/newsfirstlive-kannada/media/post_attachments/wp-content/uploads/2024/06/Gambhir_Kohli_1.jpg)
ಟೀಮ್​ ಇಂಡಿಯಾದ ಕೋಚ್​​ ಆಗಲು ನನಗೆ ಇಷ್ಟ. ಭಾರತ ತಂಡಕ್ಕೆ ಟ್ರೈನಿಂಗ್​ ನೀಡುವುದಕ್ಕಿಂತ ಗೌರವ ಮತ್ತೊಂದಿಲ್ಲ. 140 ಕೋಟಿ ಭಾರತೀಯರನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡ ಗೌರವ ಏನಿರುತ್ತದೆ? ಎಂದು ಕೆಕೆಆರ್​ ತಂಡದ ಮೆಂಟರ್​ ಗೌತಮ್​ ಗಂಭೀರ್​​ ಹೇಳಿದ್ದಾರೆ.
ಭಾರತಕ್ಕೆ ವಿಶ್ವಕಪ್ ಗೆಲ್ಲಲು ಸಹಾಯ ಮಾಡಬೇಕಿರುವುದು ನಾನಲ್ಲ. 140 ಕೋಟಿ ಭಾರತೀಯರು ಟೀಮ್​ ಇಂಡಿಯಾಗೆ ಸಹಾಯ ಮಾಡಬೇಕು. ಎಲ್ಲರೂ ನಮಗಾಗಿ ಪ್ರಾರ್ಥಿಸಲು ಆರಂಭಿಸಿದರೆ ಆಗ ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಲಿದೆ ಎಂದರು.
ನಿರ್ಭೀತಿಯಿಂದ ಬ್ಯಾಟ್​ ಬೀಸಬೇಕು. ಕೊಹ್ಲಿ, ರೋಹಿತ್​ ಇಬ್ಬರು ತಂಡಕ್ಕೆ ಧೈರ್ಯ ತುಂಬಬೇಕು. ಧೈರ್ಯ ಮತ್ತು ಆತ್ಮವಿಶ್ವಾಸ ನಿರ್ಣಾಯಕ ಪಾತ್ರವಹಿಸಲಿದೆ. ಕೊಹ್ಲಿ ಈ ಸಲ ವಿಶ್ವಕಪ್​ ಗೆಲ್ಲಿಸಲಿದ್ದಾರೆ ಅನ್ನೋ ನಂಬಿಕೆ ನನಗಿದೆ. ಕೇವಲ ಕೊಹ್ಲಿ ಮೇಲೆ ಒತ್ತಡ ಹೇರದೆ ಇಡೀ ತಂಡ ತಮ್ಮ ಆಟವನ್ನು ತಾವು ಆಡಿದಾಗ ಗೆಲುವು ಸುಲಭ ಎಂದರು.
ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್​.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us