/newsfirstlive-kannada/media/post_attachments/wp-content/uploads/2025/06/SANJEEV.jpg)
ಸೀಸನ್-18 ಐಪಿಎಲ್ ಮುಗೀದು ಮೂರು ದಿನ ಕಳೆದಿಲ್ಲ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಬದಲಾವಣೆಯ ಪರ್ವಕ್ಕೆ ಮ್ಯಾನೇಜ್ಮೆಂಟ್ ಮುಂದಾಗಿದೆ. ತಂಡದಲ್ಲಿರುವ ಪ್ರಮುಖರ ತಲೆದಂಡಕ್ಕೆ ಕೈ ಹಾಕಿದೆ. ಸೀಸನ್-19ರಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತ ಪ್ಲಾನ್ ಮಾಡಿದೆ.
ಸೀಸನ್-18ರ ಐಪಿಎಲ್ ಮುಕ್ತಾಯ ಕಂಡಿದೆ. ಯಾರ್ ಆಗ್ತಾರೆ ಚಾಂಪಿಯನ್ ಎಂಬುವುದಕ್ಕೆ ಉತ್ತರವೂ ಸಿಕ್ಕಿದೆ. ಉತ್ತರ ಸಿಕ್ಕಿ ಮೂರು ದಿನ ಕಳೆದಿಲ್ಲ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ತಂಡದಲ್ಲಿದ್ದ ಪ್ರಮುಖರ ತಲೆದಂಡಕ್ಕೆ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇದರೊಂದಿಗೆ ಸೀಸನ್-19ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಫಿಕ್ಸಾಗಿದೆ. ಇದಕ್ಕೆ ಕಾರಣ ಸೀಸನ್-18ರಲ್ಲಿ ಲಕ್ನೂ ಸೂಪರ್ ಜೈಂಟ್ಸ್ ತಂಡದ ಹೀನಾಯ ಪ್ರದರ್ಶನ.
ಇದನ್ನೂ ಓದಿ: ಹೃದಯಗೆದ್ದ ಕನ್ನಡಿಗರು.. ಐಪಿಎಲ್ನಲ್ಲಿ ಕರ್ನಾಟಕ ಪ್ಲೇಯರ್ಗಳದ್ದೇ ಪರಾಕ್ರಮ..!
ಟಿ20 ಸ್ಪೆಷಲಿಸ್ಟ್ಗಳ ದಂಡನ್ನೇ ಹೊಂದಿದ್ದ ಲಕ್ನೋ ನಿಜಕ್ಕೂ, ಸೀಸನ್-18ರಲ್ಲಿ ಮೋಸ್ಟ್ ಡೇಂಜರಸ್ ಟೀಮ್ ಆಗಿ ಕಾಣ್ತಿತ್ತು. ಸುಲಭಕ್ಕೆ ಪ್ಲೇ ಆಫ್ ತಲುಪುತ್ತೆ ಎಂಬ ನಿರೀಕ್ಷೆಯೂ ಇತ್ತು. ಪಂತ್ ನಾಯಕತ್ವದಲ್ಲಿ ಲಕ್ನೋ ಆಡಿದ 14 ಪಂದ್ಯಗಳಲ್ಲಿ ಗೆದ್ದಿದ್ದ ಮಾತ್ರ, ಜಸ್ಟ್ 6 ಪಂದ್ಯಗಳನ್ನ. ಆದ್ರೀಗ ಇದೇ ಕೆಲವರ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.
ಪಂತ್ ತಲೆದಂಡಕ್ಕೆ ಕೌಂಟ್ಡೌನ್?
ಮೆಗಾ ಹರಾಜಿನಲ್ಲಿ ರಿಷಭ್ ಪಂತ್ಗೆ ದಾಖಲೆಯ 27 ಕೋಟಿ ನೀಡಿ ಲಕ್ನೋ ಖರೀದಿಸಿತ್ತು. ನಾಯಕನ ಪಟ್ಟಭೀಷೇಕವೂ ಕಟ್ಟಿತ್ತು. ನಾಯಕತ್ವದ ಪಟ್ಟ ಕಟ್ಟಿದ ಸಂಜೀವ್ ಗೋಯೆಂಕಾ, ರಿಷಭ್ ಪಂತ್ ಭವಿಷ್ಯದ ಲೆಜೆಂಡ್ ಅಂತೆಲ್ಲಾ ಕೊಂಡಾಡಿದ್ದರು. ರೋಹಿತ್ ಶರ್ಮಾ, ಧೋನಿ ಜೊತೆಗೆ ಹೋಲಿಕೆ ಸಹ ಮಾಡಿದರು. ಅಖಾಡದಲ್ಲಿ ರಿಷಭ್ ಪಂತ್ ನೀಡಿದ್ದು ಅಟ್ಟರ್ ಪ್ಲಾಫ್ ಪರ್ಫಾಮೆನ್ಸ್ ಆಗಿತ್ತು. ವಿಕೆಟ್ ಹಿಂದೆಯೂ ಫೇಲ್ಯೂರ್ ಆಗಿದ್ದ ಪಂತ್, ನಾಯಕನಾಗಿ ಆಣ್ ಫೀಲ್ಡ್ನಲ್ಲಿ ಸ್ಟ್ರಾಟರ್ಜಿ ಮಾಡುವಲ್ಲಿ ಎಡವಿ ಬಿದ್ದಿದ್ದರು. ಪರಿಣಾಮ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಕಾಯ್ದುಕೊಳ್ಳಬೇಕಾಯ್ತು. ಇದೇ ಕಾರಣಕ್ಕೀಗ ಪಂತ್ರನ್ನ ನಾಯಕತ್ವದಿಂದ ಸೈಡ್ ಲೈನ್ ಮಾಡೋ ಚಿಂತನೆಯಲ್ಲಿದ್ದಾರೆ.
ಇದನ್ನೂ ಓದಿ: ಕೊಹ್ಲಿಯ ಈ ನಡೆ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.. ಘಟನೆ ನಡೆದ 2 ದಿನದಲ್ಲೇ ಇಂಥ ನಿರ್ಧಾರ ಯಾಕೆ?
ಜಹೀರ್, ಜಸ್ಟಿನ್ ಮೇಲೆ ಅಸಮಾಧಾನ
ಜಹೀರ್ ಖಾನ್, ಜಸ್ಟಿನ್ ಲ್ಯಾಂಗರ್, ಲಕ್ನೋ ತಂಡದ ಮೇನ್ ಪಿಲ್ಲರ್. ಮೆಗಾ ಹರಾಜಿಗೂ ಮುನ್ನವೇ ಲಕ್ನೋ ತಂಡದ ಮೆಂಟರ್ ಆಗಿ ಎಂಟ್ರಿ ನೀಡಿದ್ದು ಜಹೀರ್ ಖಾನ್. ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಜೊತೆ ಸೇರಿ ಬಲಿಷ್ಠ ತಂಡವನ್ನೇ ಕಟ್ಟಿದ್ರು. ಬಲಿಷ್ಠ ತಂಡ ಕಟ್ಟಿದ ಇವರ ಕಾರ್ಯ ವೈಖರಿ ಮಾತ್ರ, ಆನ್ಫೀಲ್ಡ್ನಲ್ಲಿ ನಡೆದಿದಿಲ್ಲ. ಇದಕ್ಕೆ ತೀವ್ರ ಅಸಮಾಧಾನಗೊಂಡಿರುವ ಸಂಜೀವ್ ಗೋಯೆಂಕಾ ಮುಂದಿನ ವರ್ಷಕ್ಕೆ ಮುಂದುವರಿಸಲು ಹಿಂದೇಟು ಹಾಕಿದ್ದಾರೆ. ಈಗಾಗಲೇ 1 ವರ್ಷದ ಒಪ್ಪಂದವೂ ಮುಗಿದ ಹಿನ್ನೆಲೆಯಲ್ಲಿ ಮುಂದುವರಿಕೆ ಬೇಡ ಎಂಬ ನಿರ್ಧಾರಕ್ಕೆ ಫ್ರಾಂಚೈಸಿ ಬಂದಾಗಿದೆ ಎನ್ನಲಾಗ್ತಿದೆ.
2017ರಲ್ಲಿ ಧೋನಿಯನ್ನೇ ಕೆಳಗಿಳಿಸಿದ್ದ ಗೋಯೆಂಕಾ
ಈ ಬ್ಯುಸಿನೆಸ್ ಮ್ಯಾನ್ ಸಂಜೀವ್ ಗೋಯೆಂಕಾ, ಕೆಳಗಿಳಿಸಿದ ನಿರ್ಧಾರ ಮಾಡಿರೋದು ಇದೇ ಮೊದಲೇನಲ್ಲ. 2016ರ ಐಪಿಎಲ್ನಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದ ಮಾಲೀಕರಾಗಿದ್ದ ಗೋಯೆಂಕಾ, ಆಗ ಪುಣೆ ಸಾರಥಿಯಾಗಿದ್ದ ದಿ ಗ್ರೇಟ್ ಲೀಡರ್ ಎಮ್.ಎಸ್ ಧೋನಿಯನ್ನೇ ಅವಮಾನಿಸಿದ್ರು. 2016ರಲ್ಲಿ ಧೋನಿ ನಾಯಕತ್ವದಲ್ಲಿ ಪುಣೆ 14 ಪಂದ್ಯಗಳ ಪೈಕಿ 5 ಪಂದ್ಯಗಳನ್ನಷ್ಟೇ ಗೆದ್ದಿತ್ತು. ಇದಕ್ಕೆ ಕುಪಿತರಾಗಿದ್ದ ಗೋಯೆಂಕಾ, ಧೋನಿಯನ್ನ ನಾಯಕತ್ವದಿಂದ ಕೆಳಗಿಳಿಸಿ ಸ್ಟೀವ್ ಸ್ಮಿತ್ಗೆ ದಿಢೀರ್ ನಾಯಕನ ಪಟ್ಟ ಕಟ್ಟಿ ಅಪಮಾನ ಮಾಡಿದ್ರು.
ರಾಹುಲ್ಗೆ ಹಿಗ್ಗಾಮುಗ್ಗಾ ಬೈದಿದ್ದ ಗೋಯೆಂಕಾ
ಧೋನಿಯನ್ನೇ ಅಲ್ಲ. 2024ರಲ್ಲಿ ಸನ್ ರೈಸರ್ಸ್ ಎದುರಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಹೀನಾಯ ಸೋಲು ಅನುಭವಿಸಿತ್ತು. ಆಗ ತಂಡದ ಸೋಲು ಸಹಿಸದ ಮಾಲೀಕ ಗೋಯೆಂಕಾ, ಆನ್ಫೀಲ್ಡ್ನಲ್ಲೇ ಕೆ.ಎಲ್.ರಾಹುಲ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ನಾಯಕನ ಮಾತನ್ನ ಆಲಿಸುವ ಸಂಯಮ ತೋರದ ಗೋಯೆಂಕಾ, ಏರುಧ್ವನಿಯಲ್ಲೇ ಪ್ರಶ್ನಿಸಿದ್ದರು.
ಇದನ್ನೂ ಓದಿ: RCB ಆಟಗಾರರ ಕುಟುಂಬಕ್ಕೂ ಅಚ್ಚುಮೆಚ್ಚು ಈ ಮಾರ್ಕೆಟಿಂಗ್ ಹೆಡ್.. ಯಾರು ನಿಖಿಲ್ ಸೋಸಲೆ..?
ಇದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಮೊದಲು ಕೆ.ಎಲ್.ರಾಹುಲ್ ಬಗ್ಗೆ ಹಾಡಿ ಹೊಗಳಿದ್ದ ಇದೇ ಸಂಜೀವ್ ಗೋಯೆಂಕಾ, ನಂತರ ಟೀಕಿಸಿ ತಂಡದಿಂಲೇ ಗೇಟ್ಪಾಸ್ ನೀಡಿದ್ರು. ಆದ್ರೀಗ ಇದೇ ಸ್ಥಿತಿ ರಿಷಭ್ ಪಂತ್ಗೂ ಎದುರಾಗಿರುವುದು ಸುಳ್ಳಲ್ಲ.
ಪಕ್ಕಾ ಬ್ಯುಸಿನೆಸ್ ಮೈಂಡ್ ಆಗಿರೋ ಗೋಯೆಂಕಾ, ಲಾಭ ನಷ್ಟದ ಲೆಕ್ಕಾಚಾರ ಇಲ್ದೇ ಹಣ ಸುರಿಯಲ್ಲ. ಒಂದು ವೇಳೆ ಲಾಭವಾಗದಿದ್ರೆ ಅವರನ್ನು ದೂರ ತಳ್ಳಲು ಯೋಚಿಸದ ಈತ, ಈಗ ಪಂತ್, ಜಹೀರ್ ಖಾನ್, ಜಸ್ಟಿನ್ ಲ್ಯಾಂಗರ್ ವಿಷಯದಲ್ಲಿ ತಲೆದಂಡದ ಚಿಂತನೆಯಲ್ಲಿರುವುದು ಅತಿಶಯೋಕ್ತಿಯೇನಲ್ಲ.
ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್.. ಸಿಐಡಿ ತನಿಖೆ ಬೆನ್ನಲ್ಲೇ ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ದಿಢೀರ್ ರಾಜೀನಾಮೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ