Advertisment

ಲೈಟರ್​ ಆನ್​ ಮಾಡುತ್ತಿದ್ದಂತೆ ಸಿಲಿಂಡರ್​ ಸ್ಫೋಟ.. ಗಾಯಗೊಂಡಿದ್ದ ದಂಪತಿಗಳು ಸಾವು

author-image
AS Harshith
Updated On
ಲೈಟರ್​ ಆನ್​ ಮಾಡುತ್ತಿದ್ದಂತೆ ಸಿಲಿಂಡರ್​ ಸ್ಫೋಟ.. ಗಾಯಗೊಂಡಿದ್ದ ದಂಪತಿಗಳು ಸಾವು
Advertisment
  • ಸಿಲಿಂಡರ್ ಸ್ಫೋಟಗೊಂಡು ಇಬ್ಬರು ತೀವ್ರ ಗಾಯಗೊಂಡಿದ್ದರು
  • ಮನೆಯಲ್ಲಿ ಲೈಟರ್​ ಆನ್​ ಮಾಡುತ್ತಿದ್ದ ವೇಳೆ ಗ್ಯಾಸ್​​ ಸ್ಫೋಟಗೊಂಡಿತ್ತು
  • ಭಾರೀ ಸ್ಫೋಟದಿಂದ ಗಂಡ-ಹೆಂಡತಿ ಇಬ್ಬರು ಗಂಭೀರ ಗಾಯಗೊಂಡಿದ್ದರು

ಬೆಳಗಾವಿ: ಇಲ್ಲಿನ ಸುಳಗಾ ಗ್ರಾಮದ ಮನೆಯೊಂದರಲ್ಲಿ ಮೇ 18ರಂದು ಸಿಲಿಂಡರ್​ ಸ್ಫೋಟಗೊಂಡಿತ್ತು. ಸಿಲಿಂಡರ್ ಸ್ಫೋಟದಲ್ಲಿ ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಗಾಯಗೊಂಡಿದ್ದ ದಂಪತಿಗಳಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

Advertisment

ಸಿಲಿಂಡರ್ ಸೋರಿಕೆಯಿಂದ ಲೈಟರ್​ ಆನ್ ಮಾಡುತ್ತಿದ್ದಂತೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿತ್ತು. ಸಿಲಿಂಡರ್ ಸ್ಫೋಟದ ತೀವ್ರತೆಗೆ ಕಲ್ಲಪ್ಪ ಪಾಟೀಲ್(67),  ಸುಮನ್ ಪಾಟೀಲ್(60) ಗಂಭೀರ ಗಾಯಗೊಂಡಿದ್ದರು.

ಇದನ್ನೂ ಓದಿ: ಭಾರೀ ಮಳೆಗೆ ರಾಜಕಾಲುವೆಗೆ ಉರುಳಿ ಬಿದ್ದ ಆಟೋ.. ಡ್ರೈವರ್​ ಸಾವು

ಗಂಭೀರ ಗಾಯಗೊಂಡಿದ್ದ ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರಿಂದು ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment