BBK11: ಗೌತಮಿ VS ಶೋಭಾ ಶೆಟ್ಟಿ ನಡುವೆ ಪಾಸಿಟಿವಿಟಿ ಗಲಾಟೆ; ಬಿಗ್​ಬಾಸ್ ಮನೆಯಲ್ಲಿ ಹೊಸ ಫೈಟ್‌!

author-image
Veena Gangani
Updated On
BBK11: ಗೌತಮಿ VS ಶೋಭಾ ಶೆಟ್ಟಿ ನಡುವೆ ಪಾಸಿಟಿವಿಟಿ ಗಲಾಟೆ; ಬಿಗ್​ಬಾಸ್ ಮನೆಯಲ್ಲಿ ಹೊಸ ಫೈಟ್‌!
Advertisment
  • 50 ದಿನ ಪೂರೈಸಿದ ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ
  • ಬಿಗ್​ಬಾಸ್​ ಮನೆಗೆ ಬರುತ್ತಿದ್ದಂತೆ ಗೌತಮಿಯನ್ನೇ ಟಾರ್ಗೆಟ್ ಮಾಡಿದ್ರಾ ಶೋಭಾ
  • ಗೌತಮಿ ಜಾಧವ್​ ಮತ್ತು ಶೋಭಾ ಶೆಟ್ಟಿ ನಡುವೆ ನಡೀತು ದೊಡ್ಡ ಮಾತಿನ ಚಕಮಕಿ

ಕನ್ನಡದ ಬಿಗ್​ಬಾಸ್​ ಸೀಸನ್​ 11 8ನೇ ವಾರಕ್ಕೆ ಕಾಲಿಟ್ಟಿದೆ. 50 ದಿನಗಳನ್ನು ಪೂರೈಸಿದ ಹೊತ್ತಲ್ಲಿ ಬಿಗ್​ಬಾಸ್​ ಮನೆಗೆ ಮತ್ತೆರೆಡು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲೆಂದೇ ಇಬ್ಬರು ಸಖತ್​ ಸ್ಟ್ರಾಂಗ್​ ಕಂಟೆಸ್ಟೆಂಟ್​ಗಳನ್ನು ದೊಡ್ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯನ್ನೇ ‘ಅಲ್ಲಾಡಿಸಿದ’ ಶೋಭಾ ಆರ್ಭಟ; ಉಗ್ರಂ ಮಂಜು ಪ್ಲ್ಯಾನ್ ಫೇಲ್ ಆಯ್ತಾ?

ಹೌದು, 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಎಂಟ್ರಿ ಕೊಟ್ಟಿದ್ದಾರೆ. ಇವರ ಜೊತೆಗೆ ಶೋಭಾ ಶೆಟ್ಟಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇನ್ನು, ಬಿಗ್​ಬಾಸ್​ ಮನೆಗೆ ಈ ಇಬ್ಬರು ಎಂಟ್ರಿ ಕೊಡುತ್ತಿದ್ದಂತೆ ಮನೆ ಮಂದಿ ಫುಲ್​ ಶಾಕ್​ ಆದರು. ಇದಾದ ಬಳಿಕ ಶೋಭಾ ಶೆಟ್ಟಿ ಅವರು ತಮ್ಮ ಬಗ್ಗೆ ಕಿರು ಪರಿಚಯ ಮಾಡಿಕೊಂಡಿದ್ದರು.

ಇದನ್ನೂ ಓದಿ: ಅಬ್ಬಾ.. ಸಿಕ್ಕಾಪಟ್ಟೆ ವೈರಲ್ ಆದ ನೀತಾ ಅಂಬಾನಿ ಪಾಪ್​ಕಾರ್ನ್​ ಬ್ಯಾಗ್​! ಇದರ ಬೆಲೆ ಎಷ್ಟು ಗೊತ್ತಾ?

ಇನ್ನು 50ನೇ ದಿನಕ್ಕೆ ದೊಡ್ಮನೆಗೆ ಕಾಲಿಟ್ಟ ಶೋಭಾ ಶೆಟ್ಟಿ ಹಾಗೂ ಸಖತ್​ ಪಾಜಿಟಿವ್ ಆಗಿದ್ದ ಗೌತಮಿ ಜಾಧವ್​ ನಡುವೆ ಬಿಗ್​ ವೈಟ್​ ನಡೆದಿದೆ. 2 ವೈಲ್ಡ್ ಕಾರ್ಡ್ ಎಂಟ್ರಿಯ ಜೊತೆಗೆ ಉಳಿದವರ ಆಟದ ವೈಖರಿಗೆ ಹೊಸ ತಿರುವು ಸಿಕ್ಕಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯ ಒಂದೊಂದು ಟಾಸ್ಕ್ ಕೂಡ ಒಂದೊಂದು ಜಗಳಕ್ಕೆ ವೇದಿಕೆ ಆಗುತ್ತಿದೆ.

ಶೋಭಾ ಶೆಟ್ಟಿ ಎಂಟ್ರಿ ಕೊಟ್ಟು ಮೊದಲು ಹೇಳಿದ್ದೆ ಗೌತಮಿ ಜಾದವ್ ಮುಖವಾಡ ಧರಿಸಿದ್ದಾರೆ. ಆ ಮುಖವಾಡ ಕಳೋಚೋದೆ ನನ್ನ ಉದ್ದೇಶ ಎಂದಿದ್ದರು. ಆ ಡೈಲಾಗ್​ನಿಂದ ಇಡೀ ಮನೆಯ ವಾತಾವರಣದಲ್ಲಿ ಕೊಂಚ ಬದಲಾವಣೆ ಕಂಡಿತ್ತು. ಇದೀಗ ಮತ್ತೆ ಗೌತಮಿ ಮತ್ತು ಶೋಭಾ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ.

publive-image

ಹೇಳಿ ಕೇಳಿ ಶೋಭಾ ಶೆಟ್ಟಿ ಸಖತ್​ ಸ್ಟ್ರಾಂಗ್​ ಕಂಟೆಸ್ಟೆಂಟ್. ಈ ಹಿಂದೆಯೇ ತೆಲುಗು ಬಿಗ್​​ಬಾಸ್ ಸೀಸನ್ 7ಗೆ ಎಂಟ್ರಿ ಕೊಟ್ಟು ಸಖತ್ ಮಿಂಚಿದ್ದರು. ಅದರಲ್ಲೂ ತೆಲುಗು ಸೀಸನ್​ 7ಕ್ಕೆ ಹೋಗಿದ್ದ ಶೋಭಾ ಶೆಟ್ಟಿ ಕೊಟ್ಟು ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಅಲ್ಲದೇ ಸ್ಪರ್ಧಿಗಳಿಗೆ ನೇರ ನೇರ ಟಾಂಗ್​ ಕೊಟ್ಟಿದ್ದರು. ಎಲ್ಲರಿಗಿಂತ ನಾನೆಷ್ಟು ಸ್ಟ್ರಾಂಗ್​ ಅಂತ ಫ್ರೂವ್​ ಮಾಡಿದ್ದರು. 98 ದಿನಗಳ ಕಾಲ ತೆಲುಗು ಬಿಗ್​ಬಾಸ್ ಮನೆಯಲ್ಲಿ ಉಳಿದುಕೊಂಡು ಪ್ರಬಲ ಪೈಪೋಟಿ ನೀಡಿದ್ದರು.

ಈಗ ಅಷ್ಟೇ ರೆಬೆಲ್ ಕನ್ನಡದ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟು ಮನೆಯಲ್ಲಿರೋ ಸ್ಪರ್ಧಿಗಳಿಗೆ ಟಾಂಗ್​ ಕೊಡುತ್ತಿದ್ದಾರೆ. ಸದ್ಯ ಶೋಭಾ ಶೆಟ್ಟಿ ಬಿಗ್​ಬಾಸ್​ ಮನೆಗೆ ಕಾಲಿಟ್ಟು ಜಸ್ಟ್ ಎರಡು ದಿನ ಮಾತ್ರ ಕಳೆದಿದೆ. ಆದರೆ ಈ ಎರಡು ದಿನದಲ್ಲೇ ಇಷ್ಟೊಂದು ನೇರ ನೇರವಾಗಿ ಮಾತಾಡಿ ಸ್ಪರ್ಧಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶೋಭಾ ಬಿಗ್​ಬಾಸ್​ ಮನೆಯಲ್ಲಿ ಯಾವೆಲ್ಲಾ ಟಾಸ್ಕ್​ ಆಡಲಿದ್ದಾರೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment