಡಿ ಗೆಲುವು ಪಡೆದರು. ಹೀಗೆ ಸತತ 5 ಬಾರಿ ನಿರಂತರವಾಗಿ ಚುನಾವಣೆಯಲ್ಲಿ ತನ್ನ ಪ್ರಾಬಲ್ಯದಿಂದ ಅನ್ಸಾರಿ ಗೆದ್ದಿದ್ದರು. ಕೊನೆಯದಾಗಿ ಅವರು 2017ರಲ್ಲಿ ವಿಧಾನಸಭೆ ಎಲೆಕ್ಷನ್​ಗೆ ಸ್ಪರ್ಧಿಸಿ ವಿನ್ ಆಗಿದ್ದರು.

ಅನ್ಸಾರಿ ಮೇಲಿದ್ದ 61 ಕೇಸ್​ಗಳು..!

ಕ್ವಾಮಿ ಏಕತಾ ದಳದಿಂದ ಮೂರು ಬಾರಿ ಹಾಗೂ ಬಿಎಸ್​ಪಿಯಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲುವು ಪಡೆದಿದ್ದರು. ಇವರ ಗ್ಯಾಂಗ್​ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಒಂದಲ್ಲ ಒಂದು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ 2005ರಲ್ಲಿ ಅನ್ಸಾರಿ ಜೈಲೂಟ ತಿಂದು ಹೊರಬಂದಿರು. ಇದು ಒಂದೇ ಬಾರಿಯಲ್ಲ, ಇವರು ಹಲವು ಕೇಸ್​ನಲ್ಲಿ ಜೈಲಿಗೆ ಹೋಗಿ, ಕೋರ್ಟ್​ನಲ್ಲಿ ಕೇಸ್​ ಗೆದ್ದು ಹೊರ ಬಂದಿದ್ದರು. ಈವರೆಗೂ ಅನ್ಸಾರಿ ಮೇಲೆ ಒಟ್ಟು 61 ಕ್ರಿಮಿನಲ್ ಪ್ರಕರಣಗಳಿದ್ದು ಇತ್ಯರ್ಥವಾಗದೆ ಉಳಿದಿವೆ. ಇದರಲ್ಲಿ 15 ಕೊಲೆ ಆರೋಪಗಳಿವೆ. 2009ರಲ್ಲಿ ಮೌನಲ್ಲಿ ಗುತ್ತಿಗೆದಾರರಾಗಿದ್ದ ಅಜಯ್ ಪ್ರಕಾಶ್ ಸಿಂಗ್ ಅವರ ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಕೋರ್ಟ್​ ಖುಲಾಸೆಗೊಳಿಸಿತ್ತು.

2023ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಕೊಲೆ ಕೇಸ್​ನಲ್ಲಿ 10 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಅಲ್ಲದೇ ಅನ್ಸಾರಿ ಅವರ ನಿಗೂಢ ಸ್ಥಳದಲ್ಲಿ ಗನ್ ಮೆಷಿನ್ ಪತ್ತೆಯಾಗಿದ್ದರಿಂದ ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದಲ್ಲಿ ಇದೇ ಮಾರ್ಚ್ 13 ರಂದು ಅನ್ಸಾರಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಆಸ್ಪತ್ರೆಯಲ್ಲಿ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇವರ ಪುತ್ರ ಪ್ಲಾನ್ ಮಾಡಿ ತಂದೆಗೆ ವಿಷ ಕೊಟ್ಟು ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ಯಾಂಗ್​ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿ ಆಗಿದ್ದೇಗೆ.. ಇದು ಹಾರ್ಟ್​ ಅಟ್ಯಾಕ್, ಕೊಲೆನಾ?

https://newsfirstlive.com/wp-content/uploads/2024/03/ANSARI_2.jpg

Load More