ಒಡಿಶಾ ಭೀಕರ ತ್ರಿವಳಿ ರೈಲು ದುರಂತ
ಟ್ರ್ಯಾಕ್ ದುರಸ್ತಿಕಾರ್ಯ ಪೂರ್ಣ.. ರೈಲು ಸಂಚಾರ ಪುನರಾರಂಭ
ದಶಕದ ಈ ಮಹಾ ದುರಂತದಲ್ಲಿ 275 ಮಂದಿ ಬಲಿ
ದಶಕದ ಈ ಮಹಾ ದುರಂತ, ಕಣ್ಣೀರ ಜೊತೆಗೆ ರಕ್ತದ ಕೋಡಿಯನ್ನೇ ಹರಿಸಿದೆ. ಅಷ್ಟು ಅತ್ಯಂತ ಘನಘೋರ. ಭೀಕರ ಈ ತ್ರಿವಳಿ ರೈಲು ದುರಂತ ಓಡಿಶಾದ ಬಾಲಾಸೋರ್ ಅಪಘಾತ. ಈ ದುರಂತದಲ್ಲಿ ಉಸಿರು ಚೆಲ್ಲಿದವರ ಸಂಖ್ಯೆ 275 ಎಂದು ಹೇಳಲಾಗ್ತಿದ್ದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರೈಲ್ವೇ ಟ್ರ್ಯಾಕ್ ದುರಸ್ಥಿ ಬಳಿಕ ರೈಲು ಸಂಚಾರ ಪುನಾರಂಭ
ತ್ರಿವಳಿ ರೈಲು ಅಪಘಾತದಿಂದ ರೈಲ್ವೆ ಮಾರ್ಗವೆಲ್ಲ ಅಸ್ತವ್ಯಸ್ತವಾಗಿದ್ದು, ದಕ್ಷಿಣ ರಾಜ್ಯಗಳಿಗೆ ಸಂಪರ್ಕವೇ ಕಡಿತಗೊಂಡಿತ್ತು. ಈ ಭಾಗದಲ್ಲಿ ಸಂಚರಿಸಬೇಕಿದ್ದ 50ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಸದ್ಯ 288 ಜನರನ್ನು ಬಲಿ ತೆಗೆದುಕೊಂಡಿದ್ದ ಬಾಲಸೋರ್ ಹಳಿ ದುರಸ್ಥಿಗೊಂಡಿದ್ದು ಕಡಿತಗೊಂಡ ರೈಲು ಸಂಚಾರ ಪುನರಾರಂಭಗೊಂಡಿದೆ.
ದುರಂತ ನಡೆದ ಓಡಿಶಾದ ಬಾಲಾಸೋರ್ ಜಾಗದಲ್ಲಿ ಅವಶೇಷಗಳ ತೆರವು ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆದಿದೆ. ಗಾಯಗೊಂಡು ಪತ್ತೆಯಾದವರ ಹಾಗೂ ಮೃತದೇಹಗಳನ್ನು ಗುರುತಿಸುವ ಕೆಲಸವಾಗ್ತಿದೆ. ಎಲ್ಲರ ಬಗ್ಗೆ ಮಾಹಿತಿ ಪಡೆದು ಅವರನ್ನು ಕುಟುಂಬದ ಜೊತೆ ಸಂಪರ್ಕ ಸಾಧಿಸುವಂತೆ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ. ರೈಲು ಅಪಘಾತ ಪ್ರಕರಣವನ್ನ ಸಿಬಿಐ ತನಿಖೆಗೆ ನೀಡಲು ರೇಲ್ವೇ ಮಂಡಳಿ ಶಿಫಾರಸು ಮಾಡಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಎರಡು ಟ್ರ್ಯಾಕ್ಗಳಲ್ಲಿ ಎಂದಿನಂತೆ ರೈಲುಗಳು ಸಂಚರಿಸುತ್ತೇವೆ. ನಾಪತ್ತೆಯಾದವರನ್ನು ಆದಷ್ಟು ಬೇಗ ಅವರ ಕುಟುಂಬದವರು ಪತ್ತೆ ಹಚ್ಚಬೇಕೆನ್ನುವುದೇ ನಮ್ಮ ಗುರಿ ಅಂತ ಹೇಳಿದರು.
ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೇ ಸಚಿವ
ರೈಲಿನಲ್ಲಿ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸಿದವರಿಗೂ ಪರಿಹಾರ
ಬಾಲಾಸೋರ್ ಬಳಿ ಅಪಘಾತವಾದ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ ನೀಡಲಾಗುತ್ತದೆ ಅಂತ ರೈಲ್ವೆ ಇಲಾಖೆ ತಿಳಿಸಿದೆ. ಈಗಾಗಲೇ ರೈಲ್ವೆ ಸಚಿವರು ಘೋಷಿಸಿರುವಂತೆ ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರ ಗಾಯಾಳುಗಳಿಗೆ 2 ಲಕ್ಷ, ಸಣ್ಣಪುಟ್ಟ ಗಾಯವಾದವರಿಗೆ 50,000 ರೂಪಾಯಿ ಪರಿಹಾರವನ್ನು ತ್ವರಿತವಾಗಿ ವಿತರಿಸಲಾಗುವುದು ಅಂತಾನೂ ರೈಲ್ವೆ ಇಲಾಖೆ ತಿಳಿಸಿದೆ.
ಪೋಷಕರ ಕಳೆದುಕೊಂಡ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಅದಾನಿ
ಭೀಕರ ರೈಲ್ವೆ ಅಪಘಾತದಲ್ಲಿ ತಂದೆ-ತಾಯಿ ಹಾಗೂ ಪೋಷಕರನ್ನು ಕಳೆದುಕೊಂಡ ಅನಾಥರಾದ ಮಕ್ಕಳ ಪಾಲಿಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ ಆಪತ್ಬಾಂಧವರಾಗಿದ್ದಾರೆ. ರೈಲ್ವೆ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ವಹಿಸಿಕೊಳ್ಳುತ್ತದೆ ಅಂತ ಗೌತಮ್ ಅದಾನಿ ಘೋಷಿಸಿದ್ದಾರೆ.
‘ಮಕ್ಕಳ ಶಿಕ್ಷಣದ ಜವಾಬ್ದಾರಿ ನಮಗೆ’
ಒಡಿಶಾ ರೈಲು ಅಪಘಾತದಿಂದ ನಾವೆಲ್ಲರೂ ತೀವ್ರವಾಗಿ ಆಘಾತಕ್ಕೊಳಗಾಗಿದ್ದೇವೆ. ಈ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಅಮಾಯಕ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹ ವಹಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ಒದಗಿಸುವುದು ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಒದಗಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ.
ರೈಲ್ವೇ ದುರಂತಕ್ಕೂ ಕೆಲವರಿಂದ ರಾಜಕೀಯ, ಕೋಮು ಬಣ್ಣ
ಇನ್ನು ಭೀಕರ ರೈಲ್ವೇ ದುರಂತಕ್ಕೂ ಕೆಲವರು ಕೋಮು ಬಣ್ಣ ಹಚ್ಚಿ ರಾಜಕೀಯ ಮಾಡುತ್ತಿದ್ದಾರೆ. ಈ ರೈಲು ದುರಂತಕ್ಕೆ ಮಸೀದಿ ಕಾರಣ ಅಂತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದುರಂತಕ್ಕೆ ಕೋಮು ಬಣ್ಣ ಹಚ್ಚುವ ಕೆಲಸ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರಿಂದ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಪೊಲೀಸರು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಓಡಿಶಾದಲ್ಲಿ ನಡೆಯಬಾರದ ದಶಕದ ದುರಂತವೊಂದು ನಡೆದು ಹೋಗಿದೆ. ನೂರಾರು ಜನರು ಉಸಿರು ಚೆಲ್ಲಿದ್ದು ಸಾವಿರಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ಕೇಂದ್ರ ಸರ್ಕಾರ ಭರದಿಂದ ರಕ್ಷಣಾ ಕಾರ್ಯ ನಡೆಸ್ತಿದೆ. ಮೃತರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಿದೆ. ರೈಲ್ವೇ ಇಲಾಖೆಯೂ ಮುಂದೆ ಈ ರೀತಿ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ