ರೋಹಿತ್ ಜೊತೆ ಬಿರುಕು, ಡ್ರೆಸ್ಸಿಂಗ್ ರೂಮ್​ನಲ್ಲಿ ಗಲಾಟೆ -ಸುದ್ದಿಗೋಷ್ಟಿ ನಡೆಸಿ ಗಂಭೀರ್ ಹೇಳಿದ್ದೇನು?

author-image
Ganesh
Updated On
ರೋಹಿತ್ ಜೊತೆ ಬಿರುಕು, ಡ್ರೆಸ್ಸಿಂಗ್ ರೂಮ್​ನಲ್ಲಿ ಗಲಾಟೆ -ಸುದ್ದಿಗೋಷ್ಟಿ ನಡೆಸಿ ಗಂಭೀರ್ ಹೇಳಿದ್ದೇನು?
Advertisment
  • ಪ್ರೆಸ್​ಮೀಟ್​ನಲ್ಲಿ ಗಂಭೀರ್ ಹೇಳಿದ 5 ವಿಷಯಗಳು
  • ರೋಹಿತ್ ಕುರಿತ ಪ್ರಶ್ನೆಗೆ ಖಾರವಾಗಿ ಕೋಚ್ ಪ್ರತಿಕ್ರಿಯೆ
  • ಟೆಸ್ಟ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ತಳಮಳ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಸೋಲು ಟೀಂ ಇಂಡಿಯಾದಲ್ಲಿ ತಳಮಳ ಸೃಷ್ಟಿಸಿದೆ. ಬೆನ್ನಲ್ಲೇ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಚರ್ಚೆಯ ವಿಷಯ ಟ್ರೆಂಡ್​ ಆಗ್ತಿದೆ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಮನಸ್ಥಾಪ ಇದೆ ಎಂದು ಹೇಳಲಾಗಿದೆ.

ಈ ನಡುವೆ ಸಿಡ್ನಿಯಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗಂಭೀರ್ ಸುದ್ದಿಗೋಷ್ಠಿ ನಡೆಸಿದರು. ಪತ್ರಕರ್ತರ ತೀಕ್ಷ್ಣ ಪ್ರಶ್ನೆಗಳಿಗೆ ಗಂಭೀರ್ ಧೈರ್ಯದಿಂದ ಉತ್ತರಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ಚರ್ಚೆಯನ್ನು ಯಾರೂ ಸಾರ್ವಜನಿಕಗೊಳಿಸಬಾರದು. ಕೋಚ್ ಮತ್ತು ಆಟಗಾರನ ನಡುವಿನ ಚರ್ಚೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರ ಉಳಿಯಬೇಕು. ಕೇಳಿಬರುತ್ತಿರುವ ಮಾತುಗಳು ಸತ್ಯವಲ್ಲ. ಅವು ವರದಿ ಅಷ್ಟೇ. ಟೀಂ ಇಂಡಿಯಾ ಸುರಕ್ಷಿತವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:ಬಿಸಿಸಿಐನಿಂದ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದ ರಿಷಬ್​ ಪಂತ್​​ ಔಟ್​​; ಕಾರಣವೇನು?

publive-image

ಟೆಸ್ಟ್ ಗೆಲ್ಲುವ ತಂತ್ರ ಹೊರತುಪಡಿಸಿ ಹಿರಿಯ ಬ್ಯಾಟ್ಸ್‌ಮನ್ ಕೊಹ್ಲಿ ಮತ್ತು ನಾಯಕ ರೋಹಿತ್ ಜೊತೆ ಬೇರೆ ಯಾವುದರ ಬಗ್ಗೆಯೂ  ಮಾತನಾಡಿಲ್ಲ. ಎಲ್ಲೆಲ್ಲಿ ಸುಧಾರಿಸಿಕೊಳ್ಳಬೇಕು ಎಂಬುವುದು ಪ್ರತಿಯೊಬ್ಬ ಆಟಗಾರನಿಗೆ ಗೊತ್ತಿದೆ. ಸಿಡ್ನಿ ಟೆಸ್ಟ್ ಪಂದ್ಯವನ್ನು ಹೇಗೆ ಗೆಲ್ಲಬೇಕು ಅನ್ನೋದನ್ನು ಮಾತ್ರ ಅವರಿಗೆ ಹೇಳಿದ್ದೇವೆ ಎಂದಿದ್ದಾರೆ.

ವೇಗದ ಬೌಲರ್ ಆಕಾಶದೀಪ್ ಕೊನೆಯ ಟೆಸ್ಟ್ ಆಡಲ್ಲ ಎಂದು ಗಂಭೀರ್ ಹೇಳಿದ್ದಾರೆ. ಅವರ ಬದಲಿಗೆ ಬೇರೆ ಯಾರನ್ನು ಆಯ್ಕೆ ಮಾಡ್ತೀವಿ ಅನ್ನೋದನ್ನು ತಿಳಿಸಿಲ್ಲ. ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ‘ನಾಳೆ ಪಿಚ್ ಪರೀಕ್ಷೆ ನಡೆಸುತ್ತೇವೆ, ಆನಂತರವೇ ಆಡುವ ಹನ್ನೊಂದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳ ಕುರಿತ ಪ್ರಶ್ನೆಗೆ ಉತ್ತರಿಸಿ ‘ಇವು ಕೇವಲ ವದಂತಿಗಳು. ಅವುಗಳಲ್ಲಿ ಯಾವುದೇ ಸತ್ಯವಿಲ್ಲ. ವದಂತಿಗಳಿಗೆ ಪ್ರತಿಕ್ರಿಯಿಸಲ್ಲ. ನಾವು ಒಟ್ಟಾಗಿ ಗುರಿ ಮುಟ್ಟುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ ಮನೆಗೆ ಬಂದ ಧನು ಮುದ್ದಿನ ಕೂಸು; ಅಪ್ಪನಿ​ಗೆ ಮಗಳಿಂದ ಎನರ್ಜಿ ಬೂಸ್ಟ್..! Video

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment