newsfirstkannada.com

ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ.. ಇಂದಿನ ಬೆಳ್ಳುಳ್ಳಿ ರೇಟ್​​ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published February 14, 2024 at 6:34am

  ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್​ ಟ್ರೆಂಡ್

  ಬೆಳ್ಳುಳ್ಳಿಗೆ ಡಬಲ್‌ ರೇಟ್ ಹೋಟೆಲ್ ಮಾಲೀಕರ ಟ್ರಿಕ್‌!

  ಬೆಳ್ಳುಳ್ಳಿ ಕಬಾಬ್ ವೈರಲ್‌ ಅತ್ತ ಬೆಳ್ಳುಳ್ಳಿ ಐಟಂಗೆ ನಿಷೇಧ

ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ ಅಂತಾರೆ. ಇದೀಗ ಬೆಳ್ಳುಳ್ಳಿಗೂ ಕಾಲ ಬಂದಿದೆ. ಸದ್ಯ ರಾಜ್ಯಾದ್ಯಂತ ಬೆಳ್ಳುಳ್ಳಿ ಕಬಾಬ್​ದ್ದೇ ಸದ್ದು. ಈಗ ಬೆಳ್ಳುಳ್ಳಿ ಬೆಳೆದ ರೈತರಿಗೆ ಬಂಗಾರದ ಕಾಲ ಬಂದಿದೆ. ಈ ಬೆಳ್ಳುಳ್ಳಿ ಕಬಾಬ್​ ಕಾರಣಕ್ಕೆ ‘ನಿಮ್ಮ ಮನೆ’ ಹೋಟೆಲ್ ಚಂದ್ರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಒನ್ ಮೋರ್ ಒನ್ ಮೋರ್ ಅಂತ ಗ್ರಾಹಕರಿಗೆ ಬೆಳ್ಳುಳ್ಳಿ ಕಬಾಬ್​ ತಿನ್ನಿಸ್ತಿದ್ದಾರೆ. ಇನ್ನೊಂದು ವಿಚಾರ ಏನಂದ್ರೆ, ಈ ಬೆಳ್ಳುಳ್ಳಿ ನಟ ಪುನೀತ್​ ರಾಜ್​ ಕುಮಾರ್​ ಅವರಿಗೂ ಸಖತ್​ ಫೇವರೇಟ್ ಆಗಿತ್ತಂತೆ.

ಬೆಳ್ಳುಳ್ಳಿ ಬಳಸದ ಪದಾರ್ಥ ಆರ್ಡರ್ ಮಾಡಿದ್ರೆ 10% ರಿಯಾಯಿತಿ!

ದುರಂತ ಏನಪ್ಪಾ ಅಂದ್ರೆ ಚಂದ್ರು ಹೋಟೆಲ್​ನ ಬೆಳ್ಳುಳ್ಳಿ ಕಬಾಬ್​ ಫೇಮಸ್​ ಆಗ್ತಿದ್ದಂತೆ ಅತ್ತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಬಂಗಾರದಂತಹ ರೇಟ್ ಬಂದಿದೆ. ಈಗ ಹೆಚ್ಚು ಕಡಿಮೆ ಒಂದು ಕೆ.ಜಿಗೆ 300 ರಿಂದ 350 ರೂಪಾಯಿವರೆಗೂ ಬಂದು ನಿಂತಿದೆ. ಹಾಗಂತ, ಬೆಳ್ಳುಳ್ಳಿ ಕಬಾಬ್​ನಿಂದಲೇ ರೆಟ್​ ಜಾಸ್ತಿ ಅಂತ ಹೇಳ್ತಿಲ್ಲ. ಕಾಕತಾಳಿಯ ಅನ್ನೋಥರಾ ಒಂದೇ ಟೈಮ್​ಲ್ಲಿ ಬೆಳ್ಳುಳ್ಳಿ ರೇಟೂ ಜಾಸ್ತಿ ಆಗಿದೆ. ಬೆಳ್ಳುಳ್ಳಿ ಕಬಾಬ್ ಟ್ರೆಂಡೂ ಶುರುವಾಗಿದೆ.

ಬೆಳ್ಳುಳ್ಳಿ ಬೆಲೆ ಏರಿಕೆ.. ಬೆಳ್ಳುಳ್ಳಿ ತಾತ್ಕಾಲಿಕ ನಿಷೇಧಕ್ಕೆ ನಿರ್ಧಾರ!

ಒಂದ್ಕಡೆ ಬೆಳ್ಳುಳ್ಳಿ ಕಬಾಬ್​ ಫೀವರ್ ಜಾಸ್ತಿ ಆಗಿದ್ರೆ ಆ ಕಡೆ ಮೈಸೂರಿನಲ್ಲಿ ಬೆಳ್ಳುಳ್ಳಿ ಪದಾರ್ಥನೇ ನಿಷೇಧ ಮಾಡೋಕೆ ಮುಂದಾಗಿದ್ದಾರೆ. ಬೆಳ್ಳುಳ್ಳಿ ಪದಾರ್ಥ ಬಳಸದೇ ಅಡುಗೆ ಮಾಡೋಕೆ ಹೋಟೆಲ್ ಮಾಲೀಕರು ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ವೇಳೆ ಬಳಸಿದ್ರೂ ಅಂಥ ಪದಾರ್ಥಗಳನ್ನ ಆರ್ಡರ್ ಮಾಡದ ಗ್ರಾಹಕರಿಗೆ 10 ಪರ್ಸೆಂಟ್ ರಿಯಾಯಿತಿ ಕೊಡ್ತೀವಿ ಅಂತ ಹೇಳ್ತಿದ್ದಾರೆ.

ಬೆಳ್ಳುಳ್ಳಿ ರೇಟ್​​ ಹೈಕ್.. ರೈತನಿಗೆ ಬಂತು ಕೋಟಿ ಲಾಭ​!

ಅತ್ತ, ಮಧ್ಯಪ್ರದೇಶದ ಛಿಂದ್ವಾರದಲ್ಲಿ ಬೆಳ್ಳುಳ್ಳಿ ಬೆಳೆದ ರೈತನಿಗೆ ಬಂಪರ್ ಹೊಡೆದಿದೆ. ಯುವ ರೈತ ಶಿವರಾಮ ವರ್ಮಾ ಕೇವಲ 2ಲಕ್ಷ ಖರ್ಚು ಮಾಡಿ ಸುಮಾರು 3 ತಿಂಗಳಲ್ಲಿ 1.5 ಕೋಟಿ ಲಾಭ ಪಡೆದು ಕೋಟ್ಯಾಧಿಪತಿಯಾಗಿದ್ದಾರೆ. ಬೆಳ್ಳುಳ್ಳಿ ಸದ್ಯದ ಹಾಟ್​ ಟಾಪಿಕ್ ಆಗಿದೆ. ಆ ಕಡೆ ಬೆಳ್ಳುಳ್ಳಿ ಕಬಾಬ್ ತಿನ್ನಲೇಬೇಕು ಅಂತ ಮುಗಿಬೀಳ್ತಿದ್ರೆ. ಈ ಕಡೆ ಬೆಳ್ಳುಳ್ಳಿನೇ ಬಳಸದೇ ಅಡುಗೆ ಮಾಡಬೇಕು ಅಂತ ಇನ್ನು ಕೆಲವ್ರು ಅಭಿಯಾನ ಮಾಡ್ತಿದ್ದಾರೆ. ಇದೇ ಅಲ್ವಾ ಬೆಳ್ಳುಳ್ಳಿಗೂ ಒಂದು ಕಾಲ ಅಂದ್ರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ.. ಇಂದಿನ ಬೆಳ್ಳುಳ್ಳಿ ರೇಟ್​​ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/02/Garlic-2.jpg

Load More