GATE 2025ರ ಪರೀಕ್ಷಾ ವೇಳಾಪಟ್ಟಿ ಐಐಟಿ ಇಂದ ಅಧಿಕೃತವಾಗಿ ರಿಲೀಸ್.. ಯಾವ ತಿಂಗಳಲ್ಲಿ ಎಕ್ಸಾಂ?

author-image
Bheemappa
Updated On
ಸಹಾಯಕ ನಿಯಂತ್ರಕ, ಲೆಕ್ಕಪರಿಶೋಧನ ಅಧಿಕಾರಿ ಮುಖ್ಯಪರೀಕ್ಷೆ.. ಕೊನೆ ದಿನಾಂಕದ ಒಳಗೆ ಅಪ್ಲೇ ಮಾಡಿ
Advertisment
  • ಎರಡು ಹಂತದಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ ಎಂದ ಐಐಟಿ
  • ಈ ಪದವಿ ಮಾಡಿದ ವಿದ್ಯಾರ್ಥಿಗಳಿಗೆ ಮುಖ್ಯವಾದ ಎಕ್ಸಾಂ
  • ವೇಳಾಪಟ್ಟಿಯನ್ನ ವೀಕ್ಷಣೆ ಮಾಡುವುದು ಹೇಗೆ? ಅದು ಇಲ್ಲಿದೆ

2025ರ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್​ ಇನ್ ಎಂಜಿನಿಯರಿಂಗ್‌ (ಜಿಎಟಿಇ)ಯ ವೇಳಾಪಟ್ಟಿಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT), ರೂರ್ಕಿಯು ಅಧಿಕೃತವಾಗಿ ಪ್ರಕಟಿಸಿದೆ. ಈ ವೇಳಾಪಟ್ಟಿಯನ್ನು ವೀಕ್ಷಣೆ ಮಾಡಬೇಕು ಎನ್ನುವವರು gate2025.iitr.ac.in. ವೆಬ್​​ಸೈಟ್​ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಐಐಟಿ ರೂರ್ಕಿಯು 2025ರ ಎಂಜಿನಿಯರಿಂಗ್‌ ಗ್ರಾಜುಯೇಟ್ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಫೆಬ್ರುವರಿ 01ರಿಂದ ಫೆಬ್ರುವರಿ 16ರ ವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿದೆ. ಈ ಎಲ್ಲ ಪರೀಕ್ಷೆಗಳು ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ) ಆಗಿರುತ್ತವೆ. ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು(MCQ), ಬಹು ಆಯ್ದ ಪ್ರಶ್ನೆಗಳು (MSQ) ಮತ್ತು ಸಂಖ್ಯಾತ್ಮಕ ಉತ್ತರ ಪ್ರಕಾರ (NAT) ಇರುತ್ತವೆ. ಎಲ್ಲ ಪ್ರಶ್ನೆಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇರುತ್ತವೆ. ಬೇರೆ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳು ಲಭ್ಯ ಇರುವುದಿಲ್ಲ.

ಇದನ್ನೂ ಓದಿ: 500ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳು.. SI, ಹೆಡ್​ ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಹುದ್ದೆಗಳು ಖಾಲಿ

publive-image

ಎರಡು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಂದರೆ ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30ರ ವರೆಗೆ ಒಂದು ಹಂತವಾದರೆ, ಮಧ್ಯಾಹ್ನ 2:30 ರಿಂದ 3:30ರ ವರಗೆ ಇನ್ನೊಂದು ಹಂತ ಇರುತ್ತದೆ. ಇತ್ತೀಚೆಗೆ, ಐಐಟಿ ರೂರ್ಕಿಯು 2025ರ ಗೇಟ್​ ಅಪ್ಲಿಕೇಶನ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಿಸಿದೆ. ಹೀಗಾಗಿ ನವೆಂಬರ್ 20ರೊಳಗಾಗಿ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನ ಸರಿಪಡಿಸಿಕೊಳ್ಳಲು ಅವಕಾಶ ಇದೆ.

ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!

2025ರ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್​ ಇನ್ ಎಂಜಿನಿಯರಿಂಗ್‌ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಆಗಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ತಾಂತ್ರಿಕ ಸ್ನಾತಕೋತ್ತರ ಪದವಿಗೆ ಪ್ರವೇಶಕ್ಕಾಗಿ ಪ್ರತಿ ವರ್ಷ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತದೆ. ರಾಷ್ಟ್ರೀಯ ಸಮನ್ವಯ ಮಂಡಳಿ (National Coordination Board) ಯಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಭಾರತದ ಪ್ರತಿಷ್ಠಿತ 7 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್​ಗಳಾದ ರೂರ್ಕಿ, ದೆಹಲಿ, ಗುವಾಹಟಿ, ಕಾನ್ಪುರ, ಖರಗ್‌ಪುರ, ಮದ್ರಾಸ್ ಮತ್ತು ಮುಂಬೈ ಸೇರಿ ಈ ಪರೀಕ್ಷೆಯನ್ನು ನಡೆಸುತ್ತವೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment