/newsfirstlive-kannada/media/post_attachments/wp-content/uploads/2024/11/Goutam-Gambir.jpg)
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನ ಸೋತು ತವರಿನಲ್ಲಿ ಮುಖಭಂಗ ಅನುಭವಿಸಿರೋ ಟೀಮ್ ಇಂಡಿಯಾ ಮುಂದಿನ ಆಸಿಸ್​​ ಸರಣಿಯತ್ತ ದೃಷ್ಟಿ ನೆಟ್ಟಿದೆ. ಆದ್ರೆ, ಬಿಸಿಸಿಐ ಒಂದು ಹೆಜ್ಜೆ ಮುಂದೆ ಹೋಗಿದೆ. ಆಸಿಸ್​​ ಸರಣಿ ಬಳಿಕ ಮೇಜರ್​ ಸರ್ಜರಿಗೆ ಮುಂದಾಗಲೂ ಬಾಸ್​ಗಳ ವಲಯದಲ್ಲಿ ಚರ್ಚೆ ನಡೆದಿದೆ. ಟೀಮ್ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡ್ತಿದೆ. ವೆರಿ ವೆರಿ ಸ್ಪೆಷಲ್​ ಲಕ್ಷ್ಮಣ್​​ಗೆ ಸ್ಪೆಷಲ್​ ರೋಲ್​ ಕೊಡಲು ಚರ್ಚೆ ನಡೀತಿದೆ.
ಹೆಡ್​ ಕೋಚ್ ಗಂಭೀರ್ ಗರಡಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡುತ್ತಿದೆ. 6 ತಿಂಗಳ ಅವಧಿಯಲ್ಲೇ ಎರಡು ಸರಣಿಗಳಲ್ಲಿ ಹೀನಾಯ ಸೋಲು ಕಂಡಿದೆ. ಸಿಂಹಳೀಯರ ನಾಡಿನಲ್ಲಿ 27 ವರ್ಷಗಳ ಬಳಿಕ ಏಕದಿನ ಸರಣಿ ಸೋತ ಟೀಮ್ ಇಂಡಿಯಾ, ತವರಿನಲ್ಲಿ ಮೊಟ್ಟ ಮೊದಲ ಬಾರಿಗೆ ಟೆಸ್ಟ್​ನಲ್ಲಿ ವೈಟ್​ವಾಶ್ ಮುಖಭಂಗ ಅನುಭವಿಸಿದೆ. ಇದೇ ಸೋಲುಗಳು ಗೌತಮ್ ಗಂಭೀರ್, ಕಾರ್ಯ ವೈಖರಿಯನ್ನ ಪ್ರಶ್ನಿಸುವಂತೆ ಮಾಡಿದೆ. ಗೌತಮ್ ಗಂಭೀರ್ ಕೋಚ್ ಪಟ್ಟದ ಮೇಲೆ ತೂಗುಗತ್ತಿ ನೇತಾಡುವಂತೆ ಮಾಡಿದೆ.
/newsfirstlive-kannada/media/post_attachments/wp-content/uploads/2024/11/Kohli_Rohit_Test.jpg)
ಆಸಿಸ್​ನಲ್ಲಿ ಮುಗ್ಗರಿಸಿದರೆ ಟೆಸ್ಟ್​ಗೆ ಹೊಸ ಕೋಚ್..​?
ನ್ಯೂಜಿಲೆಂಡ್ ಎದುರು ಮುಗ್ಗರಿಸಿರುವ ಟೀಮ್ ಇಂಡಿಯಾಗೆ, ಆಸ್ಟ್ರೇಲಿಯಾ ಪ್ರವಾಸ ಪ್ರತಿಷ್ಠೆಯಾಗಿದೆ. ಒಂದು ವೇಳೆ ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತರೆ, ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಗೌತಮ್ ಗಂಭೀರ್​ ಕಿಕ್​ ಔಟ್ ಗ್ಯಾರಂಟಿ. ಟೆಸ್ಟ್​ ತಂಡಕ್ಕೆ ಪ್ರತ್ಯೇಕ ಕೋಚ್ ನೇಮಿಸುವ ಲೆಕ್ಕಾಚಾರ ಬಿಸಿಸಿಐ ವಲಯದಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸ ಕೋಚ್ ಗಂಭೀರ್ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ.
ವಿವಿಎಸ್ ಲಕ್ಷ್ಮಣ್​ಗೆ ಟೆಸ್ಟ್​ ತಂಡದ ಹೆಡ್ ಕೋಚ್ ಪಟ್ಟ..!
ಬಿಸಿಸಿಐನ ಕೆಲ ಟಾಪ್​ ಅಫಿಶಿಯಲ್ಸ್​ಗೆ ಕೋಚ್​ ಗಂಭೀರ್​ ಕೋಚಿಂಗ್​ ಸ್ಟೈಲ್​ ಬಗ್ಗೆ​ ಅಸಮಾಧಾನ ಇದೆ ಅನ್ನೋ ಸುದ್ದಿ ಹೊರಬಿದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್​ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ, ಗಂಭೀರ್​​ ತಲೆದಂಡ ಮಾಡಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿದೆ. ಗಂಭೀರ್​ ಕೆಳಗಿಳಿಸಿ ಹಾಲಿ ಎನ್​ಸಿಎ ಹೆಡ್​ ವಿವಿಎಸ್​ ಲಕ್ಷ್ಮಣ್​ಗೆ ಟೆಸ್ಟ್​ ತಂಡದ ಕೋಚ್​ ಪಟ್ಟ ಕಟ್ಟೋ ಪ್ರಸ್ತಾವವನ್ನ ಬಿಸಿಸಿಐನ ಕೆಲ ಅಧಿಕಾರಿಗಳು ಬಾಸ್​ಗಳ ಮುಂದಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/07/GAMBIR.jpg)
ಅಗ್ರೆಸ್ಸೀವ್​ ಅಪ್ರೋಚ್​ ಗೌತಮ್ ಗಂಭೀರ್​ಗೆ ಮುಳುವು..!
ಕೋಚ್​​ ಹುದ್ದೆಗೆ ಬಂದ ಆರಂಭದಲ್ಲೇ ಗೌತಮ್ ಗಂಭೀರ್​ ಪ್ರಯೋಗಿಸಿದ ಮೊದಲ ಅಸ್ತ್ರವೇ ಅಗ್ರೆಸ್ಸಿವ್​ ಅಪ್ರೋಚ್​. ಇದೇ ಫಾರ್ಮುಲಾ ಶ್ರೀಲಂಕಾ, ನ್ಯೂಜಿಲೆಂಡ್ ಎದುರಿನ ಹೀನಾಯ ಸೋಲಿಗೆ ಕಾರಣವಾಗಿದೆ. ಸಿಚ್ಯುವೇಶನ್​ ಹಾಗೂ ಕಂಡಿಷನ್ಸ್​ನ ಅರ್ಥ ಮಾಡಿಕೊಳ್ಳದ ಗಂಭೀರ್, ತಾಳ್ಮೆಯ ಪಾಠವನ್ನ ಮಾಡದೇ ಅಗ್ರೆಸಿಸ್ ಆಟಕ್ಕೆ ಒತ್ತು ನೀಡಿದ್ದರು. ಇದು ಬ್ಯಾಕ್​ ಫೈರ್​ ಆಗಿದೆ. ಗುರು ಗಂಭೀರ್​ಗೆ ತಮ್ಮದೇ​ ಮಂತ್ರ ತಿರುಮಂತ್ರವಾಗಿದ್ದು, ಬಿಸಿಸಿಐ ವಲಯದಲ್ಲಿ ಅಸಮಾಧಾನ ಶುರುವಾಗಿದೆ.
/newsfirstlive-kannada/media/post_attachments/wp-content/uploads/2024/11/VVS-Laskshman.jpg)
ಟೆಸ್ಟ್​ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಬೆಸ್ಟ್​ ಚಾಯ್ಸ್​
ಫಿಯರ್​ಲೆಸ್​ ಆ್ಯಟಿಟ್ಯೂಡ್​​, ಅಗ್ರೆಸ್ಸೀವ್​ ಅಪ್ರೊಚ್​ ಇರಬೇಕು ನಿಜ. ಹಾಗಂತ ಪಂದ್ಯದ ಸಿಚ್ಯುವೇಶನ್​ ಹಾಗೂ ಕಂಡಿಷನ್​​ ಬಗ್ಗೆ ಅರ್ಥ ಮಾಡಿಕೊಳ್ಳದಿದ್ರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಸಕ್ಸಸ್ ಸಿಗಲ್ಲ. ಗೌತಮ್ ಗಂಭೀರ್​ಗೆ ಹೋಲಿಸಿದ್ರೆ, ಟೆಸ್ಟ್​ ತಂಡದ ಹೆಡ್​ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಪರ್ಫೆಕ್ಟ್​ ಆಗಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಅಪಾರ ಅನುಭವ ಹೊಂದಿರೋ​ ವಿವಿಎಸ್​​ ಲಕ್ಷ್ಮಣ್​ಗೆ ಪ್ರತಿ ಕಂಡೀಷನ್ಸ್​​ ಬಗ್ಗೆ ಚೆನ್ನಾಗಿ ಅರಿವಿದೆ. ಟೆಸ್ಟ್​ ತಂಡದ ಬ್ಯಾಟಿಂಗ್, ಬೌಲಿಂಗ್​ ಎರಡರ​ ಬಗ್ಗೆ ಗಂಭೀರ್​ಗಿಂತ ಹೆಚ್ಚಿನ ಅರಿವಿದೆ. ಹೀಗಾಗಿ ಟೆಸ್ಟ್​ ತಂಡದ ಹೆಡ್ ಕೋಚ್ ಹುದ್ದೆಗೆ ವಿವಿಎಸ್​ ಲಕ್ಷ್ಮಣ್ ಅರ್ಹ ಕೋಚ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ:ಸೂರ್ಯಪಡೆಗೆ ಭಾರೀ ಮುಖಭಂಗ; ಟೀಂ ಇಂಡಿಯಾ ಸೋಲಿಗೆ ಕಾರಣ ಇಲ್ಲಿದೆ..!
ಒಂದು ವೇಳೆ ಪ್ರತ್ಯೇಕ ಕೋಚ್​ ನೇಮಿಸಿದ್ದೇ ಆದರೆ, ಗಂಭೀರ್​ ಮುಂದಿನ ನಡೆ ಏನು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಕಂಡಿಷನ್​ ಮೇಲೆ ಕಂಡಿಷನ್​ ಹಾಕಿ, ಕೋಚ್​ ಪಟ್ಟವೇರಿರೋ ಗಂಭೀರ್​, ವೈಟ್​ಬಾಲ್​ ಫಾರ್ಮೆಟ್​ಗೆ ಮಾತ್ರ ಸೀಮಿತವಾಗಲು ಒಪ್ತಾರಾ.? ಅಥವಾ ಪ್ರತಿಷ್ಟೆಯ ಜಿದ್ದಿಗೆ ಕೋಚ್ ಹುದ್ದೆಯನ್ನೇ ತೊರೆಯುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ, ಬಿಸಿಸಿಐ ವಲಯದಲ್ಲಿ ಪ್ರತ್ಯೇಕ ಕೋಚ್​​ ನೇಮಕದ ಚರ್ಚೆ ಜೋರಾಗಿ ನಡೆದಿದೆ. ಆದ್ರೆ, ಬಾಸ್​ಗಳು ಮಾತ್ರ ಈ ವಿಚಾರದಲ್ಲಿ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಆಸಿಸ್​ ಪ್ರವಾಸದಲ್ಲೂ ಟೀಮ್​ ಇಂಡಿಯಾ ಮುಖಭಂಗ ಅನುಭವಿಸಿದ್ರೆ, ಏಕದಿನ ಹಾಗೂ ಟಿ20 ಫಾರ್ಮೆಟ್​​ ಕೋಚ್ ಆಗಿ ಮಾತ್ರವೇ ಗಂಭೀರ್​​ನ ಮುಂದುವರಿಸುವ ಸಾದ್ಯತೆ ಸದ್ಯಕ್ಕಂತೂ ದಟ್ಟವಾಗಿದೆ. ಅಕಸ್ಮಾತ್ ಇದು ನಡೆದರೆ, ಟೀಮ್ ಇಂಡಿಯಾದಲ್ಲಿ ಮೊದಲ ಬಾರಿಗೆ ರೆಡ್​ ಬಾಲ್​ ಹಾಗೂ ವೈಟ್​ ಬಾಲ್​ ಫಾರ್ಮೆಟ್​ಗೆ ಪ್ರತ್ಯೇಕ ಕೋಚ್ ನೇಮಕವಾದಂತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us