/newsfirstlive-kannada/media/post_attachments/wp-content/uploads/2025/01/GAVI-6.jpg)
ಕೊಪ್ಪಳದ ನಡೆದಾಡುವ ದೇವರು.. ಆರಾಧ್ಯದೈವ.. ಗವಿಸಿದ್ದೇಶ್ವರ ಅಜ್ಜನ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಆರಂಭವಾಗೋ ಜಾತ್ರಾ ಮಹೋತ್ಸವದ ಕಲರವ ಮೂರು ದಿನಗಳ ಕಾಲ ನಡೆಯಲಿದೆ..
ಕೊಪ್ಪಳದಲ್ಲಿ ಈಗ ಜಾತ್ರೆಯ ಸಂಭ್ರಮ.. ಅಜ್ಜಯ್ಯನ ಜಾತ್ರಾ ಮಹೋತ್ಸವದ ಕಲರವ.. ಕೊಪ್ಪಳದ ಆರಾಧ್ಯದೈವ ಗವಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಕಳೆಗಟ್ಟಿದೆ.. ದಕ್ಷಿಣ ಭಾರತದ ಕುಂಭ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ಗವಿಸಿದ್ದೇಶ್ವರರ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ.
ಕೊಪ್ಪಳದ ಗವಿಮಠದ ಅಜ್ಜಯ್ಯನ ಜಾತ್ರೆಗೆ ಕ್ಷಣಗಣನೆ!
ಪ್ರತಿ ವರ್ಷದಂತೆ ಈ ಬಾರಿಯೂ ಗವಿಸಿದ್ದಪ್ಪನ ಅಜ್ಜನ ಜಾತ್ರೆ ಬಹಳ ಅದ್ಧೂರಿಯಾಗಿ ಆರಂಭಗೊಂಡಿದೆ. ಮೊನ್ನೆಯಷ್ಟೆ ಮಠದಲ್ಲಿ ಅದ್ಧೂರಿಯಾಗಿ ತೆಪ್ಪೋತ್ಸವ ಜರುಗಿದ್ದು, ಸಾವಿರಾರು ಜನ ತೆಪ್ಪೋತ್ಸವ ಕಣ್ತುಂಬಿಕೊಂಡ್ರು. ನಿನ್ನೆ ರಾತ್ರಿಯಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸ್ತಿದ್ದಾರೆ.
ಇದನ್ನೂ ಓದಿ:ಪ್ರಯಾಗರಾಜ್‌ಗೆ ಭಕ್ತರ ಪ್ರವಾಹ.. ನಾಗಸಾಧುಗಳಿಗೆ ಮೊದಲ ಪುಣ್ಯ ಸ್ನಾನ ಯಾಕೆ? ಏನಿದರ ವಿಶೇಷ?
ಇಂದಿನಿಂದ ಆರಂಭವಾಗೋ ಜಾತ್ರಾ ಮಹೋತ್ಸವ ಸತತ ಮೂರು ದಿನಗಳ ಕಾಲ ನಡೆಯಲಿದೆ. ಭಕ್ತರಿಗಾಗಿಯೇ ವಸತಿ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡ್ಲಾಗಿದೆ.. ವಿಶೇಷವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಪ್ರಸಾದದ ವ್ಯವಸ್ಥೆ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ಸಜ್ಜೆ, ರಾಗಿ, ಜೋಳದ ರೊಟ್ಟಿ, ಬಗೆ ಬಗೆಯ ಉಪ್ಪಿನಕಾಯಿಯನ್ನ ಭಕ್ತರು ಅರ್ಪಿಸಿದ್ದಾರೆ. ಜೊತೆಗೆ 200 ರಿಂದ 300 ಕ್ವಿಂಟಲ್ ಮಾದಲಿ.. 50 ಕ್ವಿಂಟಲ್ ಶೇಂಗಾ ಹೋಳಿಗೆಯನ್ನ ಭಕ್ತರು ಸಲ್ಲಿಸಿದ್ದಾರೆ.
ಒಟ್ಟಾರೆ.. ಅಜ್ಜನ ಜಾತ್ರೆಯಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತೆ. ಅದ್ರಂತೆ ಈ ಬಾರಿ ವಿಶೇಷವಾಗಿ ಮಠದ ಆವರಣದಲ್ಲಿ 200ಕ್ಕೂ ಹೆಚ್ಚು ಬಾಣಸಿಗರು ಪ್ರಸಾದ ತಯಾರು ಮಾಡಿದ್ದಾರೆ.
ಇದನ್ನೂ ಓದಿ: ಗವಿಗಂಗಾಧರನ ಸ್ಪರ್ಶಿಸದ ಸೂರ್ಯರಶ್ಮಿ.. 3 ನಿಮಿಷಗಳಲ್ಲಿ ಆಗಿದ್ದೇನು? ಕಾದಿದ್ಯಾ ಗಂಡಾಂತರ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ