/newsfirstlive-kannada/media/post_attachments/wp-content/uploads/2025/07/Gambhir_GILL.jpg)
ಟೆಸ್ಟ್​ ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾ ಕಳಪೆ ಆಟ ಆಂಗ್ಲರ ನಾಡಲ್ಲೂ ಮುಂದುವರೆದಿದೆ. ಲೀಡ್ಸ್​ ಟೆಸ್ಟ್​ ಸೋಲಿನ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಭಾರೀ ಬೆಳವಣಿಗೆಗಳು ನಡೀತಿವೆ. ಇಂಗ್ಲೆಂಡ್​​ ಪ್ರವಾಸ ಅಂತ್ಯದ ಬೆನ್ನಲ್ಲೇ ಮೇಜರ್​ ಸರ್ಜರಿಗೆ ಮಹೂರ್ತ ಫಿಕ್ಸ್​ ಆಗಿದೆ. ಹೆಡ್​ ಕೋಚ್​ ಗೌತಮ್​ ಗಂಭೀರ್​​​ ತಲೆದಂಡಕ್ಕೆ ಗಂಭೀರ ಚಿಂತನೆ ನಡೀತಿದೆ.
ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಗುರುವಾಗಿ ಜುಲೈ 9ಕ್ಕೆ ಭರ್ತಿ ಒಂದು ವರ್ಷ ಆಗಲಿದೆ. ಈ ಅವಧಿಯಲ್ಲಿ ಟೀಮ್​ ಇಂಡಿಯಾದ್ದು ಒಂಥರಾ ವಿಚಿತ್ರವಾದ ಜರ್ನಿ. ವೈಟ್​​ಬಾಲ್​ ಫಾರ್ಮೆಟ್​​ನಲ್ಲಿ ಸಕ್ಸಸ್​​ನ ಪೀಕ್​ನಲ್ಲಿರೋ ಟೀಮ್​ ಇಂಡಿಯಾ ಟೆಸ್ಟ್​​ ಫಾರ್ಮೆಟ್​ನಲ್ಲಿ ಪಾತಾಳಕ್ಕೆ ಕುಸಿದಿದೆ. ಇಂಗ್ಲೆಂಡ್​​ನಲ್ಲೂ ಅದೇ ರಾಗ.. ಅದೇ ಹಾಡು.. ಹೀನಾಯ ಪರ್ಫಾಮೆನ್ಸ್​​ ಮುಂದುವರೆದಿದೆ.
ಬಾರ್ಡರ್​​-ಗವಾಸ್ಕರ್​​ ಸರಣಿಯಲ್ಲಿ ಹೀನಾಯ ಸೋಲು
ಟೀಮ್​ ಇಂಡಿಯಾದ ಹೆಡ್​​ ಕೋಚ್​ ಗೌತಮ್​ ಗಂಭೀರ್​​ರ ಟೆಸ್ಟ್​ ಟ್ರ್ಯಾಕ್​ ರೆಕಾರ್ಡ್​​ ಇದು. ಗಂಭೀರ್​​ ಮಾರ್ಗದರ್ಶನದ ಮೊದಲ ಸರಣಿಯಲ್ಲಿ ಬಾಂಗ್ಲಾದೇಶ ಎದುರು ಟೀಮ್​ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿತು. ಆದ್ರೆ, ಆನಂತರ ಸೋಲಿನ ಹಾದಿ ತುಳಿತು. 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್​ ಸರಣಿ ಸೋತ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ವಿರುದ್ಧ ವೈಟ್​ವಾಷ್​​ ಮುಖಭಂಗ ಅನುಭವಿಸಿತು.
ಆನಂತರದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲೂ ಗುರುವಿನ ಪಾಠ ವರ್ಕೌಟ್​ ಆಗಲಿಲ್ಲ. ಭಾರತ ತಂಡ 1-3 ಅಂತರದಲ್ಲಿ ಸೋಲುಂಡಿತು. ಇದು ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪ್ರವೇಶದ ಕನಸನ್ನ ಸೋಲು ನುಚ್ಚು ನೂರಾಗಿಸಿತು. ಇದೀಗ ಇಂಗ್ಲೆಂಡ್​ ಪ್ರವಾಸದಲ್ಲೂ ಅದೇ ರಾಗ.. ಅದೇ ಹಾಡು.. ಮೊದಲ ಟೆಸ್ಟ್​​ನಲ್ಲೇ ಹೀನಾಯ ಸೋಲಿಗೆ ಗುರಿಯಾಗಿದೆ.
ಇಂಗ್ಲೆಂಡ್​ ಸರಣಿಯೇ ಗಂಭೀರ್​ಗೆ ಕೊನೆಯ ಚಾನ್ಸ್​.!
ಲೀಡ್ಸ್​ ಟೆಸ್ಟ್​ನ ಹೀನಾಯ ಸೋಲಿನ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಚಟುವಟಿಗಳು ಗರಿಗೆದರಿವೆ. ಮೂಲಗಳ ಪ್ರಕಾರ ಗಂಭೀರ್​ಗೆ ಬಿಸಿಸಿಐ ಬಾಸ್​​ಗಳು ಡೆಡ್​​ಲೈನ್​ ಫಿಕ್ಸ್​ ಮಾಡಿದ್ದಾರೆ. ಟೆಸ್ಟ್​​​​ನಲ್ಲಿ ಸತತವಾಗಿ ಫೇಲ್​ ಆಗಿರೋ ಗಂಭೀರ್​ಗೆ ಇಂಗ್ಲೆಂಡ್​​ ಪ್ರವಾಸ ಡು ಆರ್​​ ಡೈ. ಸೋಲಿನೊಂದಿಗೆ ಆರಂಭ ಕಂಡರೋ ಅಂತ್ಯದಲ್ಲಿ ಟೀಮ್​ ಇಂಡಿಯಾ ಸರಣಿ ಗೆಲ್ಲಲೇಬೇಕು ಅನ್ನೋದು ಬಿಸಿಸಿಐ ಬಾಸ್​​ಗಳ ಕಟ್ಟಾಜ್ಞೆ ಆಗಿದೆ. ಒಂದು ಸೋತರೆ ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಗೌತಮ್ ಗಂಭೀರ್​ನ​ ಕಿಕ್​ ಔಟ್ ಮಾಡೋಕೆ ಬಿಸಿಸಿಐ ವಲಯದಲ್ಲಿ ಗಂಭೀರವಾದ ಚಿಂತನೆ ನಡೆದಿದೆ.
ಪತ್ಯೇಕ ಕೋಚ್​​ ನೇಮಕಕ್ಕೆ ಬಾಸ್​ಗಳ ಒಲವು.!
ಬಿಸಿಸಿಐನ ಕೆಲ ಅಧಿಕಾರಿಗಳಿಗೆ ಗಂಭೀರ್​ ಕೋಚಿಂಗ್​ ಸ್ಟೈಲ್​ ಬಗ್ಗೆ ಸ್ವಲ್ಪ​ ಅಸಮಾಧಾನ ಇದೆ. ಹೀಗಾಗಿ ಇಂಗ್ಲೆಂಡ್​ ಎದುರಿನ ಸರಣಿಯಲ್ಲಿ ಸೋಲುಂಡರೆ ಗಂಭೀರ್​​ ಬದಲಾವಣೆ ಪ್ರಸ್ತಾವವನ್ನ ಕೆಲವರು ಬಿಸಿಸಿಐ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಗಂಭೀರ್​​ ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಸಕ್ಸಸ್​ ಕಂಡಿದ್ದಾರೆ. 2026ರಲ್ಲಿ ಟಿ20 ವಿಶ್ವಕಪ್​ ಕೂಡ ಇದೆ. ಹೀಗಾಗಿ ಏಕದಿನ ಹಾಗೂ ಟಿ20ಗೆ ಮಾತ್ರ ಗಂಭೀರ್​ನ ಸೀಮಿತವಾಗಿಸಿ, ಟೆಸ್ಟ್​ ಫಾರ್ಮೆಟ್​​ಗೆ ಸಪರೇಟ್​​​ ಕೋಚ್​ ನೇಮಕಕ್ಕೆ ಬಿಸಿಸಿಐನ ಬಾಸ್​​​ಗಳು ಚಿಂತಿಸಿದ್ದಾರೆ.
NCA ಹೆಡ್​​​​ಗೆ ಟೆಸ್ಟ್​ ತಂಡದ ಹೆಡ್ ಕೋಚ್ ಪಟ್ಟ..?
ದ್ರಾವಿಡ್​ ನಿರ್ಗಮನದ ಬಳಿಕ ಟೀಮ್​ ಇಂಡಿಯಾ ಕೋಚ್​ ಸ್ಥಾನಕ್ಕೆ ವಿವಿಎಸ್​ ಲಕ್ಷ್ಮಣ್​ ಹೆಸ್ರು ಬಲವಾಗಿ ಕೇಳಿ ಬಂದಿತ್ತು. ಆದ್ರೆ, ಲಕ್ಷ್ಮಣ್, ಟ್ರಾವೆಲಿಂಗ್​ನ ಕಾರಣ ನೀಡಿ​ ಆಫರ್​​ನ ರಿಜೆಕ್ಟ್​ ಮಾಡಿದ್ದರು. ಇದೀಗ ಟೆಸ್ಟ್​​ಗೆ ಮಾತ್ರ ಸಪರೇಟ್​ ಕೋಚ್​ ನೇಮಿಸಲು ಹೊರಟ ಬೆನ್ನಲ್ಲೇ ಮತ್ತೆ ಲಕ್ಷ್ಮಣ್​ ಹೆಸರು ಮುನ್ನೆಲೆಗೆ ಬಂದಿದೆ. ರೆಡ್​ ಬಾಲ್​ ಫಾರ್ಮೆಟ್​​ಗೆ​​ ಮಾತ್ರ ಆಗಿರೋದ್ರಿಂದ ಲಕ್ಷ್ಮಣ್​ ಯೆಸ್​ ಅನ್ನೋ ಸಾಧ್ಯತೆ ದಟ್ಟವಾಗಿದೆ.
ಟೆಸ್ಟ್​ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಬೆಸ್ಟ್​ ಚಾಯ್ಸ್​.!
ಗೌತಮ್ ಗಂಭೀರ್​ಗೆ ಹೋಲಿಸಿದ್ರೆ, ಟೆಸ್ಟ್​ ತಂಡದ ಹೆಡ್​ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಪರ್ಫೆಕ್ಟ್​ ಚಾಯ್ಸ್​​ ಆಗಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅಪಾರ ಅನುಭವವಿದೆ. ದೇಶ-ವಿದೇಶದ ಪ್ಲೇಯಿಂಗ್​ ಕಂಡೀಷನ್ಸ್​​ ಬಗ್ಗೆ ಚೆನ್ನಾಗಿ ಅರಿವಿದೆ. ಮುಖ್ಯವಾಗಿ ಕೇವಲ ಅಗ್ರೆಸ್ಸಿವ್​ ಆಟ ಟೆಸ್ಟ್​ನಲ್ಲಿ ವರ್ಕೌಟ್​ ಆಗಲ್ಲ. ತಾಳ್ಮೆಯೂ ಮುಖ್ಯ ಅನ್ನೋದು ಗೊತ್ತಿದೆ. ಹೀಗಾಗಿ ಟೆಸ್ಟ್​ ತಂಡದ ಹೆಡ್ ಕೋಚ್ ಹುದ್ದೆಗೆ ವಿವಿಎಸ್​ ಲಕ್ಷ್ಮಣ್ ಅರ್ಹ ಕೋಚ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಸದ್ಯ ಬಿಸಿಸಿಐ ವಲಯದಲ್ಲಿ ಪ್ರತ್ಯೇಕ ಕೋಚ್​​ ನೇಮಕದ ಚರ್ಚೆ ಜೋರಾಗಿ ನಡೆದಿದೆ. ಇಂಗ್ಲೆಂಡ್​ ಸರಣಿಯ ಫಲಿತಾಂಶದ ಬಳಿಕ ಬಿಸಿಸಿಐ ಫೈನಲ್​ ಕಾಲ್​ ತೆಗೆದುಕೊಳ್ಳಲಿದೆ. ಟೆಸ್ಟ್​ ಪಾಸ್​ ಆಗಿ ಗಂಭೀರ್​ ಸ್ಥಾನ ಉಳಿಸಿಕೊಳ್ತಾರಾ.? ಫೇಲ್​ ಆದ್ರೆ ಗಂಭೀರ್​ ತಲೆದಂಡವಾಗುತ್ತಾ.? ಎಲ್ಲಕ್ಕೂ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ