/newsfirstlive-kannada/media/post_attachments/wp-content/uploads/2024/03/Gambhir_Kohli1.jpg)
ಇಂದು ಎಂ.ಎ ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲಲು ಎರಡು ತಂಡಗಳು ಎದುರು ನೋಡುತ್ತಿವೆ. ಇತ್ತೀಚೆಗಷ್ಟೇ ಗೌತಮ್​ ಗಂಭೀರ್​​​ ಲಕ್ನೋ ಸೂಪರ್​ ಜೈಂಟ್ಸ್​​ ತೊರೆದಿದ್ದು, ಮತ್ತೆ ಕೆಕೆಆರ್​ಗೆ ವಾಪಸ್ಸಾಗಿದ್ದಾರೆ. ಇದೇ ಸಂದರ್ಭದಲ್ಲಿ ಗಂಭೀರ್​​ ಮಾತಾಡಿರೋ ವಿಡಿಯೋ ಒಂದು ವೈರಲ್​ ಆಗಿದೆ.
ನನಗೆ ಆರ್​​ಸಿಬಿಯನ್ನ ಕಂಡ್ರೆ ಆಗಲ್ಲ. ನಾನು ಇಂದಿಗೂ ಎಂದೆಂದಿಗೂ ಆರ್​​ಸಿಬಿಯನ್ನು ಸೋಲಿಸೋಕೆ ಇಷ್ಟಪಡ್ತೀನಿ. ಒಂದೇ ಒಂದು ಟ್ರೋಫಿ ಗೆದ್ದಿಲ್ಲ ಅಂದ್ರೂ ಅವರಿಗೆ ಆ್ಯಟಿಟ್ಯೂಡ್​​ ಜಾಸ್ತಿ. ಕ್ರಿಸ್​ ಗೇಲ್​​, ಕೊಹ್ಲಿ, ಎಬಿ ಡಿವಿಲಿಯರ್ಸ್​ ಇದಾರೆ ಎಂದು ಕೊಬ್ಬು ಎಂದಿರೋ ವಿಡಿಯೋ ಇದಾಗಿದೆ.
Gautam Gambhir talking about facing RCB. pic.twitter.com/JO0QAbz8TI
— Mufaddal Vohra (@mufaddal_vohra)
Gautam Gambhir talking about facing RCB. pic.twitter.com/JO0QAbz8TI
— Mufaddal Vohra (@mufaddal_vohra) March 29, 2024
">March 29, 2024
ಕೊಹ್ಲಿ, ಗಂಭೀರ್​ ಮಧ್ಯೆ ಜಗಳ?
ಆರ್‌ಸಿಬಿ ಮಾಜಿ ಕ್ಯಾಪ್ಟನ್​​ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಣ ಜಗಳ ಹೊಸದಲ್ಲ. ಐಪಿಎಲ್ 2013 ಟೂರ್ನಿಯಲ್ಲಿ ಗಂಭೀರ್ ಕೆಕೆಆರ್ ಕ್ಯಾಪ್ಟನ್ ಆಗಿದ್ದರು. ಅಂದು ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪತನವಾದಾಗ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಬಳಿಕ ಕೊಹ್ಲಿ, ಗಂಭೀರ್​ ಮಧ್ಯೆ ಜಗಳ ನಡೆದಿತ್ತು. ಅಂದಿನಿಂದ ಇಂದಿನವರೆಗೂ ಗಂಭೀರ್ ಮತ್ತು ಕೊಹ್ಲಿ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಇದು ಐಪಿಎಲ್ 2023 ಟೂರ್ನಿಯಲ್ಲೂ ನಡೆದಿತ್ತು. ಕೊಹ್ಲಿ ಕಾಲ್ಕೆರೆದು ಜಗಳ ಮಾಡಲು ಗೌತಮ್ ಗಂಭೀರ್ ಕಾಯುತ್ತಲೇ ಇರುತ್ತಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಫೋಟೋ ಬಿಡುಗಡೆ; ₹10 ಲಕ್ಷ ನಗದು ಬಹುಮಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us