/newsfirstlive-kannada/media/post_attachments/wp-content/uploads/2025/06/Gambhir.jpg)
ನಿನ್ನೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 11 ಜನರು ಜೀವ ಕಳೆದುಕೊಂಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಮುಖ್ಯ ಕೋಚ್ ಗಂಭೀರ್ ಮತ್ತು ನಾಯಕ ಗಿಲ್ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿರುವ ಗಂಭೀರ್, ಬೆಂಗಳೂರಿನಲ್ಲಿ ನಡೆದ ಘಟನೆ ದುರಾದೃಷ್ಟಕರ. ನಾನು ಎಂದಿಗೂ ರೋಡ್ ಶೋಗಳ ಬೆಂಬಲಿಗನಲ್ಲ. 2007ರಲ್ಲಿ ಭಾರತದ ಟಿ-20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದಾಗಲೂ ನಾನು ಅದನ್ನೇ ನಂಬಿದ್ದೆ. ಅಂತಹ ವಿಷಯಗಳಿಗಿಂತ ಜನರ ಜೀವಗಳು ಬಹಳ ಮುಖ್ಯ. ಭವಿಷ್ಯದಲ್ಲಿಯೂ ನಾನು ಅದನ್ನೇ ಹೇಳುತ್ತಲೇ ಇರುತ್ತೇನೆ.
ಇದನ್ನೂ ಓದಿ: ಕೆಎಸ್ಸಿಎ 9 ನಿರ್ಲಕ್ಷ್ಯಗಳು.. ಇದೇ ಕಾಲ್ತುಳಿತಕ್ಕೆ ಕಾರಣವಾಯ್ತಾ..?
ನಾವು 11 ಜನರ ಕಳೆದುಕೊಳ್ಳಲು ಸಾಧ್ಯವಿಲ್ಲ. ನೀವು ರೋಡ್ ಶೋ ನಡೆಸಲು ಸಿದ್ಧರಿಲ್ಲದಿದ್ದರೆ ಮುಂದೆ ಹೋಗಬಾರದಿತ್ತು. ಇಂತಹ ವಿಚಾರಗಳಿಗೆ ನಾವು ಹೆಚ್ಚು ಜವಾಬ್ದಾರರಾಗಿರಬೇಕು. ಭವಿಷ್ಯದಲ್ಲಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಇಂತಹ ಆಚರಣೆಗಳು ಮೈದಾನದ ಹೊರಗೆ ಅಥವಾ ಮೈದಾನದ ಒಳಗೆ ನಡೆಯುತ್ತಿರಬಹುದು. ಈ ಘಟನೆ ತುಂಬಾ ದುರಾದೃಷ್ಟಕರ, ಇದಕ್ಕೆ ನಾವೆಲ್ಲರೂ ಜವಾಬ್ದಾರರು. ಇಂತಹ ದುರಂತಗಳು ಭವಿಷ್ಯದಲ್ಲಿ ಎಂದಿಗೂ ಸಂಭವಿಸದಿರಲಿ ಎಂದು ಬಯಸುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದರು.
ಇದನ್ನೂ ಓದಿ: ದೂರದೃಷ್ಟಿಯಿಲ್ಲದ ಅಭಿವೃದ್ಧಿ ವಿನಾಶಕ್ಕೆ ದಾರಿ.. ಮಾನವನ ದುರಾಸೆಯೇ ಭೂಮಿಗೆ ಹಾನಿ -ರವಿಶಂಕರ ಗುರೂಜಿ ಕಳವಳ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ