ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

author-image
Ganesh
Updated On
ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ
Advertisment
  • ಟೀಂ ಇಂಡಿಯಾದ ನೂತನ ಕೋಚ್ ಆಗಿ ಗಂಭೀರ್ ಆಯ್ಕೆ
  • ಷರತ್ತುಗಳನ್ನು ಇಟ್ಟು ಟೀಂ ಇಂಡಿಯಾ ಕೋಚ್ ಆಗಿರುವ ವರದಿ
  • ಗಂಭೀರ್ ಇಟ್ಟಿದ್ದ ಷರತ್ತುಗಳಿಗೆ ಸೊಪ್ಪು ಹಾಕಲಿಲ್ಲವೇ ಬಿಸಿಸಿಐ..?

ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ.

ಬೆನ್ನಲ್ಲೇ ಗಂಭೀರ್ ಅವರು ಕೆಲವು ಷರತ್ತುಗಳನ್ನು ನೀಡಿ ಕೋಚ್ ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇತ್ತು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ.. ಟೀಂ ಇಂಡಿಯಾದ ನೂತನ ಕೋಚ್ ಇಟ್ಟಿರುವ ಕೆಲವು ದೊಡ್ಡ ಬೇಡಿಕೆಗಳನ್ನು ಬಿಸಿಸಿಐ ತಿರಸ್ಕರಿಸಿದೆ ಎನ್ನಲಾಗಿದೆ.
ಶ್ರೀಲಂಕಾ ಪ್ರವಾಸದಲ್ಲಿ ಗಂಭೀರ್, ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಈ ವೇಳೆ ಲಂಕಾ ವಿರುದ್ಧ ಭಾರತವು 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಜುಲೈ 27 ರಿಂದ ಶ್ರೀಲಂಕಾ ಪ್ರವಾಸ ಆರಂಭ ಆಗಲಿದೆ. ಪ್ರಸ್ತುತ ಜಿಂಬಾಬ್ವೆ ಪ್ರವಾಸದಲ್ಲಿ ಶುಬ್ಮನ್ ಗಿಲ್ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದಾರೆ. ಭಾರತ ತಂಡವು 5 ಪಂದ್ಯಗಳ T20 ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿದೆ.

ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ

publive-image

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಆಗಿ ತಂಡದೊಂದಿಗೆ ಉಪಸ್ಥಿತರಿದ್ದಾರೆ.
ಜಿಂಬಾಬ್ವೆ ಪ್ರವಾಸದಿಂದಲೇ ಟೀಂ ಇಂಡಿಯಾ ಸೇರಲು ಗಂಭೀರ್ ಬಯಸಿದ್ದರು. ಗಂಭೀರ್ ಅವರ ಈ ಮನವಿಯನ್ನು ಬಿಸಿಸಿಐನ ಉನ್ನತ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಶ್ರೀಲಂಕಾ ಪ್ರವಾಸದ ಮೂಲಕ ತಂಡವನ್ನು ಸೇರಿಕೊಳ್ಳುವಂತೆ ಬಿಸಿಸಿಐ ಹೇಳಿದೆ ಎನ್ನಲಾಗಿದೆ.

ಇದನ್ನೂ ಓದಿ:ಜೈಲಿನಲ್ಲಿ ಮಕ್ಕಳನ್ನು ಕಂಡು ರೇವಣ್ಣ ದಂಪತಿ ಕಣ್ಣೀರು.. ಅಪ್ಪ-ಅಮ್ಮನ ಕಂಡು ಭಾವುಕರಾದ ಪ್ರಜ್ವಲ್, ಸೂರಜ್..!

ರಾಹುಲ್ ದ್ರಾವಿಡ್ ಬದಲಿಗೆ ಸ್ಥಾನ
ರಾಹುಲ್ ದ್ರಾವಿಡ್ ಬದಲಿಗೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. 2024ರ ಟಿ20 ವಿಶ್ವಕಪ್‌ ಮುಗಿಯುವುದರೊಂದಿಗೆ ದ್ರಾವಿಡ್‌ ಅವಧಿಯೂ ಅಂತ್ಯಗೊಂಡಿತು. ದ್ರಾವಿಡ್ ಅವರನ್ನು 2021ರಲ್ಲಿ ಕೋಚ್ ಆಗಿ ನೇಮಕ ಮಾಡಲಾಗಿತ್ತು. ದ್ರಾವಿಡ್​ಗೆ ತಮ್ಮ ಅಧಿಕಾರಾವಧಿ ವಿಸ್ತರಿಸುವಂತೆ ಕೇಳಿಕೊಂಡರೂ ನಿರಾಕರಿಸಿದ್ದರು. ನೂತನ ಕೋಚ್ ಅಧಿಕಾರಾವಧಿಯು ಡಿಸೆಂಬರ್ 31, 2027 ರವರೆಗೆ ಇರುತ್ತದೆ. ಗಂಭೀರ್ ಅವಧಿಯಲ್ಲಿ ಟೀಮ್ ಇಂಡಿಯಾ ಪ್ರಮುಖ ಐಸಿಸಿ ಟೂರ್ನಿಗಳನ್ನು ಆಡಲಿದೆ.

ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment