ಯಾರು ಯಾವಾಗ ಬೇಕಾದರೂ ಕೈ ಎತ್ತಬಹುದು.. ರೋಹಿತ್, ಕೊಹ್ಲಿ ನಿವೃತ್ತಿ ಬಗ್ಗೆ ಕೋಚ್ ಗಂಭೀರ್​​ ಮಾತು

author-image
Bheemappa
Updated On
ಯಾರು ಯಾವಾಗ ಬೇಕಾದರೂ ಕೈ ಎತ್ತಬಹುದು.. ರೋಹಿತ್, ಕೊಹ್ಲಿ ನಿವೃತ್ತಿ ಬಗ್ಗೆ ಕೋಚ್ ಗಂಭೀರ್​​ ಮಾತು
Advertisment
  • ಹಿರಿಯ ಆಟಗಾರರು ಇಲ್ಲದೆಯೂ ಭಾರತ ತಂಡ ಈಗಾಗಲೇ ಗೆದ್ದಿದೆ
  • ಒಬ್ಬರು ತಂಡದಿಂದ ಹೊರ ಹೋಗುವುದರಿಂದ ಇತರರಿಗೆ ಅವಕಾಶ
  • ರೋಹಿತ್, ಕೊಹ್ಲಿ ಹೆಸರು ಉಲ್ಲೇಖ ಮಾಡದೇ ಗಂಭೀರ್ ಏನಂದ್ರು?

ಇಂಗ್ಲೆಂಡ್​ ವಿರುದ್ಧದ ಪಂದ್ಯಗಳ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸುವುದು ಸವಾಲಾಗಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಬಳಿಕ ಆ ಸ್ಥಾನಕ್ಕೆ ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇದರ ನಡುವೆ ಕೆಲ ಯುವ ಆಟಗಾರರು ಭಾರತದ ಟೆಸ್ಟ್​ ಕ್ರಿಕೆಟ್​ನ ಭಾಗವಾಗಲಿದ್ದಾರೆ. ಇದರ ಬೆನ್ನಲ್ಲೇ ಭಾರತ ತಂಡದ ಕೋಚ್​ ಗೌತಮ್ ಗಂಭೀರ್ ಅವರು ರೋಹಿತ್, ಕೊಹ್ಲಿ ನಿವೃತ್ತಿ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕೋಚ್​ ಗೌತಮ್ ಗಂಭೀರ್ ಅವರು, ನಿವೃತ್ತಿ ಘೋಷಣೆ ಮಾಡುವುದು ಆಟಗಾರರ ವೈಯಕ್ತಿಕ ವಿಷಯ. ಯಾವಾಗ ಕ್ರಿಕೆಟ್​ ಆರಂಭ ಮಾಡುತ್ತಿಯಾ ಮತ್ತು ಅದನ್ನು ಯಾವಾಗ ಕೊನೆಗೊಳಿಸುತ್ತಿಯಾ ಎನ್ನುವುದು ತೀರ ವೈಯಕ್ತಿಕವಾದ ವಿಷಯವಾಗಿದೆ. ಅದನ್ನು ಕೇಳುವ ಹಕ್ಕು ಯಾವೊಬ್ಬ ಭಾರತೀಯನಿಗೂ ಇಲ್ಲ. ನಿರ್ಣಯ ಅವರಿಂದಲೇ ಬಂದಿರುತ್ತದೆ. ಅವರ ನಿರ್ಧಾರಕ್ಕೆ ನಾವು ಗೌರವ ಕೊಡಬೇಕು ಎಂದು ಹೇಳಿದ್ದಾರೆ.

ಇಬ್ಬರು ಹಿರಿಯ ಆಟಗಾರರು ಇಲ್ಲದೇ ಮುಂದುವರೆಯಬೇಕಾಗುತ್ತದೆ. ರೋಹಿತ್ ಹಾಗೂ ಕೊಹ್ಲಿ ಹೆಸರನ್ನು ಉಲ್ಲೇಖಿಸಿದೇ ಮಾತನಾಡಿದ ಗಂಭೀರ್, ಜನರು ಯಾವಾಗ ಬೇಕಾದರೂ ಕೈ ಎತ್ತಬಹುದು. ಅದಕ್ಕೆ ನಾನು ಸಿದ್ಧನಿದ್ದೇನೆ. ಇದು ಕಠಿಣವಾಗಿರುತ್ತದೆ. ಈ ಪ್ರಶ್ನೆಯನ್ನು ಈ ಮೊದಲೇ ಕೇಳಲಾಗಿತ್ತು ಎಂದು ಗಂಭೀರ್ ಹೇಳಿದರು.

publive-image

ಹಿರಿಯ ಆಟಗಾರರು ಇಲ್ಲದೇ ತಂಡವು ಅನುಭವ ಕಳೆದುಕೊಳ್ಳಬಹುದು. ಆದರೆ ಒಬ್ಬರು ಹೋಗುವುದರಿಂದ ಹೊಸ ಆಟಗಾರರಿಗೆ ಅವಕಾಶ ಸಿಗುತ್ತದೆ. ಆಗ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಅವಕಾಶ ಇರುತ್ತದೆ. ಅದನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದನ್ನು ಕೋಚ್ ಗಂಭೀರ್ ಒತ್ತಿಯಾಗಿ ಹೇಳಿದ್ದಾರೆ.

ಹಿರಿಯ ಆಟಗಾರರು ಇಲ್ಲದೆಯೂ ಭಾರತ ಯಶಸ್ಸು ಕಾಣುತ್ತದೆ ಎಂದು ಉದಾಹರಣೆ ಸಮೇತ ಹೇಳಿದರು. ಜಸ್​ಪ್ರಿತ್ ಬೂಮ್ರಾ ಇಲ್ಲದೆಯೂ ಚಾಂಪಿಯನ್​ ಟ್ರೋಫಿಯಲ್ಲಿ ಭಾರತ ಟ್ರೋಫಿಯನ್ನು ಎತ್ತಿ ಹಿಡಿಯಿತು ಎಂದು ಹೇಳಿದರು. ಇನ್ನು ನಾಳೆ ಭಾರತದ ಟೆಸ್ಟ್ ಕ್ರಿಕೆಟ್​ ತಂಡದ ಆಟಗಾರರು ಹಾಗೂ ನೂತನ ನಾಯಕನ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment