/newsfirstlive-kannada/media/post_attachments/wp-content/uploads/2025/04/Gouthamii-Jadav.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಗೌತಮಿ ಜಾಧವ್ ಸಖತ್ ಖುಷಿಯಲ್ಲಿ ಇದ್ದಾರೆ.
ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..
ಬಿಗ್ಬಾಸ್ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ನಟಿ ಗೌತಮಿ ಜಾಧವ್.
ಕನ್ನಡದ ಬಿಗ್ಬಾಸ್ ಸೀಸನ್ 11 ಮುಗಿದ ಬಳಿಕ ನಟಿ ಗೌತಮಿ ಜಾಧವ್ ತಮ್ಮ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಆಗಾಗ ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಡುತ್ತಾ ಇರುತ್ತಾರೆ.
ಇದೀಗ ನಟಿ ಗೌತಮಿ ಜಾಧವ್ ತಮ್ಮ ಪತಿಯ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ. ಹೌದು, ಸತ್ಯ ಸೀರಿಯಲ್ ಮೂಲಕ ಫೇಮಸ್ ಆಗಿ, ಬಿಗ್ಬಾಸ್ ಮನೆಗೆ ಕಾಲಿಟ್ಟು ಪಾಸಿಟಿವ್ ಗೌತಮಿಯಾಗಿ ಹೊರ ಬಂದಿದ್ದರು.
ಇನ್ನೂ, ನಿನ್ನೆ ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಗೌತಮಿ ಜಾಧವ್ ಪತಿಗಾಗಿ ಬರ್ತ್ ಡೇ ಪಾರ್ಟಿಯನ್ನು ಅರೇಂಜ್ ಮಾಡಿದ್ದರು.
ಗೌತಮಿ ಪತಿಯ ಬರ್ತ್ ಡೇಯನ್ನು ನೇಚರ್ ರೆಸಾರ್ಟ್ನಲ್ಲಿ ಮಾಡಿದ್ದಾರೆ. ಗ್ರ್ಯಾಂಡ್ ಬರ್ತ್ ಡೇ ವಿಡಿಯೋವನ್ನು ಹಂಚಿಕೊಂಡಿರೋ ನಟಿ ಹ್ಯಾಪಿ ಬರ್ತ್ ಡೇ ಅಭಿ ಅಂತ ಬರೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಆ ವಿಡಿಯೋದಲ್ಲಿ ಗೌತಮಿ ಕುಟುಂಬಸ್ಥರು ನೇಚರ್ ರೆಸಾರ್ಟ್ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ. ಸದ್ಯ ನಟಿ ಗೌತಮಿ ಜಾಧವ್ ಅವರು ಬಿಗ್ಬಾಸ್ನಿಂದ ಆಚೆ ಬಂದ ಮೇಲೆ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಡುತ್ತಾರಾ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ