BBK11: ನನ್ನಿಂದ ದೂರ ಇದ್ರೆನೇ ಒಳ್ಳೆದು.. ನೇರವಾಗಿಯೇ ಮಂಜಣ್ಣನಿಗೆ ವಾರ್ನಿಂಗ್​ ಕೊಟ್ಟ ಗೌತಮಿ

author-image
Veena Gangani
Updated On
BBK11: ನನ್ನಿಂದ ದೂರ ಇದ್ರೆನೇ ಒಳ್ಳೆದು.. ನೇರವಾಗಿಯೇ ಮಂಜಣ್ಣನಿಗೆ ವಾರ್ನಿಂಗ್​ ಕೊಟ್ಟ ಗೌತಮಿ
Advertisment
  • 13ನೇ ವಾರಕ್ಕೆ ಕಾಲಿಡಲು ಸಜ್ಜಾದ ಬಿಗ್​ಬಾಸ್​ ಸೀಸನ್ 11
  • ಬಿಗ್​ಬಾಸ್​ ಮನೆಯಲ್ಲೇ ಕೊನೆಯಾಯ್ತು ಗೌತಮಿ ಗೆಳೆತನ
  • ಮಂಜು ಅವರನ್ನು ಬಿಟ್ಟು ಏಕಾಂಗಿಯಾಗಿ ಆಟ ಆಡ್ತಾರಾ ಗೌತಮಿ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 13ನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ವಾರ ಕಳೆದಂತೆ ಬಿಗ್​ಬಾಸ್​ ಮನೆಯಿಂದ ಒಬ್ಬೊಬ್ಬರಾಗಿ ಆಚೆ ಹೋಗಲಿದ್ದಾರೆ. ಆದರೆ ಇದರ ಮಧ್ಯೆ ಮತ್ತೆ ಮಂಜಣ್ಣ ಹಾಗೂ ಗೌತಮಿ ಸ್ನೇಹದ ಮಧ್ಯೆ ಬಿರುಕು ಮೂಡಿದೆ.

ಹೌದು, ಬಿಗ್​ಬಾಸ್​ ಶುರುವಾದಾಗಿನಿಂದ ಈ ಇಬ್ಬರು ಇಲ್ಲಿಯವರೆಗೂ ಜೋಡಿಯಾಗೇ ಇದ್ದರು. ಆದರೆ ಏಕಾಏಕಿ ಈ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಬಿಗ್​ಬಾಸ್ ಮನೆಯಲ್ಲಿ ಮಂಜು ಹಾಗೂ ಗೌತಮಿ ಜಾಧವ್​ ಗೆಳತನದ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಗೆಳತಿ ಗೆಳತಿ ಎನ್ನುತ್ತಲೇ ಗೌತಮಿಗೆ ಸಪೋರ್ಟ್​ ಮಾಡಿಕೊಂಡು ಬರುತ್ತಿದ್ದ ಮಂಜು ಸದ್ಯ ಶಾಕ್​ನಲ್ಲಿದ್ದಾರೆ. ಪ್ರತಿಯೊಂದು ವಿಚಾರಲ್ಲೂ ಗೆಳತಿ ಬಗ್ಗೆ ವಹಿಸಿಕೊಂಡು ಮಾತಾಡುತ್ತಿದ್ದ ಮಂಜು ಸದ್ಯ ಗೌತಮಿ ಖಡಕ್​ ಮಾತಿಗೆ ಕಕ್ಕಾಬಿಕ್ಕಿಯಾಗಿದ್ದಾರೆ.

ಇದನ್ನೂ ಓದಿ:ಅಮೆರಿಕಾಗೆ ಹೊರಟ ಶಿವಣ್ಣ.. ಹರಕೆ ಹೊತ್ತು ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು; ಹೇಳಿದ್ದೇನು?​

publive-image

ಪ್ರತಿ ವಿಚಾರಕ್ಕೂ ಮಂಜಣ್ಣ ಮೇಲೆ ಗೌತಮಿ ಕೋಪಗೊಳ್ಳುತ್ತಿದ್ದಾರೆ. ಕ್ಯಾಪ್ಟನ್​ ಪಟ್ಟ ಸಿಗುತ್ತಿದ್ದಂತೆ ಗೌತಮಿ ಬದಲಾಗಿ ಬಿಟ್ರಾ ಎಂಬ ಅನುಮಾನ ವಿಕ್ಷಕಗೆ ಮೂಡಿತ್ತು. ಆದರೆ ಈಗ ಮತ್ತೆ ಗೌತಮಿ ನೀವು ನನ್ನ ಜೊತೆಗೆ ಇರಬೇಡಿ. ನೀವು ಇದ್ದರೆ ನಮಗೆ ಕಿರಿಕಿರಿ ಆಗುತ್ತೆ ಅಂತ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಮಂಜಣ್ಣ ಅಲ್ಲಿಂದ ಎದ್ದು ಹೇಗಿದ್ದಾರೆ. ಇದಾದ ಬಳಿಕ ಮತ್ತೆ ಗೌತಮಿ ಬಳಿ ಬಂದು ಗೆಳತಿ ಅಂತ ಮಾತಾಡಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಗೌತಮಿ ಆಟ ಚೇಂಚ್​ ಆಗುತ್ತಾ ಅಥವಾ ಮತ್ತೆ ಗೆಳೆಯ ಅಂತ ಮಂಜು ಅವರ ಹಿಂದೆ ಹೋಗುತ್ತಾರಾ ಅಂತ ಆಟದ ಮೂಲಕ ತಿಳಿದುಕೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment