Advertisment

ಕೊಹ್ಲಿ ಮಾತಿಗೆ ಟೀಮ್​ ಇಂಡಿಯಾದಲ್ಲಿ ಬೆಲೆ ಇಲ್ವಾ​​.. ರೋಹಿತ್, ಗಂಭೀರ್ ಮಾಡಿದ್ದು ಸರಿನಾ?

author-image
Bheemappa
Updated On
ಕೊಹ್ಲಿ ಬಗ್ಗೆ ಖ್ಯಾತ ಜ್ಯೋತಿಷಿಯಿಂದ ಸೂಪರ್ ಭವಿಷ್ಯ; RCB ಅಭಿಮಾನಿಗಳಿಗೂ ಖುಷಿ ಸುದ್ದಿ..!
Advertisment
  • ಗವಾಸ್ಕರ್ ಟ್ರೋಫಿ​ ಗೆಲುವಿಗೆ ಭಾರತ ಏನು ಮಾಡಬೇಕು?
  • ಇಡೀ ಸರಣಿ ಗೆಲ್ಲುವಂತ ಐಡಿಯಾ ಕೊಟ್ಟಿದ್ದ ವಿರಾಟ್ ಕೊಹ್ಲಿ
  • ಈ ಪಿಚ್​ನಲ್ಲಿ ಅಭ್ಯಾಸ ನಡೆಸಲು ಆಸಿಸ್ ತಂಡದ ಪ್ಲಾನ್

ಟೀಮ್​ ಇಂಡಿಯಾದಲ್ಲಿ ವಿರಾಟ್​ ಕೊಹ್ಲಿ ಮಾತಿಗೆ ಬೆಲೆ ಇಲ್ವಾ. ಈ ಪ್ರಶ್ನೆ ಯಾಕೆ ಅಂತೀರಾ.. ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಕೊಹ್ಲಿ ನೀಡಿದ ಅಮೂಲ್ಯ ಸಲಹೆಯನ್ನ ರಿಜೆಕ್ಟ್​ ಮಾಡಿದ್ದಾರೆ. ಬಿಸಿಸಿಐ ಬಾಸ್​ಗಳೇ ಮಾಜಿ ನಾಯಕನ ಟಿಪ್ಸ್​​ಗೆ ಅಸ್ತು ಎಂದಿದ್ದರು. ಆದ್ರೆ, ಹಾಲಿ ಕ್ಯಾಪ್ಟನ್​, ಕೋಚ್​ ಆ ಸಲಹೆಯನ್ನ ರಿಜೆಕ್ಟ್​ ಮಾಡಿ, ತಮ್ಮದೇ ಸ್ಪೆಷಲ್​ ಪ್ಲಾನ್​ ಜಾರಿಗೆ ತರಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿ ನೀಡಿದ ಸಲಹೆ ಏನು.? ರಿಜೆಕ್ಟ್​ ಆಗಿದ್ಯಾಕೆ?.

Advertisment

ಇಂಡೋ-ಕಿವೀಸ್​ ಟೆಸ್ಟ್​ ಸರಣಿ ವೈಟ್​ವಾಶ್​​​ನ ಬಳಿಕ ಮುಂಬರುವ ಆಸ್ಟ್ರೇಲಿಯಾ ಪ್ರವಾಸ ಹಾಟ್​ ಟಾಪಿಕ್​​ ಆಗಿ ಮಾರ್ಪಟ್ಟಿದೆ. ಕಳೆದ 2 ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿ ಗೆದ್ದು ಬೀಗಿರುವ ಟೀಮ್​ ಇಂಡಿಯಾ ಇದೀಗ ಹ್ಯಾಟ್ರಿಕ್​ ಗೆಲುವಿನ ಮೇಲೆ ಕಣ್ಣಿಟ್ಟಿದೆ. ನ್ಯೂಜಿಲೆಂಡ್​ ವಿರುದ್ಧ ವೈಟ್​ವಾಷ್​ ಮುಖಭಂಗ ಅನುಭವಿಸಿರೋದ್ರಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಎಂಟ್ರಿ ಕೊಡಬೇಕಂದ್ರೆ ಸರಣಿ ಗೆಲುವು ಅನಿವಾರ್ಯ ಆಗಿದೆ. ಈ ಪ್ರತಿಷ್ಠೆಯ ಸರಣಿಗೆ ಸಿದ್ಧತೆಗಳು ಆರಂಭವಾಗಿದೆ.

ಇದನ್ನೂ ಓದಿ: KL ರಾಹುಲ್​, ಧೃವ್ ಜುರೆಲ್​ಗೆ ಬಿಸಿಸಿಐ ಸೂಚಿಸಿದ್ದೇನು.. ಆಸಿಸ್​ ಸರಣಿ ಗೆಲ್ಲಲು ಸೀಕ್ರೆಟ್ ಪ್ಲಾನ್ ಇದೆಯಾ?​

publive-image

ಆಸಿಸ್​​ ಪ್ರವಾಸಕ್ಕೂ ಮುನ್ನ ಕೋಚ್​-ಕ್ಯಾಪ್ಟನ್​​ ಬಿಗ್​ ಡಿಶಿಷನ್​.!

ಮುಂಬರೋ ಪ್ರತಿಷ್ಟಿತ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ವಲಯದಲ್ಲಿ ಸಿದ್ಧತೆಗಳು ಜೋರಾಗಿವೆ. ಈಗಾಗಲೇ ಬಾರ್ಡರ್​ -ಗವಾಸ್ಕರ್​ ಟೂರ್ನಿಗೆ ತಂಡವನ್ನೂ ಪ್ರಕಟಿಸಲಾಗಿದೆ. ನವೆಂಬರ್​ 22ರಿಂದ 5 ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಲಿದ್ದು, ಅದಕ್ಕೂ ಮುನ್ನ ಇಂಡಿಯಾ ಎ ಜೊತೆಗೆ ಒಂದು ಅಭ್ಯಾಸ ಪಂದ್ಯ​ ಆಡೋದು ಇಷ್ಟು ದಿನ ಇದ್ದ ಪ್ಲಾನ್​ ಆಗಿತ್ತು. ಆದ್ರೆ, ಇದಕ್ಕಿದ್ದಂತೆ ಕೋಚ್​ ಗೌತಮ್​​ ಗಂಭೀರ್​, ಕ್ಯಾಪ್ಟನ್​ ರೋಹಿತ್​ ಶರ್ಮಾ ಆ ಪ್ಲಾನ್​ ರಿಜೆಕ್ಟ್​ ಮಾಡಿದ್ದಾರೆ.

Advertisment

ಕೊಹ್ಲಿ ಸಲಹೆಯನ್ನ ತಿರಸ್ಕರಿಸಿದ ಗಂಭೀರ್​ - ರೋಹಿತ್​.!

ಮೊದಲಿದ್ದ ಪ್ಲಾನ್​ನಂತೆ ನವೆಂಬರ್​ 15ರಿಂದ ಟೀಮ್​ ಇಂಡಿಯಾ ಪರ್ತ್​ ಸ್ಟೇಡಿಯಂನಲ್ಲಿ ಇಂಡಿಯಾ ಎ ವಿರುದ್ಧ ಪ್ರಾಕ್ಟಿಸ್​​ ಗೇಮ್​ ಆಡಿ ಸರಣಿಗೆ ಸಿದ್ಧತೆ ನಡೆಸಲು ತೀರ್ಮಾನಿಸಿತ್ತು. ಅಸಲಿಗೆ ಈ ಐಡಿಯಾ ಟೀಮ್​ ಮ್ಯಾನೇಜ್​ಮೆಂಟ್​ ಹಾಗೂ ಬಿಸಿಸಿಐಗೆ ನೀಡಿದ್ದು, ವಿರಾಟ್​ ಕೊಹ್ಲಿ. ಕಳೆದ 2 ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾವು ಕಾಂಗರೂ ನಾಡಿಗೆ ಕಾಲಿಟ್ಟ ಬೆನ್ನಲ್ಲೇ ಪ್ರಾಕ್ಟಿಸ್​​ ಗೇಮ್​ ಆಡಿದ್ವಿ. ಇದು ಸರಣಿ ಗೆಲುವಿಗೆ ಸಹಾಯ ಮಾಡಿತ್ತು. ಈ ಬಾರಿಯೂ ಅದೇ ಪ್ಲಾನ್​ ಮುಂದುವರೆಸುವಂತೆ ಕೊಹ್ಲಿ ಸಲಹೆ ನೀಡಿದ್ರಂತೆ. ಇದಕ್ಕೆ ಅಸ್ತು ಎಂದಿದ್ದ ಬಿಸಿಸಿಐ ಎಲ್ಲಾ ಸಿದ್ಧತೆ ಮಾಡಿತ್ತು. ಆದ್ರೆ, ಇದೀಗ ಗಂಭೀರ್​ ಹಾಗೂ ರೋಹಿತ್​ ಆ ಪ್ಲಾನ್​ನ ರಿಜೆಕ್ಟ್​ ಮಾಡಿ, ಪ್ರಾಕ್ಟಿಸ್​​​ ಗೇಮ್​ನ ಕ್ಯಾನ್ಸಲ್​ ಮಾಡಿದ್ದಾರೆ.

ಕೊಹ್ಲಿ ಸಲಹೆ ರಿಜೆಕ್ಟ್​... ಕೋಚ್​-ಕ್ಯಾಪ್ಟನ್​ ಹೊಸ ಪ್ಲಾನ್​.!

ವಿರಾಟ್​ ಕೊಹ್ಲಿ ನೀಡಿದ ಸಲಹೆಯನ್ನ ರಿಜೆಕ್ಟ್​ ಮಾಡಿರುವ ಗೌತಮ್​ ಗಂಭೀರ್​ ಹಾಗೂ ರೋಹಿತ್​ ಶರ್ಮಾ ಹೊಸ ಪ್ಲಾನ್​ ರೂಪಿಸಿದ್ದಾರೆ. ಪರ್ತ್​​ ಸ್ಟೇಡಿಯಂನಲ್ಲೇ ಅಭ್ಯಾಸ ಪಂದ್ಯದ ಬದಲು ಸೆಂಟರ್​ ಪಿಚ್​ನಲ್ಲಿ ಪ್ರಾಕ್ಟಿಸ್​ ನಡೆಸಲು ತೀರ್ಮಾನಿಸಿದ್ದಾರೆ. ಪ್ರಾಕ್ಟಿಸ್​ ಗೇಮ್​ ಆಡಿದ್ರೆ, ಎಲ್ಲಾ ಆಟಗಾರರಿಗೂ ಹೆಚ್ಚಿನ ಅವಕಾಶ ಸಿಗಲ್ಲ. ನೆಟ್​ ಸೆಷನ್​ನಲ್ಲಾದ್ರೆ, ಬ್ಯಾಟಿಂಗ್​ ಅಥವಾ ಬೌಲಿಂಗ್​ಗೆ ಹೆಚ್ಚು ಅವಕಾಶ ಸಿಗಲಿದೆ. ಅದ್ರಲ್ಲೂ, ಸೆಂಟರ್​ ಪಿಚ್​ನಲ್ಲಿ ಅಭ್ಯಾಸ ನಡೆಸಿದ್ರೆ, ಸಿದ್ಧತೆಗೆ ಹೆಚ್ಚು ಅನುಕೂಲವಾಗುತ್ತೆ ಅನ್ನೋದು ಕೋಚ್​-ಕ್ಯಾಪ್ಟನ್​ ಲೆಕ್ಕಾಚಾರವಾಗಿದೆ.

publive-image

ಎದುರಾಳಿ ಆಸ್ಟ್ರೇಲಿಯಾದ್ದೂ ಇದೇ ರಣತಂತ್ರ.!

ಎದುರಾಳಿ ಆಸ್ಟ್ರೇಲಿಯಾ ತಂಡ ಕೂಡ ಪರ್ತ್​ ಸ್ಟೇಡಿಯಂನಲ್ಲೇ ಸ್ಪೆಷಲ್​ ಪ್ರಾಕ್ಟಿಸ್​​ಗೆ ಪ್ಲಾನ್​ ಮಾಡಿದೆ. ಅದೂ ಸೆಂಟರ್​ ಪಿಚ್​ನಲ್ಲೇ. ಆಸಿಸ್​ ಬ್ಯಾಟ್ಸ್​ಮನ್​ ಸ್ಟೀವ್​ ಸ್ಮಿತ್​​ ಈ ಪ್ರಾಕ್ಟಿಸ್​ ಪ್ಲಾನ್​ನ ರಿವೀಲ್​ ಮಾಡಿದ್ದಾರೆ. ನವೆಂಬರ್​ 22ರಿಂದ ಇದೇ ಮೈದಾನದಲ್ಲಿ ಸರಣಿಯ ಮೊದಲ ಟೆಸ್ಟ್​ ಆರಂಭ ಆಗೋದ್ರಿಂದ ಸೆಂಟರ್​ ಪಿಚ್​ನಲ್ಲಿ ಅಭ್ಯಾಸ ನಡೆಸಿದ್ರೆ ಅನುಕೂಲವಾಗಲಿದೆ ಅನ್ನೋದು ಆಸ್ಟ್ರೇಲಿಯಾ ತಂಡದ ಪ್ಲಾನ್​ ಅಂತೆ.!

Advertisment

ಅಭ್ಯಾಸ ನಡೆಸಲಿ, ಬಿಡಲಿ ಆಸ್ಟ್ರೇಲಿಯಾಗೆ ಹೋಮ್​ ಅಡ್ವಾಂಟೇಜ್ ಇದೆ. ಆದ್ರೆ, ಟೀಮ್​ ಇಂಡಿಯಾ ಪಾಲಿಗೆ ಇದು ಕಂಪ್ಲೀಟಲಿ ಡಿಫರೆಂಟ್​ ಕಂಡಿಷನ್​ ಆಗಲಿದೆ. ಹೀಗಾಗಿ ನೆಟ್​ ಸೆಷನ್​ಗಿಂತ, ಅಭ್ಯಾಸ ಪಂದ್ಯ ಆಡೋದು ಸಿದ್ಧತೆಯ ದೃಷ್ಟಿಯಿಂದ ಬೆಸ್ಟ್​ ಆಪ್ಷನ್​ ಆಗಿತ್ತು. ಯಾಕಂದ್ರೆ, ಈ ಹಿಂದೆ 2 ಬಾರಿ ಹೀಗೆ ಅಭ್ಯಾಸ ಪಂದ್ಯ ಆಡಿದಾಗ ಸರಣಿ ಗೆದ್ದ ರಿಸಲ್ಟ್​​ ಎದುರಿಗೆ ಇದೆ. ಹಾಗಿದ್ರೂ, ಕೊಹ್ಲಿ ನೀಡಿದ ಪ್ಲಾನ್​ನ ರೋಹಿತ್​, ಗಂಭೀರ್​ ರಿಜೆಕ್ಟ್​ ಮಾಡಿ, ಹೊಸ ಪ್ಲಾನ್​ ರೂಪಿಸಿದ್ದಾರೆ. ಕ್ಯಾಪ್ಟನ್​​-ಕೋಚ್​ರ ಹೊಸ ಪ್ಲಾನ್​ ಕಾಂಗರೂ ನಾಡಲ್ಲಿ ವರ್ಕೌಟ್​ ಆಗುತ್ತಾ.? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment