ಶ್ರೀಲಂಕಾ ಪ್ರವಾಸ.. ಕೋಚ್​​ ಆಗುತ್ತಿದ್ದಂತೆ ಪಂತ್​ಗೆ ಬಿಗ್​ ಶಾಕ್​ ಕೊಟ್ಟ ಗೌತಮ್​ ಗಂಭೀರ್​!

author-image
Ganesh Nachikethu
Updated On
ಕೋಚ್​​ ಆಗೋ ಮುನ್ನವೇ ಪಂತ್​ಗೆ ಶಾಕ್​ ಕೊಟ್ಟ ಗಂಭೀರ್​​.. ಟೀಮ್​ ಇಂಡಿಯಾದಿಂದ ಕೊಕ್​​?
Advertisment
  • ಐಸಿಸಿ ಮೆಗಾ 2024ರ ಟಿ20 ವಿಶ್ವಕಪ್​ನಲ್ಲಿ ರಿಷಭ್​ ಪಂತ್​ ಕಳಪೆ ಆಟ
  • ಮುಖ್ಯ ಕೋಚ್​​ ಆಗುತ್ತಿದ್ದಂತೆ ಪಂತ್​ಗೆ ಬಿಗ್​ ಶಾಕ್​ ಕೊಟ್ಟ ಗಂಭೀರ್​​​..!
  • ಪಂತ್​ ಬದಲಿಗೆ ಟೀಮ್​ ಇಂಡಿಯಾದಲ್ಲಿ ಸ್ಟಾರ್​ ಆಟಗಾರರಿಗೆ ಮಣೆ

ವೆಸ್ಟ್​ ಇಂಡೀಸ್​​ನಲ್ಲಿ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಫೈನಲ್​​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​ ಕೂಡ ವಿದಾಯ ಹೇಳಿದ್ದಾರೆ.

ರಾಹುಲ್​ ದ್ರಾವಿಡ್​ ನಿರ್ಗಮನದ ಬಳಿಕ ಗೌತಮ್​ ಗಂಭೀರ್​​ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿ ಅನೌನ್ಸ್​ ಆಗಿದ್ದಾರೆ. ಈಗಾಗಲೇ ಗಂಭೀರ್​ ಟೀಮ್​ ಇಂಡಿಯಾ ಮುಖ್ಯ ಕೋಚ್​ ಆಗಿದ್ದು, ಡೇರಿಂಗ್​ ಡಿಸಿಷನ್ಸ್​ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ವಿಚಾರವೇ ಪಂತ್​ಗೆ ಶಾಕ್​ ಕೊಟ್ಟಿದೆ. ಇದಕ್ಕೆ ಕಾರಣ ಸಂಜು ಸ್ಯಾಮ್ಸನ್, ಕೆ.ಎಲ್​ ರಾಹುಲ್​​ ಮತ್ತು ಧೃವ್​ ಜುರೆಲ್​​​​.

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಒಂದೆರಡು ಪಂದ್ಯ ಹೊರತುಪಡಿಸಿ ಪಂತ್​​ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಅಷ್ಟೇ ಅಲ್ಲ ಇದುವರೆಗೂ ಪಂತ್​ ಆಡಿರೋ 74 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 1158 ರನ್​ ಕಲೆ ಹಾಕಿದ್ದಾರೆ. ಆವರೇಜ್​​ ಕೇವಲ 22 ಇದ್ದು, ಸ್ಟ್ರೈಕ್​ ರೇಟ್​ ಕೂಡ 127 ಮಾತ್ರ ಇದೆ. ಹಾಗಾಗಿ ಪಂತ್​ ಜಾಗಕ್ಕೆ ಸಂಜು ಸ್ಯಾಮ್ಸನ್​ ಅವರನ್ನು ಗಂಭೀರ್​ ತಂದು ಕೂರಿಸೋ ಸಾಧ್ಯತೆ ಇದೆ.


">July 14, 2024

ಈ ಹಿಂದೆಯೇ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗದಿದ್ದಕ್ಕೆ ಗಂಭೀರ್​ ಆಕ್ರೋಶ ಹೊರಹಾಕಿದ್ರು. ಸಂಜು ಸ್ಯಾಮ್ಸನ್​ ಭಾರತ ತಂಡದ ಬೆಸ್ಟ್​ ವಿಕೆಟ್​ ಕೀಪರ್​ ಬ್ಯಾಟರ್​ ಎಂದು ಟ್ವೀಟ್​ ಮಾಡಿದ್ರು. ಅಷ್ಟೇ ಅಲ್ಲದೆ ಬಿಸಿಸಿಐ ಎಷ್ಟು ಅವಕಾಶ ನೀಡಿದ್ರೂ ಪಂತ್​​​ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಪದೇ ಪದೇ ಪಂತ್​ ಫೇಲ್ಯೂರ್​ ಆಗುತ್ತಿದ್ದಾರೆ. ಹಾಗಾಗಿ ಇವರು ಕೀಪಿಂಗ್​​ ಮೇಲೆ ಫುಲ್​ ಫೋಕಸ್​ ಮಾಡುವಾಗ ಹೇಗೆ ಬ್ಯಾಟಿಂಗ್​​ನಲ್ಲಿ ಸಕ್ಸಸ್​ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ರು.

ಇದನ್ನೂ ಓದಿ: ಶ್ರೀಲಂಕಾ ಸರಣಿ.. ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಹಾರ್ದಿಕ್​ ಪಾಂಡ್ಯ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment