/newsfirstlive-kannada/media/post_attachments/wp-content/uploads/2024/04/Hardik_IPL.jpg)
ಶ್ರೀಲಂಕಾ ಪ್ರವಾಸಕ್ಕೆ ಮುನ್ನ ಅಷ್ಟೇ ಭಾರತ ಟಿ20 ಕ್ರಿಕೆಟ್​ ತಂಡದ ಹೊಸ ಕ್ಯಾಪ್ಟನ್​ ಆಗಿ ಸೂರ್ಯಕುಮಾರ್​ ಯಾದವ್​ ಅವರನ್ನು ನೇಮಕ ಮಾಡಲಾಯ್ತು. ಈ ಮೂಲಕ ಹಾರ್ದಿಕ್​ ಪಾಂಡ್ಯ ಟಿ20 ತಂಡದ ಕ್ಯಾಪ್ಟನ್​ ಆಗಲಿದ್ದಾರೆ ಅನ್ನೋ ಚರ್ಚೆಗೆ ಬ್ರೇಕ್​ ಬಿತ್ತು. ಇದರ ಮಧ್ಯೆ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಕೂಡ ಬದಲಾಗೋ ಸಾಧ್ಯತೆ ಇದೆ.
ಮುಂಬರೋ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ಗೆ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಬದಲಾಗೋ ಸಾಧ್ಯತೆ ಹೆಚ್ಚಿದೆ. ಟೀಮ್​ ಇಂಡಿಯಾ ಟಿ20 ಕ್ಯಾಪ್ಟನ್​ ಆಗಿರೋ ಸೂರ್ಯಕುಮಾರ್​ ಯಾದವ್​ ಅವರಿಗೆ ಮುಂಬೈ ಇಂಡಿಯನ್ಸ್​ ನಾಯಕತ್ವ ಪಟ್ಟ ಕಟ್ಟಲಿದ್ದಾರೆ ಎಂದು ವರದಿಯಾಗಿದೆ.
/newsfirstlive-kannada/media/post_attachments/wp-content/uploads/2024/06/SURYA-KUMAR.jpg)
ಸೂರ್ಯ ಮುಂಬೈ ಇಂಡಿಯನ್ಸ್​ಗೆ ಕ್ಯಾಪ್ಟನ್​​!
ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿಯಿಂದ ಹಾರ್ದಿಕ್​ ಪಾಂಡ್ಯಗೆ ಕೊಕ್​ ನೀಡುವುದು ಬಹುತೇಕ ಖಚಿತವಾಗಿದೆ. ಹಾರ್ದಿಕ್​ ಪಾಂಡ್ಯಗೆ ಈಗ ಸೂರ್ಯಕುಮಾರ್​ ಯಾದವ್​ ಅವರೇ ವಿಲನ್​ ಆಗಿದ್ದಾರೆ. ಕೇವಲ ಸೂರ್ಯ ಮಾತ್ರವಲ್ಲ ಜಸ್ಪ್ರೀತ್​ ಬೂಮ್ರಾ ಕೂಡ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us