/newsfirstlive-kannada/media/post_attachments/wp-content/uploads/2025/07/PANT-VS-GANBHIR.jpg)
ಗೌತಮ್ ಗಂಭೀರ್ ಅಂಡ್ ರಿಷಭ್ ಪಂತ್. ಇವರಿಬ್ಬರು ಡೆಲ್ಲಿ ಮೂಲದವರು. ಒಂದೇ ರಾಜ್ಯದವರು ಅಂದ್ರೆ ಹೇಳಬೇಕಾ? ಕುಚುಕು ಗೆಳೆಯರಾಗಿ ಬಿಡ್ತಾರೆ. ಆದ್ರೆ ಪಂತ್ ಹಾಗೂ ಗೌತಮ್ ಗಂಭೀರ್​ ವಿಚಾರದಲ್ಲಿ ಇದು ಆಕ್ಷರಶಃ ಸುಳ್ಳು!
ಪಂತ್ ವಿರೋಧಿ​ ಗಂಭೀರ್
ಹೆಡ್ ಕೋಚ್ ಗಂಭೀರ್, ರಿಷಭ್ ಪಂತ್ ವಿರೋಧಿನಾ ಎಂಬ ಪ್ರಶ್ನೆ ಇದೆ. ಲೀಡ್ಸ್​ ಟೆಸ್ಟ್ ಸೋಲಿನ ಬಳಿಕ ಪ್ರೆಸ್​ಮೀಟ್​ನಲ್ಲಿ ಹೆಡ್ ಕೋಚ್​ ಗೌತಮ್​ ಗಂಭೀರ್​ ಆಡಿದ್ದ ಮಾತಿನಿಂದ ಇದಕ್ಕೆ ರೆಕ್ಕೆ-ಪುಕ್ಕ ಬಂದಿದೆ. ಲೀಡ್ಸ್​ ಟೆಸ್ಟ್​ ಸೋಲಿನ ಬಳಿಕ ರಿಷಭ್ ಪಂತ್​ ಸೆಂಚುರಿ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಸಂಯಮವಾಗಿ ಉತ್ತರಿಸಬೇಕಿದ್ದ ಗಂಭೀರ್, ಪಂತ್ ಆಟಕ್ಕೆ ಕೊಂಡಾಡಬೇಕಿದ್ದ ಗಂಭೀರ್, ಕೆಂಡಾಮಂಡಲರಾದರು.
ಇತರೆ 3 ಶತಕಗಳು ಬಂದಿವೆ. ಅವು ಕೂಡ ಪಾಸಿಟಿವ್. ಧನ್ಯವಾದ. ಯಶಸ್ವಿ 100, ಶುಭ್ಮನ್ ಗಿಲ್ ಕ್ಯಾಪ್ಟನ್ಸಿ ಡೆಬ್ಯು 100, ಕೆ.ಎಲ್.ರಾಹುಲ್ 100 ಮತ್ತು ಪಂತ್ 2 ಶತಕ ಸೇರಿದಂತೆ 5 ಶತಕಗಳು ಬಂದಿವೆ. ನಿಜವಾಗಿಯೂ ಇದು ಗ್ರೇಟ್ ಸ್ಟಾರ್ಟ್. ಪ್ರಶ್ನೆ ಇನ್ನೂ ಚೆನ್ನಾಗಿರಬಹುದಿತ್ತು ಎಂದು ಭಾವಿಸುತ್ತೇನೆ-ಗೌತಮ್ ಗಂಭೀರ್, ಹೆಡ್ಕೋಚ್
ಪ್ರೆಸ್​ಮೀಟ್​ನಲ್ಲಿ ರಿಷಭ್ ಪಂತ್ ಪ್ರಶ್ನೆ ಮಾತ್ರವೇ ಅಲ್ಲ. ಲೀಡ್ಸ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರೀತಿಗೂ ಗಂಭೀರ್ ಖ್ಯಾತೆ ತೆಗೆದಿದ್ದರು. ಇದೇ ಕಾರಣಕ್ಕೆ ರಿಷಭ್ ಪಂತ್, 2ನೇ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿದ ಹೊರತಾಗಿಯೂ, ಸುನಿಲ್ ಗವಾಸ್ಕರ್ ಮನವಿಯ ಹೊರತಾಗಿಯೂ ಸ್ಪೆಷಲ್ ಸೆಲಬ್ರೇಷನ್​ ಮಾಡದಿರಲು ಕಾರಣ.
ಪಂತ್​ ಟೆಸ್ಟ್ ಕ್ಯಾಪ್ಟನ್ಸಿ ತಪ್ಪಿಸಿದ್ದೆ ಗಂಭೀರ್
ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಯ ಬಳಿಕ ರಿಷಭ್ ಪಂತ್ ಹೆಸರು ನಾಯಕತ್ವದ ರೇಸ್​​ನಲ್ಲಿತ್ತು. ಜಸ್​​ಪ್ರಿತ್​ ಬೂಮ್ರಾ, ಕೆ.ಎಲ್.ರಾಹುಲ್ ಹೆಸರಿನ ಬಳಿಕ ಚಾಲ್ತಿಯಲ್ಲಿದ್ದ ಹೆಸರೇ ರಿಷಭ್ ಪಂತ್. ರಿಷಭ್​ ಪಂತ್​ ಬದಲಿಗೆ ಶುಭ್​ಮನ್ ಗಿಲ್​ಗೆ ನಾಯಕತ್ವ ನೀಡಲಾಯ್ತು. ಇದಕ್ಕೆ ಕಾರಣ ಹೆಡ್ ಕೋಚ್ ಗೌತಮ್ ಗಂಭೀರ್​. ಯುವ ನಾಯಕನ ಹುಡುಕಾಟದಲ್ಲಿದ್ದ ಸೆಲೆಕ್ಷನ್ ಕಮಿಟಿ, ರಿಷಭ್​​ಗೆ ನಾಯಕತ್ವ ನೀಡುವ ಬಗ್ಗೆ ಒಲವು ಹೊಂದಿತ್ತು. ಗೌತಮ್​​​​​ ಗಂಭೀರ್ ಅಪಸ್ವರ ಎತ್ತಿದ್ದರು. ಇದೇ ಕಾರಣಕ್ಕೆ ನಾಯಕನಾಗಬೇಕಿದ್ದ ಪಂತ್​​​ಗೆ, ಉಪ ನಾಯಕತ್ವ ಸಿಕ್ತು ಅನ್ನೋದು ಮೂಲಗಳ ಮಾಹಿತಿ.
ಇದು ಹಳೇ ಕಥೆ
ಗಂಭೀರ್ ಹಾಗೂ ರಿಷಭ್ ಪಂತ್​​​​​​​​ ನಡುವಿನ ಮುಸುಕಿನ ಗುದ್ದಾಟ ಇದೇ ಮೊದಲಲ್ಲ. 2015ರಿಂದಲೂ ನಡೀತಿದೆ. 2015-16ರ ರಣಜಿ ಟೂರ್ನಿಗೆ ಡೆಲ್ಲಿ ತಂಡದ ಪ್ರಕಟಿಸಬೇಕಿತ್ತು. ಇದೇ ಸಮಯದಲ್ಲೇ ಗಂಭೀರ್, ಡೆಲ್ಲಿ ತಂಡದ ನಾಯಕರಾಗಿದ್ದರು. ಅಜಯ್ ಜಡೇಜಾ ಕೋಚ್ ಆಗಿದ್ದರು. ಈ ವೇಳೆ ಪಂತ್ ಆಯ್ಕೆಗೆ ಸೆಲೆಕ್ಟರ್ಸ್ ಒಲವು ಹೊಂದಿದ್ರು. ಗಂಭೀರ್​ಗೆ ಪಂತ್ ಬೇಕಿರಲಿಲ್ಲ. ಈ ವಿಚಾರವಾಗಿ ಸೆಲೆಕ್ಟರ್ಸ್ ಹಾಗೂ ಗಂಭೀರ್ ನಡುವೆ ಕೆಲ ಕಾಲ ವಾಗ್ವಾದವೇ ನಡೆದಿತ್ತು. ಈ ವಿಚಾರವನ್ನು ಸ್ವತಃ ಅಂದಿನ ಡೆಲ್ಲಿ ತಂಡದ ಕೋಚ್ ಆಗಿದ್ದ ಅಜಯ್​ ಜಡೇಜಾನೇ ರಿವೀಲ್ ಮಾಡಿದ್ದಾರೆ.
2015ರಿಂದಲೇ ರಿಷಭ್ ಪಂತ್​ ಅಂದ್ರೆ ವಿರೋಧಿಸ್ತಿದ್ದ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆದ ಬಳಿಕವೂ ಅದನ್ನೇ ಮುಂದುವರಿಸಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಹಾಗೂ 2024ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರಿಷಭ್​ ಪಂತ್​ ಬದಲಿಗೆ ಕೆ.ಎಲ್.ರಾಹುಲ್​ ಫಸ್ಟ್​ ಚಾಯ್ಸ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದ್ದರು.
ಒಟ್ನಲ್ಲಿ, ಕೋಚ್ ಆಗಿ ತಮ್ಮದೇ ರಾಜ್ಯದ ಆಟಗಾರನ ಯಶಸ್ಸಿನ ಬಗ್ಗೆ ಮೆಚ್ಚಿಕೊಳ್ಳಬೇಕಾದ ಗಂಭೀರ್, ಪ್ರತಿ ವಿಚಾರದಲ್ಲೂ ಆತನಿಗೆ ಅಡ್ಡಿಯಾಗ್ತಿದ್ದಾರೆ. ಇದು ರಿಷಭ್ ಪಂತ್ ಅಂದ್ರೆ ಗಂಭೀರ್​ಗೆ ಹೊಟ್ಟೆ ಕಿಚ್ಚು ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: ಕ್ರಿಕೆಟ್ ಕಾಶಿಯಲ್ಲಿ ಗೆಲುವು ಸುಲಭ ಇಲ್ಲ.. ಟೀಂ ಇಂಡಿಯಾಗೆ ಇದೆ 5 ಸವಾಲುಗಳು..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ