/newsfirstlive-kannada/media/post_attachments/wp-content/uploads/2025/02/GOUTAM-ADANI-2.jpg)
ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ವಿವಾಹ ಕಾರ್ಯಕ್ರಮವು ನಿನ್ನೆ ನಡೆಯಿತು. ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದ ಸರಳ ವಿವಾಹ ಕಾರ್ಯಕ್ರಮದಲ್ಲಿ ಜೀತ್ ಅದಾನಿ ಮತ್ತು ದಿವಾ ಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಮಾರಂಭವು ತುಂಬಾ ಸರಳವಾಗಿ ನಡೆದಿದ್ದು, ಕೇವಲ ಸಂಬಂಧಿಕರು, ಆಪ್ತರು ಭಾಗಿಯಾಗಿದ್ದರು.
ಮಗನ ಮದುವೆ ಸರಳವಾಗಿ ನೆರವೇರಿಸಿರುವ ಅದಾನಿ, ವಿವಿಧ ಸಾಮಾಜಿಕ ಕಾರ್ಯಗಳಿಗೆ ಎಂದು ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಅದಾನಿ, ದೇವರ ದಯೆಯಿಂದ ಜೀತ್ ದಿವಾ ಮದುವೆ ಸಂಪನ್ನವಾಗಿದೆ. ಚಿಕ್ಕದಾಗಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದರಿಂದ ಅನೇಕ ಹಿತೈಷಿಗಳಿಗೆ ಆಮಂತ್ರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: RCB, ಶ್ರೇಯಾಂಕ ಪಾಟೀಲ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್.. ಹೊಸ ಸಮಾಚಾರ..!
ಅದಾನಿ ಮಹಾದಾನಿ ಆಗುವ ಮೂಲಕ ಸುದ್ದಿಯಲ್ಲಿದ್ದಾರೆ. ಪುತ್ರನ ಮದುವೆಯನ್ನು ಸಿಂಪಲ್ಲಾಗಿ ಮಾಡಿ 10 ಸಾವಿರ ಕೋಟಿ ಹಣವನ್ನು ವಿವಿಧ ಸಾಮಾಜಿಕ ಕೆಲಸಕ್ಕೆ ದಾನ ಮಾಡೋದಾಗಿ ತಿಳಿಸಿದ್ದಾರೆ. ಈ ಮೊತ್ತವು ಮುಕೇಶ್ ಅಂಬಾನಿ ಪುತ್ರ ಅನಂತ್ಅಂಬಾನಿ ಮದುವೆಯ ಎರಡರಷ್ಟಿದೆ. ಅನಂತ್ ಅಂಬಾನಿ ತಮ್ಮ ಮದುವೆ ಸಂದರ್ಭದಲ್ಲಿ 5 ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಇನ್ನು, ಗೌತಮ್ ಅದಾನಿ 10 ಸಾವಿರ ಕೋಟಿ ಹಣದಲ್ಲಿ ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಾಲೆಗಳು, ಉದ್ಯೋಗವಕಾಶಗಳು ಹಾಗೂ ಜಾಗತಿಕ ಕೌಶಲ್ಯ ನೀಡಿರುವ ಸಂಸ್ಥೆಗಳ ಸ್ಥಾಪನೆಗೆ ಹಣ ಮೀಸಲಿಡಲಿದ್ದಾರೆ.
500 ದಿವ್ಯಾಂಗ ವಧುಗಳಿಗೆ ತಲಾ 10 ಲಕ್ಷ ರೂಪಾಯಿ
ಅಲ್ಲದೇ ಪ್ರತಿ ವರ್ಷ 500 ದಿವ್ಯಾಂಗ ವಧುಗಳಿಗೆ ತಲಾ 10 ಲಕ್ಷ ರೂಪಾಯಿ ನೀಡುವುದಾಗಿ ಜೀತ್ ಅದಾನಿ ಹಾಗೂ ದಿವಾ ಶಾ ಜೋಡಿ ಘೋಷಣೆ ಮಾಡಿದೆ. ಆ ಮೂಲಕ ನವ ಜೋಡಿ ಕೂಡ ಗೌತಮ್ ಅದಾನಿಯಂತೆ ಜನರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದೆ.
ಇದನ್ನೂ ಓದಿ: ಹಾಸ್ಟೆಲ್ನಲ್ಲಿದ್ದ ಕುಚಿಕು ಗೆಳೆಯನಿಗೂ 500 ಕೋಟಿ ಆಸ್ತಿ ಉಯಿಲು.. ಟಾಟಾ, ದತ್ತ ನಡುವಿನ ಸ್ನೇಹ ಎಂಥದ್ದು..?
परमपिता परमेश्वर के आशीर्वाद से जीत और दिवा आज विवाह के पवित्र बंधन में बंध गए।
यह विवाह आज अहमदाबाद में प्रियजनों के बीच पारंपरिक रीति रिवाजों और शुभ मंगल भाव के साथ संपन्न हुआ।
यह एक छोटा और अत्यंत निजी समारोह था, इसलिए हम चाह कर भी सभी शुभचिंतकों को आमंत्रित नहीं कर सके,… pic.twitter.com/RKxpE5zUvs— Gautam Adani (@gautam_adani) February 7, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ