/newsfirstlive-kannada/media/post_attachments/wp-content/uploads/2024/07/KL-Rahul_Gambhir.jpg)
ಟೀಮ್ ಇಂಡಿಯಾ ಹೊಸ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ ಆಗಿದ್ದಾರೆ. ಈಗ ಕೋಚ್ ಗಂಭೀರ್ ಸಾರಥ್ಯದಲ್ಲೇ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಕ್ಯಾಪ್ಟನ್ ಆಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಯೆಸ್, ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಗಂಭೀರ್ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಬುಮ್ರಾ ರೆಸ್ಟ್ ಕೇಳಿದ್ದಾರೆ. ಹಾಗಾಗಿ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಟಿ20 ಕ್ರಿಕೆಟ್ನಿಂದ ರಾಹುಲ್ಗೆ ಕೊಕ್..?
ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸೋ ಅವಕಾಶ ಸಿಕ್ಕರೂ ರಾಹುಲ್ಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇದೆ. ಕೆ.ಎಲ್ ರಾಹುಲ್ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ಗೆ ಆಯ್ಕೆಯಾಗಿರಲಿಲ್ಲ. ಇದಕ್ಕೆ ಕಾರಣ ರಾಹುಲ್ ಸ್ಟ್ರೈಕ್ ರೇಟ್ ಮತ್ತು ಸ್ಲೋ ಇನ್ನಿಂಗ್ಸ್. ಈಗಾಗಲೇ ಟೀಮ್ ಇಂಡಿಯಾಗೆ ಟಿ20 ಕ್ರಿಕೆಟ್ನಲ್ಲಿ ಎಲ್ಲಾ ಸ್ಲಾಟ್ಗೂ ಹೆಚ್ಚು ಆಪ್ಷನ್ಗಳು ಇವೆ. ಹಾಗಾಗಿ ರಾಹುಲ್ ಅವರನ್ನು ಟಿ20 ಕ್ರಿಕೆಟ್ನಿಂದ ದೂರ ಇಡೋ ಪ್ಲಾನ್ ಗಂಭೀರ್ ಅವರದ್ದು.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಹೊಸ ನಾಯಕ ಬೇಕಿದೆ. ಹೊಸ ನಾಯಕ ಯಾರು ಅನ್ನೋ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬಂದಿದೆ.