/newsfirstlive-kannada/media/post_attachments/wp-content/uploads/2025/01/GAMBHIR-3.jpg)
ಟೀಂ ಇಂಡಿಯಾದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೇವಲ ವದಂತಿ. ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ನಾವು ಒಗ್ಗಟ್ಟಿನಿಂದ ಗುರಿ ಮುಟ್ಟುತ್ತೇವೆ ಅಂತಾ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಳೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾ-ಭಾರತ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಟೆಸ್ಟ್ ಪಂದ್ಯ ನಡೆಯಲಿದೆ. ಹೀಗಾಗಿ ಸುದ್ದಿಗೋಷ್ಟಿ ನಡೆಸಿ ಗಂಭೀರ್, ಕೆಲವು ವಿಚಾರಗಳ ಬಗ್ಗೆ ಮಾತನಾಡಿದರು. ಸಿಡ್ನಿ ಟೆಸ್ಟ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಆಡುವುದಿಲ್ಲ ಎಂಬ ವರದಿಗಳು ಕೇಳಿಬಂದಿದ್ದವು.
ಇದನ್ನೂ ಓದಿ:ರೋಹಿತ್ ಜೊತೆ ಬಿರುಕು, ಡ್ರೆಸ್ಸಿಂಗ್ ರೂಮ್‌ನಲ್ಲಿ ಗಲಾಟೆ -ಸುದ್ದಿಗೋಷ್ಟಿ ನಡೆಸಿ ಗಂಭೀರ್ ಹೇಳಿದ್ದೇನು?
ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್.. ಇದಕ್ಕೆ ‘ನಾಳೆ ಪಿಚ್ ಪರೀಕ್ಷೆ ನಡೆಸುತ್ತೇವೆ, ಆನಂತರವೇ ಆಡುವ ಹನ್ನೊಂದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಗಲಾಟೆ ಆಗಿದೆ ಅನ್ನೋ ವಿಚಾರಕ್ಕೆ ಉತ್ತರಿಸಿದ ಅವರು.. ಡ್ರೆಸ್ಸಿಂಗ್ ರೂಮ್ ಚರ್ಚೆಗಳನ್ನು ಯಾರೂ ಸಾರ್ವಜನಿಕಗೊಳಿಸಬಾರದು. ಕೋಚ್ ಮತ್ತು ಆಟಗಾರನ ನಡುವಿನ ಚರ್ಚೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತ್ರ ಉಳಿಯಬೇಕು. ಹೆಚ್ಚಾಗಿ ಕೇಳಿಬರುತ್ತಿರುವ ಮಾತುಗಳು ಸತ್ಯವಲ್ಲ. ಅದು ವರದಿ ಅಷ್ಟೇ. ಟೀಂ ಇಂಡಿಯಾ ಸುರಕ್ಷಿತವಾಗಿದೆ. ಟೆಸ್ಟ್ ಗೆಲ್ಲುವ ತಂತ್ರ ಹೊರತುಪಡಿಸಿ ಹಿರಿಯ ಬ್ಯಾಟ್ಸ್‌ಮನ್ ಕೊಹ್ಲಿ ಮತ್ತು ನಾಯಕ ರೋಹಿತ್ ಜೊತೆ ಬೇರೆ ಯಾವುದರ ಬಗ್ಗೆಯೂ ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:Jio ಹೆಸರಲ್ಲಿ ಈ ಮೆಸೇಜ್ ಬಂದರೆ ಹುಷಾರ್.. ಈಗಲೇ ನಿಮ್ಮ ಫೋನ್ ಚೆಕ್ ಮಾಡಿ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್