/newsfirstlive-kannada/media/post_attachments/wp-content/uploads/2024/07/Kohli_Rohit_Gambhir.jpg)
ಇತ್ತೀಚೆಗೆ ಬಾರ್ಬಡೋಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.
ಇನ್ನು, ವಿಶ್ವಕಪ್ ಗೆದ್ದ ಕೂಡಲೇ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟರ್ಸ್ ಆದ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಈ ವಿಚಾರ ತಿಳಿದ ಕೂಡಲೇ ಟೀಮ್ ಇಂಡಿಯಾ ಅಭಿಮಾನಿಗಳು ಭಾವುಕರಾದ್ರು. ವಿಶ್ವಕಪ್ ಗೆಲ್ಲಿಸಿಕೊಟ್ಟ ಇಬ್ಬರು ವಿದಾಯ ಹೇಳಿದ್ದು ಸರಿಯಾಗಿದೆ ಅನ್ನೋ ಚರ್ಚೆ ಶುರುವಾಗಿದೆ.
ಇಬ್ಬರ ನಿವೃತ್ತಿಗೆ ಗಂಭೀರ್ ಕಾರಣ..!
ಸದ್ಯದ ಮೂಲಗಳ ಪ್ರಕಾರ ರೋಹಿತ್ ಮತ್ತು ವಿರಾಟ್ ನಿವೃತ್ತಿಗೆ ಗಂಭೀರ್ ಕಾರಣ ಎನ್ನುತ್ತಿದ್ದಾರೆ. ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಗಂಭೀರ್ ಬಂದ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದೆ. ಯುವ ಆಟಗಾರರಿಗೆ ಅವಕಾಶ ಸಿಗಲಿ ಎಂದು ಕೊಹ್ಲಿ ಮತ್ತು ರೋಹಿತ್ ಅವರನ್ನು ತಂಡದಿಂದ ಕೈ ಬಿಡಬಹುದು. ಹಾಗಾಗಿ ಗೆಲುವಿನ ಖುಷಿಯಲ್ಲೇ ಕೊಹ್ಲಿ, ರೋಹಿತ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ‘ಶಿವನ ಫೋಟೋ ತೋರಿಸಿ ಹಿಂದೂಗಳಿಗೆ ಅವಮಾನ ಮಾಡಿದ ರಾಹುಲ್ ಗಾಂಧಿ’- ಬಿಜೆಪಿಯಿಂದ ಟ್ರೋಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ